ADVERTISEMENT

ಅರ್ಹರಿಗೆ ತಲುಪದ ಯೋಜನೆ

ಹಿರೇಕೆರೂರ ತಾ.ಪಂ. ಸಾಮಾನ್ಯ ಸಭೆಯಲ್ಲಿ ಆರೋಪ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 6:20 IST
Last Updated 28 ನವೆಂಬರ್ 2014, 6:20 IST

ಹಿರೇಕೆರೂರ: ಮಧ್ಯವರ್ತಿಗಳ ಹಾವಳಿ ಯಿಂದ ಕೃಷಿ ಇಲಾಖೆಯ ಯೋಜನೆ ಗಳು ಅರ್ಹ ರೈತರಿಗೆ ತಲುಪುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಪಟ್ಟಣದ ತಾ.ಪಂ.ಸಭಾ ಭವನ ದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೃಷಿ ಇಲಾಖೆ ಯೋಜನೆ ಗಳ ಬಗ್ಗೆ ಪ್ರಸ್ತಾಪಿಸಿದ ಸದಸ್ಯ ಶಿವಣ್ಣ ಗಡಿಯಣ್ಣನವರ, ‘ಮಧ್ಯವರ್ತಿಗಳ ಕಾರಣದಿಂದ ಕೃಷಿ ಇಲಾಖೆಯಲ್ಲಿ ಯೋಜನೆಗಳು ಅರ್ಹರಿಗೆ ತಲುಪು ತ್ತಿಲ್ಲ’ ಎಂದು ಆರೋಪಿಸಿದರು.

ಇದಕ್ಕೆ ಇತರ ಕೆಲವು ಸದಸ್ಯರು ದನಿಗೂಡಿಸಿದರು. ‘ಇಲಾಖೆಯಲ್ಲಿ ಅಂತಹ ಕೆಲಸ ಮಾಡುವ ಅಧಿಕಾರಿಗಳ ಬಗ್ಗೆ ತಿಳಿಸಿದರೆ ಸೂಕ್ತ ಕ್ರಮ ಕೈಗೊಳ್ಳ ಲಾಗುವುದು’ ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಮಲ್ಲಾಡದ ತಿಳಿಸಿ, ‘ಬೇಸಿಗೆ ಬೆಳೆಯಾದ ಕಡಲೆ, ಮೆಕ್ಕೆಜೋಳ, ಸೂರ್ಯಕಾಂತಿ ಬೀಜ ಗಳು ಇಲಾಖೆಗೆ ಬಂದಿವೆ. ನೀರಾವರಿ ಇರುವ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ತಾಲ್ಲೂಕಿನಲ್ಲಿ ಪ್ರೌಢ ಶಾಲೆಗಳ ಶಿಕ್ಷಕರ ಕೊರತೆಯನ್ನು ಸರಿಪಡಿಸಿ ಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸರ್ಕಾರದ ಸೌಲಭ್ಯ ಗಳು ಅರ್ಹರಿಗೆ ತಲುಪಿಸಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷೆ ಪ್ರಭಾವತಿ ಕುಲಕರ್ಣಿ ಸಭೆಯಲ್ಲಿದ್ದ ಬಿಇಓ ಸಿ.ಪ್ರಸನ್ನಕುಮಾರ ಅವರಿಗೆ ಸೂಚಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ರೋಗ ಗಳಿಗೆ ಒಂದೇ ತೆರನಾದ ಗುಳಿಗೆಗಳನ್ನು ನೀಡುತ್ತಿದ್ದಾರೆ, ಕೆಲವರು ಕೆಲಸದ ಅವಧಿಯಲ್ಲಿ ಮನೆಯಲ್ಲಿಯೇ ಇರು ತ್ತಾರೆ ಎಂದು ಸದಸ್ಯರು ದೂರಿದರು.

ಹಿಂದುಳಿದ ವರ್ಗಗಳ ಇಲಾಖೆ ವಿಸ್ತರಣಾಧಿಕಾರಿ ಸಂಬಂಧಪಟ್ಟ ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ತಿಳಿದು ಅದಕ್ಕೆ ತ್ವರಿತವಾಗಿ ಸ್ಪಂದಿಸಬೇಕು. ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸಬೇಕು ಎಂದು ಸದಸ್ಯರು ಸೂಚಿಸಿದರು.

ಡಿಸೆಂಬರ್ ಅಂತ್ಯದೂಳಗೆ ತಾಲ್ಲೂ ಕಿನ ಎಲ್ಲ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಮುಗಿಸಲಾಗುವದು ಎಂದು ಸಭೆಗೆ ಲೋಕೋಪಯೋಗಿ ಇಲಾ ಖೆಯ ಎಇಇ ರಾಮಚಂದ್ರಪ್ಪ ತಿಳಿಸಿದರು.

ತಾ.ಪಂ.ಉಪಾಧ್ಯಕ್ಷ ಬಸನಗೌಡ ಕಳ್ಳೇರ್, ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗರತ್ನಾ ಕಂಕನವರ, ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎಸ್, ಕಾದ್ರೋಳ್ಳಿ, ಸದಸ್ಯರಾದ  ಚಂದ್ರು ಅಣ್ಣಪ್ಪನವರ, ಆರ್‌.ಎನ್.ಗಂಗೋಳ, ಬಸವಂತಪ್ಪ ದೊಡ್ಮನಿ, ರೇಣುಕಾ ಚಲವಾದಿ, ನಿರ್ಮಲಾ ಗುಬ್ಬಿ, ರೂಪಾ ಆಡೂರ, ಸುನಿತಾ ಕೊಡ್ಲೇರ ಇತರರು ಹಾಜರಿದ್ದರು.

ಯುವಜನ ಮೇಳ
ಹಾವೇರಿ: ರಾಜ್ಯ ಮಟ್ಟದ ಯುವಜನ ಮೇಳ ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 6 ರಿಂದ 8ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲ ನಗರದ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆ ಯಲಿದೆ. ಹೆಚ್ಚಿನ ಮಾಹಿತಿಗೆ (ದೂರ ವಾಣಿ ಸಂಖ್ಯೆ: 08375-232443)ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.