ADVERTISEMENT

ಬಾಳೆಹಣ್ಣು ಕೆ.ಜಿ.ಗೆ ₹ 10 ಏರಿಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 8:53 IST
Last Updated 5 ಡಿಸೆಂಬರ್ 2017, 8:53 IST
ಬಾಳೆಹಣ್ಣು
ಬಾಳೆಹಣ್ಣು   

ಹಾಸನ : ವಾರದ ಹಿಂದೆ ಮಾರುಕಟ್ಟೆಯಲ್ಲಿ ಕೆ.ಜಿ. ₹ 50ಕ್ಕೆ ಮಾರಾಟವಾಗುತ್ತಿದ್ದ ಬಾಳೆಹಣ್ಣು ಈ ವಾರ ₹ 60 ಕ್ಕೆ ಏರಿದೆ. ಹಾಸನದ ಮಾರುಕಟ್ಟೆಗೆ ಚಾಮರಾಜನಗರ, ಮಂಡ್ಯ, ಮೈಸೂರು, ಚನ್ನರಾಯಪಟ್ಟಣ, ಅರಕಲಗೂಡು, ಸಕಲೇಶಪುರ ಹಾಗೂ ಬೇಲೂರಿನಿಂದ ಬಾಳೆಹಣ್ಣು ಆವಕವಾಗುತ್ತದೆ.

ಹಬ್ಬ, ಜಾತ್ರೆ, ಮದುವೆ ಮತ್ತಿತರೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವ ಕಾರಣ ಬಾಳೆ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ದರ ಹೆಚ್ಚಳದಿಂದ ಗ್ರಾಹಕರು ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.

ಬೆಲೆ ಏರಿಕೆ ರೈತರಿಗೆ ಲಾಭ ತಂದುಕೊಟ್ಟರೆ, ಗ್ರಾಹಕರಿಗೆ ತುಸು ಹೊರೆಯಾಗಿದೆ. ‘ಹವಾಮಾನ ವೈಪರೀತ್ಯದಿಂದ ಜಿಲ್ಲೆಗೆ ಆಮದಾಗುವ ಬಾಳೆಹಣ್ಣು ಕಡಿಮೆ ಆಗಿರುವ ಕಾರಣ ಬೆಲೆ ಏರಿಕೆಯಾಗಿದೆ. ಹಣ್ಣು ಬರುವುದು ಕಡಿಮೆಯಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಬಾಳೆಹಣ್ಣು ವ್ಯಾಪಾರಿ ಅಕ್ಮಲ್ ಪಾಷ.

ADVERTISEMENT

ಉಳಿದಂತೆ ಕೆಲವೊಂದು ತರಕಾರಿಗಳಲ್ಲಿ ಏರಿಳಿತವಾಗಿದೆ. ಕಳೆದ ವಾರ ಕೆ.ಜಿ ₹ 50 ಇದ್ದ ಈರುಳ್ಳಿ, ಈ ವಾರ ₹ 40ಕ್ಕೆ ಮಾರಾಟವಾಗುತ್ತಿದೆ. ಬೀನ್ಸ್ ಕೆ.ಜಿ ₹ 40, ಆಲೂಗೆಡ್ಡೆ ₹ 20, ಕ್ಯಾರೆಟ್ ₹ 80, ಹಾಗಲಕಾಯಿ ₹ 40, ದಪ್ಪ ಮೆಣಸಿನ ಕಾಯಿ ₹ 60, ಟೊಮೆಟೊ ₹ 30, ಅವರೆ ಕಾಯಿ ₹ 40, ನುಗ್ಗೆಕಾಯಿ ₹ 100 ರಂತೆ ಮಾರಾಟವಾಗುತ್ತಿದೆ. ಕೊತ್ತಂಬರಿ 3 ಕಂತೆಗೆ ₹ 10, ಪಾಲಾಕ್, ಲಾಳಿ ಮತ್ತು ದಂಟು ಸೊಪ್ಪು ₹ 10ಕ್ಕೆ 4 ಕಂತೆಯಂತೆ ಲಭ್ಯ ಇದೆ.

ಹಣ್ಣುಗಳ ದರದಲ್ಲಿ ವ್ಯತ್ಯಾಸವಾಗಿಲ್ಲ. ಸೇಬು ಕೆ.ಜಿ ಗೆ ₹ 100, ದಾಳಿಂಬೆ ₹ 100, ಸೀತಾಫಲ ₹ 100, ಅನಾನಸ್ ₹ 50, ದ್ರಾಕ್ಷಿ ₹ 180, ಪಪ್ಪಾಯ ಮತ್ತು ಕಲ್ಲಂಗಡಿ ₹ 30, ಸಪೋಟ ₹ 100ಕ್ಕೆ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.