ADVERTISEMENT

‘ದೇಶದ ಜನರ ಋಣ ತೀರಿಸಿಲ್ಲ’

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 6:59 IST
Last Updated 9 ಜನವರಿ 2017, 6:59 IST

ಹಾಸನ:  ರಾಜಕೀಯದಲ್ಲಿದ್ದ ಅವಧಿಯಲ್ಲಿ ನಾಡು ಮತ್ತು ದೇಶದ ಜನರ ಋಣವನ್ನು ಪೂರ್ತಿಯಾಗಿ ತೀರಿಸಲಾಗಿಲ್ಲ. ಅದನ್ನು ಮುಗಿಸಿಯೇ ಹೋಗುವೆ ಎಂದು ಸಂಸದ  ಎಚ್.ಡಿ. ದೇವೇಗೌಡರು ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮಾರಂಭವೊಂದರಲ್ಲಿ ನಿಡುಮಾಮಿಡಿ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ದೇವೇಗೌಡರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದಗೌಡರು, ‘ನನಗೀಗ 84 ವರ್ಷ. ಕುಲದೇವರು ಈಶ್ವರ ಕೊಟ್ಟಿರುವ ಆಯಸ್ಸಿನಲ್ಲಿ ಇನ್ನೂ ಜನರ ಋಣ ತೀರಿಸಬೇಕು ಎಂದಿದ್ದರೆ, ಅದನ್ನು ಮಾಡಿಯೇ ಹೋಗುವೆ’ ಎಂದರು.

ನಿಡುಮಾಮಿಡಿ ಶ್ರೀ ವ್ಯಕ್ತಪಡಿಸಿದ ಎಲ್ಲಾ ಭಾವನೆಗಳಿಗೆ ಸಹಮತ ವ್ಯಕ್ತಪಡಿಸಿದ ಗೌಡರು, ಅವರು ಯಾವಾಗಲೂ ವಾಸ್ತವಾಂಶವನ್ನು ನಿರ್ಭಯವಾಗಿ ಮಾತನಾಡುವವರು. 40 ವರ್ಷದಿಂದ ಅವರನ್ನು ಕಂಡಿದ್ದು, ತಮಗಾಗಿ ಏನನ್ನೂ ಮಾಡಿಕೊಂಡಿಲ್ಲ. ಅವರ ಬಗ್ಗೆ ತುಂಬಾ ಗೌರವವಿದೆ. ಮಾತು ಕಠಿಣವಾದರೂ ಅವರ ಮಾತಿನಲ್ಲಿ ವಾಸ್ತವಾಂಶ ಇರಲಿದೆ ಎಂದು ನುಡಿದರು.

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಕುರಿತು, ಈಗಲೇ ಏನನ್ನೂ ಊಹಿಸಲಾಗದು ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.