ADVERTISEMENT

ಜನ-ಮನ: ಸಚಿವರ ಸಂವಾದ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2015, 9:52 IST
Last Updated 2 ಆಗಸ್ಟ್ 2015, 9:52 IST

ಹಾವೇರಿ: ‘ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್‌ ಅವರು ಫಲಾನುಭವಿಗಳೊಂದಿಗೆ ನಡೆಸುವ ‘ಜನ-ಮನ  ಸಂವಾದ’ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಮಂಜುನಾಥ ನಾಯಕ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗದಲ್ಲಿ ಶುಕ್ರವಾರ ನಡೆದ ಜನ- ಮನ ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಂವಾದ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು.
‘ಮುಖ್ಯಮಂತ್ರಿ ಆಶಯದಂತೆ ‘ಜನ–-ಮನ ಸಂವಾದ’ ಜಿಲ್ಲಾಮಟ್ಟದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ದಿನಾಂಕವನ್ನು ಸಚಿವರೊಂದಿಗೆ ಸಮಾ ಲೋಚಿಸಿ ನಿಗದಿಪಡಿಸಲಾಗುವುದು’ ಎಂದರು. 

‘ರಾಜ್ಯ ಸರ್ಕಾರ ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ, ಹಾಲು ಉತ್ಪಾದ ಕರಿಗೆ ಪ್ರೋತ್ಸಾಹ ಧನ, ಮನಸ್ವಿನಿ, ಮೈತ್ರಿ, ವಸತಿ ಭಾಗ್ಯ, ಕೃಷಿ ಭಾಗ್ಯ ಹೀಗೆ ಅನೇಕ ಜನಪರ ಯೋಜನೆಗಳು ಜಾರಿ ಮಾಡಿದೆ. ಸಚಿವರು ನೇರವಾಗಿ ಅಭಿಪ್ರಾಯ ಪಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಫಲಾನುಭವಿಗಳನ್ನು ಸಮಾರಂಭಕ್ಕೆ ಕರೆದುಕೊಂಡು ಬರಬೇಕು’ ಎಂದರು.

‘ಸಂಬಂಧಪಟ್ಟ ಇಲಾಖಾಧಿಕಾರಿ ಗಳು ಮುತುವರ್ಜಿಯಿಂದ ಯಶಸ್ಸಿಗೆ ಶ್ರಮಿಸಬೇಕು. ಆಯಾ ಇಲಾಖಾ ಅಧಿ ಕಾರಿಗಳಿಗೆ ವಹಿಸಿಕೊಡುವ ಜವಾಬ್ದಾರಿ ಯನ್ನು ಸಮಪರ್ಕವಾಗಿ  ನಿರ್ವಹಿಸ ಬೇಕು’ ಎಂದು  ಸೂಚಿಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ.ಬಿ ಅಂಜನಪ್ಪ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಶಶಿಧರ ಕುರೇರ ಮಾತನಾಡಿ, ‘ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಫಲಾನುಭವಿಗಳನ್ನು ಕರೆತರುವ ವ್ಯವಸ್ಥೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು’ ಎಂದರು.

ವಿವಿಧ ಯೋಜನೆಗಳ ಪರಿಣಾಮದ ಬಗ್ಗೆ ನೇರವಾಗಿ ಫಲಾನುಭವಿಗಳಿಂದಲೇ ಅಭಿಪ್ರಾಯ ಪಡೆಯಲು ಸರ್ಕಾರ ಇಚ್ಛಿಸಿದೆ. -ಎಂ.ಮಂಜುನಾಥ ನಾಯಕ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.