ADVERTISEMENT

ಗ್ರಾಮಸ್ಥರಿಂದ ತೆಂಗಿನಕಾಯಿ ದೇಣಿಗೆ

ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2015, 11:16 IST
Last Updated 27 ಜನವರಿ 2015, 11:16 IST

ಚನ್ನರಾಯಪಟ್ಟಣ: ಶ್ರವಣಬೆಳಗೊಳ­ದಲ್ಲಿ ನಡೆಯಲಿರುವ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿವಿಧ ಗ್ರಾಮಗಳ ಗ್ರಾಮಸ್ಥರು ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಸೋಮವಾರ 9,700 ತೆಂಗಿನಕಾಯಿ ದೇಣಿಗೆ ನೀಡಿದರು.

ಕಾಂತರಾಜಪುರ ಗ್ರಾಮಸ್ಥರು 6,800 ತೆಂಗಿನಕಾಯಿ ಹಾಗೂ 400 ಕೊಬ್ಬರಿ, ಸುಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ 2 ಸಾವಿರ ತೆಂಗಿನಕಾಯಿ ಹಾಗೂ ಜನಿವಾರ ಗ್ರಾಮದ ಕಾಳೇಗೌಡ ಎಂಬುವವರು 500 ತೆಂಗಿನಕಾಯಿ ದೇಣಿಗೆ ನೀಡಿದರು.
ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಗ್ರಾಮಸ್ಥರು ಸದ್ಭಾವನೆಯಿಂದ ನೀಡುತ್ತಿರುವ ದೇಣಿಗೆ ಸಮ್ಮೇಳನದ ಯಶಸ್ಸಿನ ದಿಕ್ಸೂಚಿ ಎಂದರು.

ಶಾಸಕ ಸಿ.ಎನ್‌. ಬಾಲಕೃಷ್ಣ ಮಾತನಾಡಿ, ಗ್ರಾಮಸ್ಥರು ನೀಡುತ್ತಿರುವ ತೆಂಗಿನಕಾಯಿ, ಕೊಬ್ಬರಿಯಿಂದ ಡುಗೆ, ಉಪಾಹಾರ ತಯಾರಿಸಲು ಅನುಕೂಲ­ವಾಗಲಿದೆ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ವಿಜಯಾ, ತಹಶೀಲ್ದಾರ್‌ ಕೆ. ಕೃಷ್ಣ, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಲ್‌. ಶ್ರೀಧರ್‌, ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಎಚ್‌.ಎನ್‌. ಲೋಕೇಶ್‌, ಎಸ್‌.ಆರ್‌. ಲೋಕೇಶ್, ಎಸ್‌.ಎಂ. ಲಕ್ಷ್ಮಣ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.