ADVERTISEMENT

‘ಯುವ ಶಕ್ತಿ ಔದ್ಯಮಿಕವಾಗಿ ಬೆಳೆಯಲಿ’

ಜೇಸಿ ಸಂಸ್ಥೆ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭದಲ್ಲಿ ಎಚ್‌.ಬಿ. ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:17 IST
Last Updated 19 ಜನವರಿ 2017, 6:17 IST

ರಾಣೆಬೆನ್ನೂರು: ಯುವ ಜನತೆ ಆರ್ಥಿಕ, ಸಾಮಾಜಿಕ, ಆಡಳಿತಾತ್ಮಕ ಮತ್ತು ಔದ್ಯಮಿಕ ಶಕ್ತಿಯಾಗಿ ಹೊರ ಹೊಮ್ಮಬೇಕಾಗಿದೆ, ಈಗಾಗಲೇ ಅಧ್ಯಾತ್ಮ, ಯೋಗದಲ್ಲಿ ಪ್ರಪಂಚಕ್ಕೆ ಮಾದರಿಯಾಗಿದ್ದೇವೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ದಾವಣಗೆರೆ ಮಂಜುನಾಥ ಎಚ್‌.ಬಿ ಹೇಳಿದರು.

ಇಲ್ಲಿನ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜ್ಯೂನಿಯರ್‌ ಚೇಂಬರ್‌ ಇಂಟರ್‌ ನ್ಯಾಷನಲ್‌ ಸಂಸ್ಥೆಯ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೇಸಿ ಸಂಸ್ಥೆಯ ಧ್ಯೇಯದಲ್ಲಿ ಯುವಕರನ್ನು ಆರ್ಥಿಕ ಚಟುವಟಿಕೆಗಳಲ್ಲಿ ಪ್ರೇರೇಪಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಬೇಕು. ಭಾರತದ ಯುವ ಶಕ್ತಿಗೆ ವ್ಯಕ್ತಿತ್ವ ವಿಕಸನ ತರಬೇತಿ ನೀಡ ಬೇಕು ಎಂದು ಮಂಜುನಾಥ ತಿಳಿಸಿದರು.

ನೂತನ ಅಧ್ಯಕ್ಷ ಎಫ್‌.ಎಚ್‌. ಗಚ್ಚಿನಮಠ ಅವರಿಗೆ ನಿಕಟ ಪೂರ್ವ ಅಧ್ಯಕ್ಷ ಶ್ರೀನಿವಾಸ ಕಾಕಿ ಅವರು ಗ್ಯಾವಲ್‌ ಮತ್ತು ಕಾಲರ್‌ ಐಡಿ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಜೇಸಿಐನ ವಲಯ 24ರ ವಲಯಾಧ್ಯಕ್ಷ ಸ್ವಾಮಿ ಎಚ್‌ ಅವರು ನೂತನ ಪದಾಧಿಕಾರಿಗಳು ಪ್ರಮಾಣ ವಚನ ಬೋಧಿಸಿದರು.
ವಲಯ ಉಪಾಧ್ಯಕ್ಷ ವಿನಾಯಕ ಎಸ್‌.ಎಂ ಅರೆಮನೆ ಅವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

ಜೇಸಿ ನೂತನ ಅಧ್ಯಕ್ಷ ಎಫ್‌.ಎಚ್‌.ಗಚ್ಚಿನಮಠ ಅವರು ಮಾತನಾಡಿ, ನನ್ನ ಅಧಿಕಾರ ಅವಧಿ ಯಲ್ಲಿ ಯುವ ಜನತೆಗೆ ವ್ಯಕ್ತಿತ್ವ ವಿಕಸನ ತರಬೇತಿ,ಯುವರಿಗೆ ಮತ್ತು ಮಹಿಳೆ ಯರಿಗೆ ಸ್ವಂತ ಉದ್ಯೋಗ, ಕೌಶಲ ತರಬೇತಿ ನೀಡಲಾಗುವುದು ಎಂದರು. ಮಂಜುನಾಥ ಗೋಂದಕರ ನೂತನ ಸದಸ್ಯರನ್ನು ಪರಿಚಯ ಮಾಡಿದರು.

ನೂತನ ಕಾರ್ಯದರ್ಶಿ ಶಿವರುದ್ರಪ್ಪ ಅವರಿಗೆ ಎಫ್‌.ಎಚ್‌. ಗಚ್ಚಿನಮಠ, ಜೇಸಿರೇಟ್‌ ಅಧ್ಯಕ್ಷೆ ಅನುಪಮಾ ಗಚ್ಚಿನಮಠ ಅವರಿಗೆ ನಿಕಟ ಪೂರ್ವ ಅಧ್ಯಕ್ಷೆ ರೂಪಾ ಶ್ರೀನಿವಾಸ ಕಾಕಿ ಹಾಗೂ ಸಾಯಿನಾಥ ಗೊಂದಕರ ಅವರಿಗೆ ವಿನಯ ಬಗಾಡೆ ಅಧಿಕಾರ ಹಸ್ತಾಂತರಿಸಿದರು.

ಡಾ.ಶಿವಾನಂದ ಹಿತ್ತಲಮನಿ, ಡಾ.ಗಣೇಶ ದೇವಗಿರಿಮಠ, ಸಿದ್ದನ್ಣ ಅತಡಕರ, ರತ್ನಾ ಪುನೀತ, ಜಿ.ಬಿ. ಮಾಸಣಗಿ, ಶಶಿಕಲಾ ಮಾಗನೂರ, ಎಚ್‌.ಎನ್‌.ದೇವಕುಮಾರ, ಡಾ.ವಿದ್ಯಾ ಕೇಲಗಾರ, ಎಂ.ಎಂ.ಪಾಟೀಲ, ಮೃತ್ಯುಂಜಯ ಮುದ್ದಿ, ಪ್ರಭುಲಿಂಗಪ್ಪ ಹಲಗೇರಿ, ವಿ.ಎಸ್‌.ಹಿರೇಮಠ, ಲಕ್ಷ್ಮಣ ಕನಕಿ, ಸುನೀಲಕುಮಾರ ಶೆಟ್ಟರ, ಗದಿಗೆಪ್ಪ ಬಗಾಡೆ ಮತ್ತಿತರರು ಇದ್ದರು.

ಪ್ರವೀಣ ಹಿರೇಮಠ ಮತ್ತು ಶೋಭಾ ಹೊಸಪೇಟೆ ಜೇಸಿ ವಾಣಿ ಓದಿದರು. ಎಫ್‌.ಎಚ್‌.ಗಚ್ಚಿನಮಠ ಪ್ರಾರ್ಥಿಸಿದರು. ಶ್ರೀನಿವಾಸ ಕಾಕಿ ಸ್ವಾಗತಿಸಿದರು. ಶಿವಾನಂದ ಸಂಗಾಪುರ ಪರಿಚಯ ಮಾಡಿದರು. ಶಿವರುದ್ದಪ್ಪ ವಂದಿಸಿದರು.

*
ಪ್ರಪಂಚದಲ್ಲಿಯೇ ಅತ್ಯಂತ ಬಹು ದೊಡ್ಡ ಯುವಶಕ್ತಿ (ಶೇ 64ರಷ್ಟು) ಇರುವುದು ಭಾರತದಲ್ಲಿ. ನಮ್ಮ ಯುವ ಶಕ್ತಿ ಕಂಡು ಕೆಲ ದೇಶಗಳಿಗೆ ಆತಂಕವಾಗಿದೆ.
–ಎಚ್‌.ಬಿ. ಮಂಜುನಾಥ,
ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT