ADVERTISEMENT

ತಡೆಗೋಡೆ ಕುಸಿತ: ಸಂಚಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 8:55 IST
Last Updated 8 ನವೆಂಬರ್ 2017, 8:55 IST

ಸಿದ್ದಾಪುರ: ಸಮೀಪದ ಇಂಜಿಲಗೆರೆ ಗ್ರಾಮದಿಂದ ಪುಲಿಯೇರಿಗೆ ತೆರಳುವ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಕಳೆದ ಜೂನ್‌ನಲ್ಲಿ ಸುರಿದ ಭಾರಿ ಮಳೆಗೆ ಕುಸಿದಿದ್ದು ಸಂಬಂಧಪಟ್ಟವರು ಯಾವುದೇ ಮುಂಜಾಗೃತಾ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪುಲಿಯೇರಿ ಗ್ರಾಮದ ಸುಮಾರು 400 ಮನೆಗಳಿಗೆ ಸಾಗುವ ಏಕೈಕ ರಸ್ತೆ ಇದು. ರಸ್ತೆಗೆ ಹೊಂದಿಕೊಂಡು ಹರಿಯುತ್ಇರುವ ತೋಡಿಗೆ ಕಟ್ಟಲಾಗಿದ್ದ ತಡೆಗೋಡೆಯು ಮಳೆಗಾಲದಲ್ಲಿ ಸಂಭವಿಸಿದ ಪ್ರವಾಹಕ್ಕೆ ಕೊಚ್ಚಿಹೋಗಿದೆ.

ಅಮ್ಮತ್ತಿ ಗ್ರಾ.ಪಂ ವ್ಯಾಪ್ತಿಗೆ ಒಳ ಪಡುವ ಪುಲಿಯೇರಿಯಲ್ಲಿ 1,500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು ಬಹುತೇಕ ಮಂದಿ ನೂತನ ಮನೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಲ್ಲಿ ತೊಡಗಿ ದ್ದಾರೆ. ಆದರೆ, ರಸ್ತೆ ಕುಸಿದು ಬಿದ್ದಿರುವ ಕಾರಣ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ತಲೆಯ ಮೇಲೆ ಹೊತ್ತು ಸಾಗಬೇಕಿದೆ ಎಂದು ಗ್ರಾಮಸ್ಥರಾದ ವಿಜಯ, ಉಣ್ಣಿಕೃಷ್ಣನ್, ಪ್ರಶಾಂತ್ ಮತ್ತು ಉಮ್ಮರ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.