ADVERTISEMENT

ಗ್ರಾಮೀಣ ಬಸ್ ನಿಲ್ದಾಣಕ್ಕೆ ₹1.2 ಕೋಟಿ ನಿರೀಕ್ಷೆ

‘ಜೆನರ್ಮ್‌’ ನಗರ ಸಾರಿಗೆ ಬಸ್‌ಗಳಿಗೆ ಚಾಲನೆ ನೀಡಿದ ಸಚಿವ ರುದ್ರಪ್ಪ ಲಮಾಣಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 12:48 IST
Last Updated 6 ಮಾರ್ಚ್ 2017, 12:48 IST
ಜಗದೀಶ ವಿ.ಎಸ್.
ಹಾವೇರಿ: ‘ಹಾವೇರಿ ಕೇಂದ್ರೀಯ ಬಸ್ ನಿಲ್ದಾಣದ ಆವರಣದಲ್ಲಿ ಪ್ರತ್ಯೇಕ ಗ್ರಾಮೀಣ ಬಸ್ ನಿಲ್ದಾಣ ನಿರ್ಮಾಣಕ್ಕೆ ಈ ಬಜೆಟ್‌ನಲ್ಲಿ ₹1.2 ಕೋಟಿ ದೊರೆ ಯುವ ನಿರೀಕ್ಷೆ ಇದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು. 
 
ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣ ದಲ್ಲಿ ಶನಿವಾರ ‘ಜೆನರ್ಮ್‌’ ಯೋಜನೆ ಅಡಿಯ 10 ನಗರ ಸಾರಿಗೆಯ ಮಿಡಿ ಬಸ್‌ಗಳಿಗೆ ಚಾಲನೆ ನೀಡಿ  ಅವರು ಮಾತನಾಡಿದರು.
 
‘ನಗರ ಸಾರಿಗೆಗೆ 10 ಬಸ್‌ಗಳು ಸೇರ್ಪಡೆಯಾಗಿವೆ. ಜಿಲ್ಲಾಡಳಿತ ಭವನ, ದೇವಗಿರಿ, ಎಂಜಿನಿಯರಿಂಗ್ ಕಾಲೇಜು, ಗಾಂಧಿಪುರ, ಕೆರಿಮತ್ತಿಹಳ್ಳಿ, ದೇವಿಹೊಸೂರು, ಉಪ್ಪುಣಸಿ, ಕಬ್ಬೂರು–ಶಿವಾಜಿ ನಗರ ಸೇರಿದಂತೆ ಹಾವೇರಿ ನಗರದ ಕೇಂದ್ರದಿಂದ 20 ಕಿ.ಮೀ. ಸುತ್ತಳತೆ ವ್ಯಾಪ್ತಿಯ ಸ್ಥಳಗಳಿಗೆ ಈ ಬಸ್‌ಗಳು ಸಂಚರಿಸಲಿವೆ. ನಮ್ಮ ಸರ್ಕಾರ ಬಂದ ಬಳಿಕ ಈ ಸಂಚಾರದ ರಸ್ತೆಗಳನ್ನೂ ಅಭಿವೃದ್ಧಿ ಪಡಿಸಲಾಗಿದೆ’ ಎಂದು ಹೇಳಿದರು. 
 
ಕರ್ನಾಟಕ ಸರ್ಕಾರದ ನವದೆಹಲಿಯ ಹೆಚ್ಚುವರಿ ವಿಶೇಷ ಪ್ರತಿನಿಧಿ ಸಲೀಂ ಅಹ್ಮದ್ ಮಾತನಾಡಿ, ‘ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ದೇಶದ ಸಾರಿಗೆ ವ್ಯವಸ್ಥೆಯಲ್ಲೇ ಮೊದಲ ಸ್ಥಾನದಲ್ಲಿದೆ. ಲಾಭಕ್ಕಿಂತ ಸೇವೆಯೇ ಮುಖ್ಯ ಧ್ಯೇಯ ವಾಗಿದೆ. ಹಾವೇರಿ ಜಿಲ್ಲೆಗೆ ಹೆಚ್ಚಿನ ಬಸ್‌ ಗಳನ್ನು ಒದಗಿಸಲು ಸಚಿವರಿಗೆ ಮನವಿ ಮಾಡಿಕೊಳ್ಳಲಾಗುವುದು’ ಎಂದರು. 
 
ವಾಯವ್ಯ ಕರ್ನಾಟಕ ಸಾರಿಗೆ ನಿಗ ಮದ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ‘ವೈಫೈ ಸೇರಿದಂತೆ ವಿವಿಧ ಸೌಕರ್ಯಗಳನ್ನು ಬಸ್ ಹಾಗೂ ನಿಲ್ದಾಣದಲ್ಲಿ ಲಭ್ಯವಾಗಲಿವೆ. ಮುಂದಿನ ಮೇ ತಿಂಗಳಲ್ಲಿ ಹಾವೇರಿ ಜಿಲ್ಲೆಗೆ ಹೆಚ್ಚಿನ ಬಸ್‌ ಒದಗಿಸಲಾಗುವುದು. ರಾಣೆಬೆನ್ನೂರು, ಬ್ಯಾಡಗಿ, ಹಾನಗಲ್ ಮತ್ತಿತರ ಪ್ರಮುಖ ನಿಲ್ದಾಣ ಗಳಿಗೆ ಸ್ವೈಪಿಂಗ್ ಮೆಶಿನ್ ಬರಲಿದೆ’ ಎಂದರು.
 
ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ವಿ.ಎಸ್. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ರೇಷ್ಮೆ ಮಂಡಳಿಯ ಅಧ್ಯಕ್ಷ ಡಿ.ಬಸವರಾಜ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ, ವಿಭಾ ಗೀಯ ಸಂಚಾರ ಅಧಿಕಾರಿ ರಾಮನಗೌಡ ಎಚ್. ಅಧಿಕಾರಿಗಳಾದ ರಾಜಕುಮಾರ, ಹುಲಗಣ್ಣನವರ, ಕಾಟೇಕರ, ವೀರೇಶ ಅರ್ಕಾಚಾರಿ ಮತ್ತಿತರರು ಇದ್ದರು. 
 
ಏನಿ‘ಮಿಡಿ’ ಬಸ್?
ಮಿನಿ ಬಸ್‌ಗಳಿಗಿಂತ ದೊಡ್ಡದು, ಸಾಮಾನ್ಯ ಬಸ್‌ ಗಳಿಂದ ಸಣ್ಣದಾಗಿರುವ ಇವು ಗಳನ್ನು ‘ಮಿಡಿ ಬಸ್’ ಎನ್ನುತ್ತಾರೆ. ವಸ್ತ್ರ ವಿನ್ಯಾಸದಲ್ಲಿ ಜನಪ್ರಿಯ ವಾದ ‘ಮಿಡಿ’ ಪದವೇ ಇಲ್ಲಿಯೂ ಬಳಕೆಯಾಗಿದೆ ಎನ್ನಲಾಗಿದೆ.  

ಈ ಬಸ್‌ಗಳು ಸಂಚಾರ ದಟ್ಟಣೆಯ ರಸ್ತೆಯಲ್ಲಿ ಚಲಾಯಿ ಸಲು ಅನುಕೂಲ. ಅಲ್ಲದೇ, ಬಸ್‌ ಭಾರವೂ ಕಡಿಮೆಯಿದ್ದು ಇಂಧನ ಮಿತವ್ಯಯಕ್ಕೆ ಸಹಕಾರಿ. ಹೆಚ್ಚಿನ ‘ಸಂಚಾರ’ಗಳನ್ನು ಹೊಂದ ಬಹುದು. ಇಂಗ್ಲೆಂಡ್‌ನಲ್ಲಿ ಹೆಚ್ಚಾಗಿ ರಸ್ತೆಗಿಳಿದಿರುವ ‘ಮಿಡಿ ಬಸ್’ ಮಾದರಿಗಳು ಈಗ ವಿಶ್ವದಾದ್ಯಂತ ಜನಪ್ರಿಯ.

ನಗರಕ್ಕೆ ನೀಡಿದ 10 ಮಿಡಿಬಸ್‌ಗಳಲ್ಲಿ ಜಿ.ಪಿ.ಆರ್‌.ಎಸ್ ತಂತ್ರಜ್ಞಾನ, ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಸಿ.ಸಿ ಟಿವಿ ಕ್ಯಾಮೆರಾ, ನಿಲುಗಡೆಯ ಸ್ಥಳದ ಹೆಸರನ್ನು ಹೇಳುವ ವಾಯಿಸ್‌ ಸಿಸ್ಟಮ್‌, ಕತ್ತಲಲ್ಲೂ ಕಾಣುವ ಡಿಜಿಟಲ್ ಬೋರ್ಡ್ ಸೇರಿದಂತೆ ಸಾಕಷ್ಟು ಸೌಲಭ್ಯವಿದೆ. ಶೀಘ್ರವೇ ವೈಫೈ ಕೂಡಾ ಬರಲಿದೆ.
‘ಅಧಿಕಾರಿಗಳು, ನಾಗರಿಕರು, ಸ್ಥಳೀಯರು ನೆರವು ನೀಡಿದರೆ ಇನ್ನಷ್ಟು ಸಂಚಾರ ಹೆಚ್ಚಿಸಲು ಸಿದ್ಧ’ ಎನ್ನುತ್ತಾರೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ 
 
* ಸುಮಾರು ಮೂರು ವರ್ಷಗಳ ಹಿಂದೆ ರಸ್ತೆಯೇ ಸುಸ್ಥಿತಿಯಲ್ಲಿ ಇರಲಿಲ್ಲ. ಈಗ ರಸ್ತೆ ಅಭಿವೃದ್ಧಿ ಪಡಿಸಿ ನಗರ ಸಾರಿಗೆ ಆರಂಭಿಸಿದ್ದೇವೆ
ರುದ್ರಪ್ಪ ಲಮಾಣಿ, ಜಿಲ್ಲಾ ಉಸ್ತವಾರಿ ಸಚಿವ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.