ADVERTISEMENT

₹ 3.42 ಕೋಟಿ ವೆಚ್ಚದ ವಸತಿ ಶಾಲೆಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 9:54 IST
Last Updated 28 ಜನವರಿ 2017, 9:54 IST
₹ 3.42 ಕೋಟಿ ವೆಚ್ಚದ ವಸತಿ ಶಾಲೆಗೆ ಶಂಕುಸ್ಥಾಪನೆ
₹ 3.42 ಕೋಟಿ ವೆಚ್ಚದ ವಸತಿ ಶಾಲೆಗೆ ಶಂಕುಸ್ಥಾಪನೆ   

ಗುತ್ತಲ: ‘ಮೊರಾರ್ಜಿ ವಸತಿ ಶಾಲೆಯಲ್ಲಿ ಈಗಾಗಲೆ ನಿರ್ಮಿಸಿದ ಎರಡು ಕಟ್ಟಡಗಳ ಗೋಡೆ ಬಿರುಕು ಬಿಟ್ಟಿವೆ. ಹೊಸ ಕಟ್ಟಡಗಳನ್ನು ಸದೃಢವಾಗಿ ನಿರ್ಮಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಇಲ್ಲಿಗೆ ಸಮಿಪದ ನೆಗಳೂರ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ₹3.42 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಟ್ಟಡ ಕಾಮಗಾರಿಗೆ  ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸಗಣ್ಣಿ ಮಾತನಾಡಿ, ‘ಸದೃಢ ಕಾಮಗಾರಿಗೆ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದೆ. ಅದನ್ನು ಗುತ್ತಿಗೆದಾರರು, ಎಂಜಿನಿಯರ್‌ಗಳು ದುರುಪಯೋಗ ಪಡಿಸಿಕೊಳ್ಳಬಾರದು’ ಎಂದರು.

ಜಿ.ಪಂ ಸದಸ್ಯ ಸಿದ್ಧರಾಜ ಕಲಕೋಟಿ ಮಾತನಾಡಿದರು. ಸಮಾರಂಭದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ, ತಾಲ್ಲೂಕು ಪಂಚಾಯ್ತಿ ಸದಸ್ಯ ಸುವರ್ಣ ಸುಕಳಿ, ಎಪಿಎಂಸಿ ಸದಸ್ಯ ಕೃಷ್ಣರೆಡ್ಡಿ ಮೈದೂರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಾರದಾ ಹೊಸಮನಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಪ್ಪಣ್ಣನವರ,ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ,ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಎಸ್.ಶ್ರೀಧರ,ಸಿ.ಬಿ.ಕುರವತ್ತಿಗೌಡ್ರ,ಕರಿಯಪ್ಪ ಉಂಡಿ,ವಿಜಯಲಕ್ಷ್ಮಿ ಮೈದೂರ,ಹನಮವ್ವ ಕೊಪ್ಪದ,ಸುಜಾತಪ್ಪ ಚನ್ನೂರ,ಶಾಂತವ್ವ ಬಾಲಣ್ಣನವರ,ಅಶೋಕ ತಳವಾರ,ಜಯಮ್ಮ ಬನ್ನಿಮಟ್ಟಿ,ನೀಲಮ್ಮ ಶಿಡ್ಲಣ್ಣ ನವರ,ಶಿವಯೋಗಿ ತಾವರೆ, ಸಂಜಯಗಾಂಧಿ ಸಂಜೀವಣ್ಣನವರ,ಫಕ್ಕೀರೇಶ ಹಳ್ಳಾಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.