ADVERTISEMENT

ಬಿತ್ತನೆ ಕಾರ್ಯಕ್ಕೆ ಭರದ ಸಿದ್ಧತೆ

ಹಿರೇಕೆರೂರು ತಾಲ್ಲೂಕಿನಲ್ಲಿ ಉತ್ತಮ ಮಳೆ; ಎಲ್ಲೆಡೆ ಸಂತಸ

​ಪ್ರಜಾವಾಣಿ ವಾರ್ತೆ
Published 25 ಮೇ 2017, 9:18 IST
Last Updated 25 ಮೇ 2017, 9:18 IST

ಹಿರೇಕೆರೂರ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿರುವುದರಿಂದ ರೈತರು ಬಿತ್ತನೆಗೆ ಭರದ ಸಿದ್ಧತೆ ನಡೆಸಿ ದ್ದಾರೆ. ಕೆಲವು ಕಡೆಗಳಲ್ಲಿ ಬುಧವಾರ ಹತ್ತಿ ಬಿತ್ತನೆ ಆರಂಭಿಸಿದ್ದಾರೆ.

ಬಹುತೇಕ ರೈತರು ಈಗಾಗಲೇ ಹೊಲಗಳನ್ನು ರಂಟೆ, ಕುಂಟೆ ಹೊಡೆದು, ಕಸ ಆರಿಸಿ ತೆಗೆದು ಬಿತ್ತನೆಗೆ ಸಿದ್ಧಗೊ ಳಿಸಿದ್ದಾರೆ. ಹತ್ತಿ ಬಿತ್ತಲು ಸಾಲು ಹೊಡೆ ದಿರುವ ರೈತರು ಹತ್ತಿ ಬಿತ್ತನೆ ಆರಂಭಿ ಸಿದ್ದು, ಅನೇಕರು ಭರದಿಂದ ಸಾಲು ಹೊಡೆಯುತ್ತಿದ್ದಾರೆ.

ಮಂಗಳವಾರ ಸಂಜೆ ಉತ್ತಮ ಮಳೆಯಾಗಿದ್ದರಿಂದ ಬಿ.ಟಿ.ಹತ್ತಿ ಬಿತ್ತನೆ ಆರಂಭಿಸಿದ್ದೇವೆ’ ಎಂದು ಕಳಗೊಂಡ ಗ್ರಾಮದ ಪ್ರಗತಿಪರ ರೈತ ಪ್ರಭಾಕರ ಹುಲ್ಲತ್ತಿ ತಿಳಿಸಿದರು.

ಕೃಷಿ ಇಲಾಖೆ ಪ್ರಕಾರ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿಗೆ ಸುಮಾರು 57 ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಆಗು ತ್ತದೆ. ಇದರಲ್ಲಿ ಸುಮಾರು ಶೇ 90ರಷ್ಟು ಕ್ಷೇತ್ರದಲ್ಲಿ ಗೋವಿನ ಜೋಳ ಹಾಗೂ ಬಿ.ಟಿ.ಹತ್ತಿ ಬಿತ್ತನೆಯಾಗುತ್ತದೆ.

ಗೊಬ್ಬರ ದಾಸ್ತಾನು: ಹಿರೇಕೆರೂರ ತಾಲ್ಲೂಕು ವ್ಯವಸಾಯ ಉತ್ಪನ್ನ ಸಹಕಾರಿ ಮಾರಾಟ ಸಂಘ (ಟಿಎಪಿಸಿಎಂಎಸ್) ತಾಲ್ಲೂಕಿನಲ್ಲಿ ತಮ್ಮ 6 ಶಾಖೆಗಳ ಮೂಲಕ ರೈತರಿಗೆ ಗೊಬ್ಬರ ವಿತರಿಸುವ ಪ್ರಮುಖ ಕಾರ್ಯ ಮಾಡುತ್ತಿದೆ. ಜನ ವರಿಯಿಂದ ಮಾರ್ಚ್‌ವರೆಗೆ ಖರೀದಿಸಿದ ಗೊಬ್ಬರವನ್ನು ಸಂಘ ರಿಯಾಯಿತಿ ದರ ದಲ್ಲಿ ರೈತರಿಗೆ ವಿತರಣೆ ಮಾಡುತ್ತಿದೆ.

’ಟಿಎಪಿಸಿಎಂಎಸ್ ಸಂಸ್ಥೆಯ 6 ಶಾಖೆ ಗಳಲ್ಲಿ ಯೂರಿಯಾ, ಡಿಎಪಿ, ಎಂಓಪಿ ಹಾಗೂ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಸಂಗ್ರ ಹಿಸಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಸುಮಾರು 6 ಸಾವಿರ ಟನ್ ರಸಗೊಬ್ಬರ ದಾಸ್ತಾನು ಇಡಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಎಸ್. ಪಾಟೀಲ ತಿಳಿಸಿದರು.

ಬೀಜ ವಿತರಣೆ: ತಾಲ್ಲೂಕಿನಲ್ಲಿ ಕೃಷಿ ಇಲಾಖೆಯಿಂದ ರಟ್ಟೀಹಳ್ಳಿ, ಮಾಸೂರು, ಹಿರೇಕೆರೂರ, ಕೋಡ, ಹಂಸಭಾವಿ, ಚಿಕ್ಕೇರೂರ ಹಾಗೂ ಹಳ್ಳೂರಿನಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಿ ರಿಯಾ ಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಆರಂಭಿಸಲಾಗಿದೆ. 

ಬೀಜಗಳ ಬಗ್ಗೆ ವಿವರ ನೀಡಿದ ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಮಲ್ಲಾಡದ, ‘ತಾಲ್ಲೂಕಿನಲ್ಲಿ ಹೆಚ್ಚು ಗೋವಿನ ಜೋಳ ಬಿತ್ತನೆಯಾಗುತ್ತದೆ. ಪ್ರತಿ ಕೆ.ಜಿ. ಗೋವಿನ ಜೋಳಕ್ಕೆ ಸಾಮಾನ್ಯ ವರ್ಗದ ರೈತರಿಗೆ ₹ 20, ಪರಿ ಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದವರು ಪ್ರತಿ ಕೆ.ಜಿ.ಗೆ ₹ 30ರಂತೆ ಸಹಾಯಧನ ಲಭ್ಯವಿದೆ. ಶೇಂಗಾ, ಹೆಸರು, ತೊಗರಿ ಬೀಜಗಳು ಸಹ ಸಹಾಯ ಧನದಲ್ಲಿ ಲಭ್ಯ ಇವೆ.

ಸಾಮಾನ್ಯ ವರ್ಗದವರು ಗುರುತಿನ ಚೀಟಿ, ಅ ಖಾತೆ ದಾಖಲಾತಿಗಳನ್ನು ರೈತ ಸಂಪರ್ಕ ಕೇಂದ್ರಕ್ಕೆ ಒದಗಿಸಬೇಕು. ಪರಿಶಿಷ್ಟರು ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರದ ನಕಲು ಹಾಗೂ ಅ ಖಾತೆ ದಾಖಲೆಗಳನ್ನು ಒದಗಿಸಿ ಬೀಜಗಳನ್ನು ಪಡೆಯಬೇಕು’ ಎಂದರು.

ರೈತರು ಖಾಸಗಿ ಅಂಗಡಿಗಳಲ್ಲಿ ಬೀಜ ಗಳನ್ನು ಪಡೆಯುವಾಗ ಕಡ್ಡಾಯವಾಗಿ ರಸೀದಿಯನ್ನು ಪಡೆಯಬೇಕು. ಹತ್ತಿ ಬೀಜಗಳನ್ನು ಚಿಲ್ಲರೆಯಾಗಿ ಖರೀದಿಸ ಬಾರದು, ಪ್ಯಾಕ್ ಮಾಡಿದ ಬೀಜದ ಪಾಕೆಟ್‌ಗಳನ್ನು ಪಡೆಯಬೇಕು. ಇದ ರಿಂದ ಗುಣಮಟ್ಟದ ಬೀಜ ಪಡೆಯಲು ಸಾಧ್ಯ ಎಂದು ಮನವಿ ಮಾಡಿದರು.
ಕೆ.ಎಚ್.ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.