ADVERTISEMENT

ಕೂತಂಡ ತಂಡಕ್ಕೆ 4-–0 ಅಂತರದ ಗೆಲುವು

*ಮಾಜಿ ಚಾಂಪಿಯನ್ ಅಂಜಪರವಂಡ ತಂಡಕ್ಕೆ 3–0 ಅಂತರದ ಜಯ

​ಪ್ರಜಾವಾಣಿ ವಾರ್ತೆ
Published 5 ಮೇ 2017, 8:56 IST
Last Updated 5 ಮೇ 2017, 8:56 IST
ಜನರಲ್‌ ಕೆ.ಎಸ್‌.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗುರುವಾರ  ಬಿದ್ದಾಟಂಡ ಕಪ್‌ ಹಾಕಿ ಟೂರ್ನಿಯಲ್ಲಿ ಅಂಜಪರವಂಡ ಮತ್ತು ಓಡಿಯಂಡ ತಂಡಗಳ ನಡುವಿನ ಸೆಣೆಸಾಟ
ಜನರಲ್‌ ಕೆ.ಎಸ್‌.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗುರುವಾರ ಬಿದ್ದಾಟಂಡ ಕಪ್‌ ಹಾಕಿ ಟೂರ್ನಿಯಲ್ಲಿ ಅಂಜಪರವಂಡ ಮತ್ತು ಓಡಿಯಂಡ ತಂಡಗಳ ನಡುವಿನ ಸೆಣೆಸಾಟ   

ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿದ್ದಾಟಂಡ ಕಪ್ ಹಾಕಿ ಟೂರ್ನಿಯ ಗುರುವಾರದ ಪಂದ್ಯಗಳಲ್ಲಿ ಮಾಜಿ ಚಾಂಪಿಯನ್ ಅಂಜಪರುವಂಡ ತಂಡವು ಓಡಿಯಂಡ ತಂಡವನ್ನು ಸುಲಭದಲ್ಲಿ ಮಣಿಸಿತು.

ಪಂದ್ಯದಲ್ಲಿ ಅಂಜಪರುವಂಡ ತಂಡವು ಓಡಿಯಂಡವನ್ನು 3–-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು, ಅಂಜಪರುವಂಡ ಪರ ಅಭೀನ್ ಚಿಟ್ಟಿಯಪ್ಪ 2 ಗೋಲು ಹೊಡೆದರೆ ಕುಶಾಲಪ್ಪ 1 ಗೋಲು ಹೊಡೆದು ಗೆಲುವಿಗೆ ಕಾರಣರಾದರು.

ಇದರೊಂದಿಗೆ ಕುಪ್ಪಂಡ, ಕಂಗಾಂಡ, ಅರೆಯಡ, ನೆಲ್ಲಮಕ್ಕಡ. ಮಾಚಮಾಡ, ಚೋಕಿರ, ಚೆಪ್ಪುಡೀರ, ಚೇಂದಂಡ, ಕೂತಂಡ ತಂಡಗಳು ಸಹ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದು ಕೊಂಡವು.

ಕುಪ್ಪಂಡ ಮತ್ತು ಮಲ್ಲಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಪ್ಪಂಡ ತಂಡ 1–-0 ಗೋಲುಗಳಿಂದ ಸೋಲಿಸಿತು .ಉಭಯ ತಂಡಗಳು ಸಮಬಲದಿಂದ ಹೋರಾಟ ನಡೆಸಿದರೂ ಕೊನೆಗೆ ಕುಪ್ಪಂಡ ಪ್ರಧಾನ್ ಹೊಡೆದ 1 ಗೋಲಿನಿಂದ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.

ನಂತರದ ಪಂದ್ಯದಲ್ಲಿ ಕಂಗಾಂಡ ತಂಡವು ಕುಮ್ಮಂಡ ತಂಡವನ್ನು 1–-0 ಗೋಲುಗಳಿಂದ ಸೋಲಿಸಿತು. ಎರಡು ತಂಡಗಳು ಬಿರುಸಿನ ಆಟವನ್ನು ಪ್ರದರ್ಶಿಸಿ ಪುನಿತ್ ಮುತ್ತಪ್ಪ ಹೊಡೆದ 1 ಗೋಲಿ ನಿಂದ ಕಂಗಾಂಡ ತಂಡ ಜಯಭೇರಿ ಬಾರಿಸಿತು.

ಅರೆಯಡ ತಂಡವು ಕಾಳೇಂಗಡ ತಂಡವನ್ನು 3–1 ಗೋಲುಗಳಿಂದ ಸುಲಭವಾಗಿ ಮಣಿ ಸಿತು, ಅರೆಯಡ ತಂಡ ಬಿರುಸಿನ ಆಟವಾಡಿ ಪೆಮ್ಮಯ್ಯ 2 ಗೋಲು ಹೊಡೆದರೆ ಸನ್ನು ಚಿಣ್ಣಪ್ಪ 1 ಗೋಲು ಬಾರಿಸಿದರು. ಕಾಳೇಂಗಡ ಪರ ಬೋಪಣ್ಣ 1 ಗೋಲು ಹೊಡೆದರು. ನೆಲ್ಲಮಕ್ಕಡ ತಂಡವು ಪಾಡೇಯಂಡ ತಂಡವನ್ನು 1-–0 ಗೋಲುಗಳ ಅಂತರದಿಂದ ಮಣಿಸಿತು. ನೆಲ್ಲಮಕ್ಕಡ ಪರ ಸಚಿನ್ ಬೋಪಣ್ಣ ಗೋಲು ಹೊಡೆದರು.

ಮಾಚಮಾಡ ಮತ್ತು ಅನ್ನಾಡಿಯಂಡ ತಂಡಗಳ ಪಂದ್ಯದಲ್ಲಿ ಮಾಚ ಮಾಡ ಅನ್ನಾಡಿ ಯಂಡವನ್ನು 4-–0 ಗೋಲುಗಳಿಂದ ಸೋಲಿ ಸಿತು. ಪ್ರಾರಂಭದಲ್ಲಿಯೇ ಬಿರುಸಿನ ಆಟವನ್ನು ಪ್ರದರ್ಶಿಸಿದ ಮಾಚಮಾಡ ಯಶೀಕ್ 2, ಸುಬ್ರಮಣಿ 1, ಬೋಪಣ್ಣ 1 ಗೋಲು ಹೊಡೆದರು.

ನಂತರದ ಪಂದ್ಯದಲ್ಲಿ ಚೋಕಿರ ತಂಡವು ಚೌರೀರ ತಂಡವನ್ನು ಟೈಬ್ರೇಕರ್‌ನಲ್ಲಿ ಮಣಿಸಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಒಂದೊಂದು ಗೋಲುಗಳ ಸಮ ಬಲ ಸಾಧಿಸಿದವು, ಚೋಕಿರ ಪರ ಅಕ್ಷೀತ್ ಚಿಟ್ಟಿಯಪ್ಪ 1 ಗೋಲು ಹೊಡೆದರೆ ಚೌರೀರ ಪರ ದಯನ್ ತಿಮ್ಮಯ್ಯ ಗೋಲು ಹೊಡೆದರು.
ಚೆಪ್ಪುಡಿರ ತಂಡವು ಮುರು ವಂಡ ತಂಡವನ್ನು ಸುಲಭವಾಗಿ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತು.

ಚೇಪ್ಪುಡಿರ ಪರ ನರೇನ್ ಕಾರ್ಯಪ್ಪ 1. ಸೋಮಣ್ಣ 2 ಗೋಲು ಬಾರಿಸಿದರು. ಚೇಂದಂಡ ತಂಡವು ಮಾದಂಡ ತಂಡವನ್ನು 4-–0 ಗೋಲಿನಿಂದ  ಮಣಿಸಿತು. ಬಿರುಸಿನ ದಾಳಿ ನಡೆಸಿದ ಚೇಂದಂಡ ಪರ ತಮ್ಮಯ್ಯ1, ಒಲಂಪಿಯನ್ ನಿಕಿನ್ ತಿಮ್ಮಯ್ಯ 1, ವರುಣ್ 1, ಜಾಗೃತ್ 1 ಗೋಲು ಬಾರಿಸಿ ಮುನ್ನಡೆ ತಂದು ಕೊಟ್ಟರು.

ನಂತರದ ಪಂದ್ಯದಲ್ಲಿ ಮಾಜಿ ಚಾಂಪಿ ಯನ್ ಕೂತಂಡ ತಂಡವು ಮೂಕಳೇರ ತಂಡ ವನ್ನು 4–0 ಗೋಲಿ ನಿಂದ ಮಣಿ ಸಿತು. ಕೂತಂಡ ಪರ ಬೋಪಣ್ಣ 2, ಸಂತೋಶ್ 1, ಸೋಮಣ್ಣ 1 ಗೋಲು ಬಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.