ADVERTISEMENT

90 ಅಡಿ ಆಳದ ಬಾವಿಗೆ ಬಿದ್ದ ವ್ಯಕ್ತಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 8:13 IST
Last Updated 18 ನವೆಂಬರ್ 2017, 8:13 IST

ಅರಸೀಕೆರೆ: ತಾಲ್ಲೂಕಿನ ಗಂಡಸಿ ಹೋಬಳಿ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಹನಿ ನೀರಿಲ್ಲದ 90 ಅಡಿ ಆಳದ ಬಾವಿಗೆ ಆಯತಪ್ಪಿ ಬಿದ್ದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಗುರುವಾರ ಸುರಕ್ಷಿತವಾಗಿ ಮೇಲೆಕ್ಕೆತ್ತಿ ರಕ್ಷಿಸಿದ್ದಾರೆ.

ಗ್ರಾಮದ ನಿವಾಸಿ ನಾಗರಾಜ್‌ (48) ಮುಂಜಾನೆ ಜಮೀನಿಗೆ ತೆರಳುತ್ತಿದ್ದ ವೇಳೆ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ. ಅವರು ನರಳುತ್ತಿರುವ ಶಬ್ದ ಕೇಳಿದ ಅಕ್ಕ–ಪಕ್ಕದ ಜನರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಡಿ.ವೈ.ಎಸ್‌.ಪಿ. ಸದಾನಂದ ತಿಪ್ಪಣ್ಣನವರ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಸಿದ್ರಾಮೇಶ್‌ ಮತ್ತು ಗಂಡಸಿ ಠಾಣೆಯ ಎ.ಎಸ್‌.ಐ ಲಕ್ಷ್ಮಣ್‌ ಸ್ಥಳಕ್ಕೆ ರಕ್ಷಣೆಗೆ ಧಾವಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದು, ಒಟ್ಟುಗೂಡಿ ನಾಗರಾಜ್‌ ಅವರನ್ನು ರಕ್ಷಿಸಿದ್ದಾರೆ. ‘ಆಯತಪ್ಪಿ ಬಾವಿಗೆ ಬಿದ್ದೆ, ದೇವರಂತೆ ಬಂದು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನನಗೆ ಮರುಜನ್ಮ ನೀಡಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.