ADVERTISEMENT

ಕುಲ್ಲಚಂಡ, ಅಳಮೇಂಗಡಕ್ಕೆ ಗೆಲುವು

ತಾತಂಡ ಕಪ್ ಹಾಕಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 6:06 IST
Last Updated 25 ಏಪ್ರಿಲ್ 2014, 6:06 IST

ವಿರಾಜಪೇಟೆ: ಕುಲ್ಲಚಂಡ ಮತ್ತು ಅಳಮೇಂಗಡ ತಂಡಗಳು ಇಲ್ಲಿ ನಡೆಯುತ್ತಿರುವ ತಾತಂಡ ಕಪ್ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಗುರುವಾರ ಜಯ ಗಳಿಸಿದವು.

ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಕುಲ್ಲಚಂಡ ತಂಡವು 2–0 ಯಿಂದ ಮೂಕಚಂಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಪ್ರಕಾಶ್ (15ನಿ) ಮತ್ತು ಸಾಗರ್ (40ನಿ) ಗೋಲು ಹೊಡೆದು ತಂಡದ ಗೆಲುವಿಗೆ ಕಾರಣರಾದರು.

ಇನ್ನೊಂದು ಪಂದ್ಯದಲ್ಲಿ ಅಳಮೇಂಗಡ ತಂಡವು 3–0ಯಿಂದ  ಮುಂಡಚಾಡಿರ ತಂಡವನ್ನು ಪರಾಭವಗೊಳಿಸಿತು. ಅಳಮೇಂಗಡ ತಂಡದ ಪರವಾಗಿ ಕಾವೇರಮ್ಮ(4ನಿ), ಸೋಮಯ್ಯ(15ನಿ, 20ನಿ)  ಗೋಲು ದಾಖಲಿಸಿದರು.             
                                       
ಮಾಚಂಗಡ ತಂಡ ಮಾಳೇಟೀರ ( ಕೂಕ್ಲೂರು) ತಂಡವನ್ನು 3–1 ಗೋಲುಗಳಿಂದ ಮಣಿಸಿ ಎರಡನೆ ಸುತ್ತಿಗೆ ನಡೆಯಿತು. ಮಾಚಂಗಡದ ಪೊನ್ನಣ್ಣ (8ನಿ) , ಭರತ್ (19ನಿ), ಅಯ್ಯಪ್ಪ (38ನಿ)  ಗೋಲು ಗಳಿಸಿದರು. ಮಾಳೇಟೀರ ತಂಡದ  ಪರವಾಗಿ ಸೋಮಣ್ಣ (18ನಿ)  ಒಂದು ಗೋಲು ಗಳಿಸಿದರು.

ಕಟ್ಟೇರ ತಂಡ ಬೊಳ್ಳಿಯಂಡ ತಂಡದ ವಿರುದ್ಧ 5–0 ಗೋಲುಗಳಿಂದ ಗೆಲುವು ಸಾಧಿಸಿ ಮುನ್ನಡೆಯಿತು. ಕಟ್ಟೇರ ತಂಡದ ಅನು (13ನಿ,18ನಿ), ಗೌತಮ್(26ನಿ), ಸುದೇಶ್(28ನಿ) ಹಾಗೂ ಜಗನ್ (37ನಿ)  ಗೋಲು ಗಳಿಸಿದರು. ಅಮ್ಮಂಡ ತಂಡ 3–0ಯಿಂದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಅಮ್ಮಂಡ ತಂಡದ ಪರವಾಗಿ ಕಾರ್ಯಪ್ಪ (17ನಿ), ರೋಹನ್ (19ನಿ), ಸೋಮಯ್ಯ (28ನಿ) ಗೋಲು ದಾಖಲಿಸಿದರು.   

ಇನ್ನೊಂದು ಅಂಕಣದಲ್ಲಿ ನಡೆದ ಪಂದ್ಯದಲ್ಲಿ ಕೋಟೆರ ತಂಡ ಕಳ್ಳಿಚಂಡ ತಂಡದ ವಿರುದ್ದ 2 -–0 ಗೋಲುಗಳಿಂದ ಗೆಲುವು ದಾಖಲಿಸಿ ಮುನ್ನಡೆಯಿತು. ಕೋಟೆರ ತಂಡದ ಪರವಾಗಿ  ಭರತ್ (21ನಿ, 38ನಿ) ಗೋಲು ದಾಖಲಿಸಿದರು.  ಕಡೇಮಾಡ ತಂಡ 5 -–0 ಗೋಲುಗಳಿಂದ ಉಳ್ಳಿಯಡ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಕಡೇಮಾಡದ ಚರ್ಮಣ್ಣ(5ನಿ), ರಾಜಪ್ಪ (11ನಿ) ಮತ್ತು (37ನಿ), ಹರೀಶ್(17ನಿ), ಮಂದಣ್ಣ(35ನಿ) ಗೋಲು ಗಳಿಸಿದರು. 

ಬಿದ್ದಾಟಂಡ ತಂಡ  ಪೆಮ್ಮುಡಿಯಂಡ ತಂಡವನ್ನು 3–0 ಗೋಲುಗಳಿಂದ ಸೋಲಿಸಿ ಮುನ್ನಡೆಯಿತು. ಬಿದ್ದಾಟಂಡ ತಂಡದ ವಿವೇಕ್ ಅಯ್ಯಪ್ಪ(17ನಿ), ಮೇದಪ್ಪ (23ನಿ, 24ನಿ)  ಗೋಲು ಗಳಿಸಿದರು. ಮಲ್ಲಮಾಡ ತಂಡ ಮೇವಡ  ತಂಡವನ್ನು 2 -–1 ರಿಂದ ಸೋಲಿಸಿತು. ಮಲ್ಲಮಾಡ ತಂಡದ  ಕರುಂಬಯ್ಯ (28ನಿ, 39ನಿ) ಎರಡು ಗೋಲುಗಳನ್ನು ಬಾರಿಸಿದರು. ಮೇವಡ ತಂಡದ  ಸಚಿನ್ (20ನಿ) ತಂಡದ ಪರವಾಗಿ ಗೋಲು ಗಳಿಸಿದರು.  ಅಪಂಡೆರಂಡ ತಂಡವನ್ನು 2 -–0 ಗೋಲುಗಳಿಂದ ಪಾಲಂದಿರ ತಂಡ ಮಣಿಸಿ ಎರಡನೆ  ಸುತ್ತಿಗೆ ಪ್ರವೇಶಿಸಿತು. ಪಾಲಂದಿರ ತಂಡದ ನಾಣಯ್ಯ (23ನಿ) ಹಾಗೂ  ಜೀವನ್ (27ನಿ) ಗೋಲು ದಾಖಲಿಸಿದರು.

ಪರದಂಡ ತಂಡವು ಪಾಲೇಂಗಡ ತಂಡವನ್ನು 7–0 ಯಿಂದ ಸೋಲಿಸಿ ಮುನ್ನಡೆಯಿತು. ಪರದಂಡ ತಂಡದ ರಿನ್ಸ್ (4ನಿ), ಸದಾ ನಾಣಯ್ಯ (10ನಿ), ಪ್ರಸಾದ್ (14ನಿ), ರಂಜನ್ ಅಯ್ಯಪ್ಪ (20ನಿ), ಪ್ರಜ್ವಲ್ (21ನಿ), ದಿಲ್(43ನಿ) ಹಾಗೂ ಮೊಣ್ಣಪ್ಪ (48ನಿ) ಗೋಲು ಗಳಿಸಿದರು.  
    
ಕಪ್ಪು ಪಟ್ಟಿ: ಕೊಡಗು ಜಿಲ್ಲೆಯಲ್ಲಿ ಹೈಟೆನ್ಷನ್ ವಿದ್ಯುತ್ ಜಾಲ ಹಾಕಲು ವಿರೋಧಿಸಿ ಹೋರಾಟ ನಡೆಸಿದವರನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಗುರುವಾರ ತಾಲ್ಲೂಕು ಬಂದ ಕರೆ ನೀಡಲಾಗಿತ್ತು. ಇದಕ್ಕೆ ಬೆಂಬಲವಾಗಿ ಟೂರ್ನಿಯಲ್ಲಿ ಭಾಗವಹಿಸಿದ್ದ ತಾಂತ್ರಿಕ ಅಧಿಕಾರಿಗಳು ಕೈಗೆ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.