ADVERTISEMENT

ಉದ್ದು ಬೆಳೆ ರಾಶಿ ಭರಾಟೆಯಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 6:53 IST
Last Updated 11 ಸೆಪ್ಟೆಂಬರ್ 2017, 6:53 IST

ಚಿಂಚೋಳಿ: ತಾಲ್ಲೂಕಿನ ಕೆಲವು ಕಡೆ ಮಳೆ ಮುಂದುವರಿದಿದ್ದರೂ ಚಿಂಚೋಳಿ ಸುತ್ತಮುತ್ತ ಮಳೆ ಬಿಡುವು ನೀಡಿದ್ದರಿಂದ ರೈತರು ಉದ್ದಿನ ರಾಶಿಯ ಭರಾಟೆಯಲ್ಲಿದ್ದಾರೆ.
ಬಹುತೇಕ ಗ್ರಾಮೀಣ ಪ್ರದೇಶ ಯಾವ ರಸ್ತೆ ನೋಡಿದರೂ ಅಲ್ಲಿ ರಾಶಿ ನಡೆಯುತ್ತಿರುವುದು ಗೋಚರಿಸುತ್ತಿದೆ. ಭೌತಿಕವಾಗಿ ರಾಶಿ ಕಾಣಿಸುತ್ತಿದೆ. ಆದರೆ, ಇಳುವರಿ ಮಾತ್ರ ಅತ್ಯಲ್ಪ. ರೈತರು ಬೆಳೆಯನ್ನು ಹೊಲದಲ್ಲಿಯೇ ಬಿಡಲಾಗದೇ ರಾಶಿ ನಡೆಸುತ್ತಿದ್ದಾರೆ.

ಬೀಜ ಬಿತ್ತಿ ಬೆಳೆದ ಖರ್ಚು ಹೋದರೆ ಸಾಕು ಎನ್ನುವಂತಹ ಸ್ಥಿತಿಗೆ ರೈತರು ತಲುಪಿದ್ದಾರೆ. ಈಗಾಗಲೇ ಮಳೆಯಿಂದ ಹೆಸರು ಬೆಳೆ ರಾಶಿಗೆ ಅಡ್ಡಿಯಾಗಿ ಹಾಳಾಗಿದೆ. ಆದರೆ, ಉದ್ದು ಬೆಳೆ ಮಾತ್ರ ರೈತರ ಕೈಗೆಟುಕುತ್ತಿದೆ. ನಿರೀಕ್ಷೆಯ ಅರ್ಧಕ್ಕಿಂತ ಕಡಿಮೆ ಇಳುವರಿ ರೈತರನ್ನು ನಷ್ಟಕ್ಕೆ ತಳ್ಳಿದೆ.

ಕೋಡ್ಲಿ ಸುತ್ತಲೂ ಮಳೆ ಹೆಚ್ಚಾಗಿ ಸುರಿದಿದೆ. ಆದರೆ, ಚಿಂಚೋಳಿ, ಕುಂಚಾವರಂ ದೇಗಲಮಡಿ, ಐನೋಳ್ಳಿ, ಮಿರಿಯಾಣ, ಸುಲೇಪೇಟ, ಚಿಮ್ಮನಚೋಡ ಮೊದಲಾದ ಕಡೆ ಮಳೆ ಬಿಡುವು ನೀಡಿದ್ದರಿಂದ ರಾಶಿಗೆ ಅನುಕೂಲವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.