ADVERTISEMENT

ಜಿಲ್ಲಾ ಯುವ ಕಾಂಗ್ರೆಸ್‌ಗೆ ಈರಣ್ಣ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:59 IST
Last Updated 19 ಮೇ 2017, 5:59 IST

ಕಲಬುರ್ಗಿ: ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಈರಣ್ಣ ಝಳಕಿ ಅವರು ಅತಿ ಹೆಚ್ಚು ಮತ ಪಡೆದು ಆಯ್ಕೆಯಾದರು. ಇವರು ಕಲಬುರ್ಗಿ ಉತ್ತರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು.

ಒಟ್ಟು 5,500 ಸದಸ್ಯರಲ್ಲಿ  3,700 ಸದಸ್ಯರು ಮತ ಚಲಾಯಿಸಿದ್ದರು. ಈರಣ್ಣ ಅವರಿಗೆ 1,735 ಮತಗಳು ಲಭ್ಯವಾದವು. ಮಧ್ಯಪ್ರದೇಶದ ಯುವ ಕಾಂಗ್ರೆಸ್‌ ಮುಖಂಡ ಗಿರೀಶ್‌ ಅವರು ಚುನಾವಣಾಧಿಕಾರಿಯಾಗಿದ್ದರು.

ನಾಲ್ಕು ಉಪಾಧ್ಯಕ್ಷರು, ಎಂಟು ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಚುನಾವಣೆ ನಡೆದ ಎಂಟು ಕ್ಷೇತ್ರಗಳ ಅಧ್ಯಕ್ಷರ ಆಯ್ಕೆಯನ್ನೂ ಘೋಷಿಸಲಾಯಿತು.

ADVERTISEMENT

ಜಿಲ್ಲಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷರು: ಅಶ್ವಿನಿ ಕಾವಳೆ (ಮಹಿಳೆ), ಭೀಮಾಶಂಕರ ಜಲವಾಡ (ಎಸ್‌ಸಿ), ಶರಣು ಮೆಂಗಾ (ಒಬಿಸಿ), ಓಯಾಜ್‌ ಶೇಖ್‌ (ಅಲ್ಪಸಂಖ್ಯಾತ).
ಜಿಲ್ಲಾ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳು ಮತ್ತು ಅವರ ಪಡೆದ ಮತಗಳು: ಶರಣು ವಾರದ (1033), ಪ್ರಶಾಂತಕುಮಾರ ಮಾಲಿಪಾಟೀಲ (510), ರಹೀಂಖಾನ್‌ ಪಠಾಣ (430), ಕುಶಾಲ ಅಂದೋಲಾ (400), ಅಮರನಾಥ ಶಿರವಾಳ (375), ಶಕೀಲ್‌ಅಹ್ಮದ ಸರಡಗಿ (325), ಕಾರ್ತೀಕ ನಾಟೀಕರ (300), ಭವಾನಿಕುಮಾರ ಧರ್ಗಿ (250).   

ವಿಧಾನ ಸಭಾ ಮತಕ್ಷೇತ್ರಗಳ ಅಧ್ಯಕ್ಷರು: ಶಿವಾನಂದ (ಕಲಬುರ್ಗಿ ದಕ್ಷಿಣ), ಅಯಾಜ್ ಖಾನ್‌ (ಕಲಬುರ್ಗಿ ಉತ್ತರ), ಹಣಮಂತ (ಕಲಬುರ್ಗಿ ಗ್ರಾಮೀಣ), ಮೊಹ್ಮದ್‌ ಇಮ್ರಾನ್‌ ಬಬ್ಲು (ಚಿತ್ತಾಪುರ), ಅಶೋಕ (ಸೇಡಂ), ಮಲ್ಲಿಕಾರ್ಜುನ (ಜೇವರ್ಗಿ), ಪ್ರಕಾಶ (ಅಫಜಲಪುರ), ಮೊಹ್ಮದ್ ಯುನೂಸ್‌ (ಆಳಂದ).

‘ಚಿಂಚೋಳಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಡೆದಿದೆ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಆ ಹುದ್ದೆಗೆ ಆಯ್ಕೆ ನಡೆದಿಲ್ಲ’ ಎಂದು ಮೂಲಗಳು ತಿಳಿಸಿವೆ.

ವಿಜಯೋತ್ಸವ: ಇಲ್ಲಿಯ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಫಲಿತಾಂಶ ಘೋಷಿಸುತ್ತಿದ್ದಂತೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಬೈಕ್‌ ರ್‍್ಯಾಲಿ ನಡೆಸಿದರು. ಕಾಂಗ್ರೆಸ್‌ ಯುವ ಮುಖಂಡರಾದ ಕಿರಣ ದೇಶಮುಖ, ಪ್ರವೀಣ ಪಾಟೀಲ ಹರವಾಳ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.