ಕಲಬುರ್ಗಿ: ಬೈಕ್‌ನ ಸದ್ದು, ವೀಲಿಂಗ್ ನೋಡಿ ಹೋ ಎಂದು ಕೂಗಿದ ಯುವಕರು, ಉಸಿರು ಬಿಗಿಹಿಡಿದು ಸಾಹಸ ಪ್ರದರ್ಶನ ವೀಕ್ಷಿಸಿದ ವಿದ್ಯಾರ್ಥಿಗಳು, ಆಸಕ್ತರು.ಇವು ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶುಕ್ರವಾರ ಕಂಡು ಬಂದ ದೃಶ್ಯಗಳು.
ರೇಸಿಂಗ್ ಬೈಕ್ ಬ್ರಾಂಡ್ ಕೆಟಿಎಂ ಆಯೋಜಿಸಿದ್ದ ಬೈಕ್ ಸಾಹಸ ಪ್ರದರ್ಶನವನ್ನು ವೀಕ್ಷಿಸಲು ಯುವಕರು, ಕಾಲೇಜು ವಿದ್ಯಾರ್ಥಿಗಳ ದಂಡೇ ನೆರೆದಿತ್ತು. ಚೆನ್ನೈನಿಂದ ಬಂದಿದ್ದ ವೃತ್ತಿಪರ ಬೈಕ್ ಸವಾರರು ಮೈನವಿರೇಳಿಸುವಂತೆ ಸಾಹಸವನ್ನು ಪ್ರದರ್ಶಿಸಿದರು. ಕೆಟಿಎಂ ಡ್ಯೂಕ್ ಬೈಕ್‌ನಲ್ಲಿ ಹತ್ತಾರು ಬಗೆಯ ಕಸರತ್ತು ಮಾಡಿದರು.
ಬಜಾಜ್ ಆಟೊ ಲಿಮಿಟೆಡ್‌ನ ಪ್ರೊಬೈಕಿಂಗ್ ವಿಭಾಗದ ಅಧ್ಯಕ್ಷ ಅಮಿತ್ ನಂದಿ ಮಾತನಾಡಿ, ‘ಕೆಟಿಎಂ ಬ್ರಾಂಡ್ ಅಧಿಕ ಸಾಮರ್ಥ್ಯದ ರೇಸಿಂಗ್ ಬೈಕ್‌ಗಳಿಗೆ ಹೆಸರುವಾಸಿಯಾಗಿದೆ. ಕೆಟಿಎಂ ಬೈಕ್‌ಗಳು ಸವಾರರಿಗೆ ಯಾವ ರೀತಿಯ ರೋಮಾಂಚಕ ಅನುಭವ ನೀಡಬಹುದು ಎನ್ನುವುದನ್ನು ಇಂಥ ಪ್ರದರ್ಶನದ ಮೂಲಕ ಸಾಬೀತುಪಡಿಸಲಾಗುತ್ತಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.