ADVERTISEMENT

ಬೀನ್ಸ್‌ ಕೆ.ಜಿ.ಗೆ ₹ 10 ಏರಿಕೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 10:30 IST
Last Updated 27 ಫೆಬ್ರುವರಿ 2018, 10:30 IST
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ   

ಹಾಸನ: ವಾರದ ಹಿಂದೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ₹ 30ಕ್ಕೆ ಮಾರಾಟವಾಗುತ್ತಿದ್ದ ಬೀನ್ಸ್‌, ಈ ವಾರ ₹ 40ಕ್ಕೆ ಮಾರಾಟವಾಗುತ್ತಿದ್ದು, ₹ 10 ಏರಿಕೆಯಾಗಿದೆ. ‘ತುಮಕೂರು ಮತ್ತು ಬೆಂಗಳೂರಿನಿಂದ ಹಾಸನ ಮಾರುಕಟ್ಟೆಗೆ ಬೀನ್ಸ್‌ ಆಮದು ಮಾಡಿಕೊಳ್ಳಲಾಗುತ್ತದೆ. ಮದುವೆ ಹಾಗೂ ಶುಭ ಸಮಾರಂಭಗಳು ಹೆಚ್ಚಿಗೆ ನಡೆಯುತ್ತಿರುವುದರಿಂದ ಬಿನ್ಸ್‌ಗೆ ಬೇಡಿಕೆ ಹೆಚ್ಚಿದೆ. ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬೀನ್ಸ್‌ ಬರುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಶಾಂತಕುಮಾರ್‌.

ಇನ್ನು ವಾರದ ಹಿಂದೆ ಕೆ.ಜಿ. ₹ 30ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿ, ಈ ವಾರ ₹ 5 ಇಳಿಕೆಯಾಗಿದ್ದು, ₹ 25ಕ್ಕೆ ಮಾರಾಟವಾಗುತ್ತಿದೆ. ಬಟಾಣಿ ಒಂದು ಕೆ.ಜಿ.ಗೆ ₹ 40, ಹೂಕೋಸು ₹ 20, ಬೂದಗುಂಬಳ ಕೆ.ಜಿ ₹ 20, ಬೆಳ್ಳುಳ್ಳಿ ಕೆ.ಜಿ.ಗೆ ₹ 30, ಎಲೆ ಕೋಸು ₹ 15, ಅವರೆಕಾಯಿ ಕೆ.ಜಿ.ಗೆ ₹ 40, ಕ್ಯಾರೆಟ್‌ ಒಂದು ಕೆ.ಜಿಗೆ ₹ 30, ಬೆಂಡೇಕಾಯಿ ₹ 30, ಆಲೂಗೆಡ್ಡೆ ₹ 20, ಬದನೆಕಾಯಿ ₹ 20, ಮೆಣಸಿನಕಾಯಿ ₹ 30, ಮೂಲಂಗಿ ₹ 20, ನುಗ್ಗೇಕಾಯಿ ₹ 50ರಂತೆ ಮಾರಾಟವಾದರೆ, ಕೊತ್ತಂಬರಿ ಪಾಲಾಕ್, ಲಾಳಿ, ಕರಿಬೇವು ಮತ್ತು ದಂಟು ಸೊಪ್ಪನ್ನು ಒಂದು ಕಂತೆಗೆ ₹ 5 ರಂತೆ ಮಾರಾಟ ಮಾಡಲಾಗುತ್ತಿದೆ.

ಸಪೋಟ ಒಂದು ಕೆ.ಜಿ.ಗೆ ₹ 60 ರಿಂದ 80, ಬಾಳೆಹಣ್ಣು ₹ 60, ದ್ರಾಕ್ಷಿ ₹ 80, ಮೂಸಂಬೆ ₹ 80, ಸೇಬು ₹ 100, ಸೀತಾಫಲ ₹ 100, ಕಿತ್ತಳೆ ಹಣ್ಣು ₹ 80, ದಾಳಿಂಬೆ ₹ 100, ಕಲ್ಲಂಗಡಿ ₹ 20, ಅನಾನಸ್‌ ₹ 100, ಪಪ್ಪಾಯ ₹ 30 ಮಾರಾಟವಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.