ADVERTISEMENT

ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಮೇ 2017, 7:05 IST
Last Updated 24 ಮೇ 2017, 7:05 IST

ನಾಪೋಕ್ಲು: ಯವಕಪಾಡಿ ಗ್ರಾಮದ  ತಾಮರ ರೆಸಾರ್ಟ್‌ ರಸ್ತೆಗೆ ಬೇಲಿ ಅಳವಡಿಸಿದ್ದು, ಮನೆಗಳಿಗೆ ತೆರಳಲು ರಸ್ತೆ ಇಲ್ಲವಾಗಿದೆ. ರಸ್ತೆಯನ್ನು ತೆರವುಗೊಳಿಸಿ ನಡೆದಾಡಲು ಅನುವು ಮಾಡಿಕೊಡಿ ಎಂದು ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಹಾಗೂ ಸತ್ಯಾನ್ವೇಷಣೆ ಸಮಿತಿ ಅಧ್ಯಕ್ಷ ಕೇಟೋಳಿರ ಸನ್ನಿ ಸೋಮಣ್ಣ ಒತ್ತಾಯಿಸಿದರು.

ನೇತೃತ್ವದಲ್ಲಿ ಕೆರೆತಟ್ಟು ಕಾಲೊನಿ ಅಡಿಯ ಜನಾಂಗದ ಮಧಿ ತಾಮರ ರೆಸಾರ್ಟ್‌ ಮುಖ್ಯ ಗೇಟಿನ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದ ತಂಡ ಕಕ್ಕಬ್ಬೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದರೂ ಸ್ಥಳಕ್ಕೆ ಆಗಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಂದಾಯ ಪರಿವೀಕ್ಷಕ  ರಾಮಯ್ಯ ಬಂದಾಗ ಆಕ್ರೋಶಗೊಂಡು ವಾಗ್ವಾದ ನಡೆಸಿದರು.

ರಾಮಯ್ಯ ಅವರು, ಉಸ್ತುವಾರಿ ಸಚಿವರು ಸರ್ವೆ ನಡೆಸಿ ರಸ್ತೆ ತೆರವಿಗೆ ಕ್ರಮಕೈಗೊಳ್ಳಲು ಆದೇಶ ನೀಡಿದ್ದರು, ಮುಖ್ಯ ಗೇಟಿನಿಂದ 200 ಮೀ ವರೆಗೆ ಸಾರ್ವಜನಿಕ ರಸ್ತೆ ಇದೆ. ಉಳಿದ ರಸ್ತೆಯು ತಾಮರ ರೆಸಾರ್ಟ್‌ಗೆ ಸಂಬಂಧಿಸಿದೆ. ರೆಸಾರ್ಟ್‌ ಮುಖ್ಯಸ್ಥರ ಜೊತೆಗೆ ಚರ್ಚಿಸಿ ಕ್ರಮಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ADVERTISEMENT

ಇದನ್ನು ಒಪ್ಪದ ಅಡಿಯ ಜನಾಂಗ ಪ್ರತಿನಿಧಿಗಳು, ಮುಖ್ಯಗೇಟ್‌ಅನ್ನು ಪೂರ್ಣ  ಮುಚ್ಚಲಾಗುತ್ತಿದೆ. ಮೇಲ್ಭಾಗದಲ್ಲಿ ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ರಸ್ತೆ ಸೌಲಭ್ಯಕ್ಕೆ ಅಡ್ಡಿ ಮಾಡಿದರೆ ಮತ್ತೆ ಪ್ರತಿಭಟಿಸುತ್ತೇವೆ ಎಂದು ಅಡಿಯ ಜನಾಂಗದ ಮುಖಂಡ ಚಾತ ಪ್ರತಿಕ್ರಿಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದಾರೆ. ಆ  ಭರವಸೆಯಂತೆ ಪ್ರತಿಭಟನೆ ಹಿಂಪಡೆಯಲಾಗಿದೆ. ವಾರದದಲ್ಲಿ ತೆರವು ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸತ್ಯಾನ್ವೇಶಣಾ ಸಮಿತಿ ಅಧ್ಯಕ್ಷ ಕೇಟೋಳಿರ ಸನ್ನಿ ಸೋಮಣ್ಣ ಹೇಳಿದರು.
ಅಡಿಯ ಜನಾಂಗಕ್ಕೆ ರಸ್ತೆ ನೀಡುವವರೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.