ADVERTISEMENT

‘ಯಕ್ಷಗಾನ ಉಳಿವಿಗೆ ಯುವಶಕ್ತಿ ಬಲ ಮುಖ್ಯ’

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 9:54 IST
Last Updated 28 ಫೆಬ್ರುವರಿ 2017, 9:54 IST

ರಾಣೆಬೆನ್ನೂರು: ‘ಭಾರತೀಯ ಸಂಪ್ರದಾಯದ ಸಂಕೇತಗಳಲ್ಲಿ ಒಂದಾದ ಯಕ್ಷಗಾನ ಕಲೆಯು ಧಾರ್ಮಿಕ ಮನೋಭಾವ ಪ್ರಚುರಪಡಿಸುವ ಅದ್ಭುತ ಕಲೆಯಾಗಿದೆ. ನೃತ್ಯದ  ಮೂಲಕ ಕಲಾವಿದರು ಈ ಕಲೆಯನ್ನು ಉಳಿಸಿಕೊಂಡು ಮುನ್ನಡೆಸುತ್ತಿದ್ದಾರೆ. ಇಂಥ ನೃತ್ಯದ ಬಗ್ಗೆ ಯುವಕರಲ್ಲಿ ಅಭಿರುಚಿ ಕಡಿಮೆ ಆಗುತ್ತಿದೆ’ ಎಂದು ಬಂಟ್ ಸಂಘದ ಅಧ್ಯಕ್ಷ ಎಚ್. ಜಯರಾಮಶೆಟ್ಟಿ ಹೇಳಿದರು.

ಇಲ್ಲಿನ ನಗರಸಭೆಯ ಗುಡ್ಡದ ಸ್ಮಾರಕ ಭವನದಲ್ಲಿ ಈಚೆಗೆ ತಾಲ್ಲೂಕು ಬಂಟರ್ ಸಂಘದ ಆಶ್ರಯದಲ್ಲಿ ಕರಾವಳಿಯ(ಉಡುಪಿ) ಪ್ರಸಿದ್ಧ ಗೌರಿಶಂಕರ ಸಾಂಸ್ಕೃತಿಕ ಪ್ರತಿಷ್ಠಾನದ ಮಹಿಳಾ ಯಕ್ಷಗಾನ ತಂಡ ಏರ್ಪಡಿಸಿದ್ದ ಲವ-ಕುಶ ಕಾಳಗ ಪೌರಾಣಿಕ ಕಥಾ ಭಾಗದ ಯಕ್ಷಗಾನ  ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.                                                                                                                                                                                                                                                                                 ‘ದೇಶಿಯ ಸಂಸ್ಕೃತಿಯ ಪ್ರತೀಕವಾಗಿರುವ ಯಕ್ಷಗಾನ ಉಳಿಸಿ ಬೆಳೆಸಲು ಯುವಶಕ್ತಿ ಮುಂದಾಗಬೇಕು’ ಎಂದರು.
ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿದರು.

ಇದೇ ವೇಳೆ, 5 ವರ್ಷದ ಬಾಲಕಿ ಪಾರ್ವತಿ ಭಟ್ ನಡೆಸಿಕೊಟ್ಟ ಯಕ್ಷ ಗಾನವು ನೆರೆದಿದ್ದ ಸಭೀಕರನ್ನು ಮಂತ್ರ ಮುಗ್ಧಗೊಳಿಸಿದಳು.
ರಾಮನ ಪಾತ್ರವನ್ನು ಉಷಾ, ಸೀತೆಯ ಪಾತ್ರ ನಾಗರತ್ನಾ ಅಚ್ಚುಕಟ್ಟಾಗಿ ನಿರ್ವಹಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ವೀಣಾ, ಸೌಮ್ಯ, ಮಲ್ಲಿಕಾ, ಮಂಜುಳಾ, ಗೀತಾ ರಾಮಾಯಣದ ಸನ್ನಿವೇಶವನ್ನು ಪ್ರದರ್ಶಿಸಿದರು.

ಸಂಘದ ಗೌರವಾಧ್ಯಕ್ಷ ಮಂಜುನಾಥ ಶೆಟ್ಟಿ, ಕೆ.ಆರ್.ಶೆಟ್ಟಿ, ಅರುಣಕುಮಾರ ಶೆಟ್ಟಿ, ಶಾಂತರಾಮ ಹೆಗಡೆ, ರತ್ನಾಕರ ಕುಂದಾಪುರ, ಕೃಷ್ಣಮೂರ್ತಿ ಸುಣಗಾರ, ವಿಶ್ವನಾಥ ಹೊಳೆಬಾಗಿಲ, ರಾಘವೇಂದ್ರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಸಂತೋಷ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸದಾನಂದ ಕುಂದಾಪುರ, ಸುಧಾಕರ ದೇವಾಡಿಗ, ಪ್ರತೀಶ, ಎಂಎಸ್ ಈಶ್ವರ,  ಜಯರಾಮ ದೇವಾಡಿಗ, ಜಯರಾಮ ಶೆಟ್ಟಿ, ಶಾಂತರಾಮ ಶೆಟ್ಟಿ, ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.