ADVERTISEMENT

ಮರ ಸಾಗಣೆ: ಆದಿವಾಸಿ ಮುಖಂಡ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಮೇ 2017, 5:32 IST
Last Updated 23 ಮೇ 2017, 5:32 IST

ಸಿದ್ದಾಪುರ: ಮಾಲ್ದಾರೆ ರಕ್ಷಿತಾರಣ್ಯದಿಂದ ನಾಟಾಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ  ಪ್ರಕಣದಲ್ಲಿ ಸೋಮವಾರದಂದು ಮಡಿಕೇರಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ, ನಾಟಾ ಜಪ್ತಿ ಮಾಡಿ ಮೂವರನ್ನು ಬಂಧಿಸಿದ್ದಾರೆ.

ಬಂಧಿತರ ವಿರುದ್ಧ  ಅರಣ್ಯ ಹಕ್ಕು ಕಾಯಿದೆಯಡಿ ಮೊಕದ್ದಮೆ ದಾಖಲಿಸಿದ್ದಾರೆ. ಚೊಟ್ಟೆಪಾರೆ ಗಿರಿಜನ ಹಾಡಿಯ ಆದಿವಾಸಿ ಮುಖಂಡ ಜೆ.ಕೆ.ರಾಮು, ಜೆ.ಬಿ.ರಾಜ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಕಾಲೊನಿ ನಿವಾಸಿ ಎಸ್.ಕುಮಾರ ಬಂಧಿತರು. ವ್ಯಾನ್ನಲ್ಲಿ ತೇಗ ಹಾಗೂ ನಂದಿ ಮರದ ನಾಟಾಗಳನ್ನು ಪಿರಿಯಾಪಟ್ಟಣಕ್ಕೆ ಸಾಗಿಸುತ್ತಿದ್ದರು ಎಂದು ಅರಣ್ಯ ಅಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.

ಅಪಘಾತ; ಸಾವು
ಕುಶಾಲನಗರ: ಕಣಿವೆ ಗ್ರಾಮದ ಬಳಿ ಸೋಮವಾರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಶಿರಂಗಾಲ ಗ್ರಾಮದ ನಿವಾಸಿ ಧರ್ಮಪ್ಪ (45) ಮೃತಪಟ್ಟರು. ಧರ್ಮಪ್ಪ ಅವರು ಮಗ ಅಮಿತ್‌ ಜೊತೆಗೆ ಬೈಕ್‌ನಲ್ಲಿ ತೆರಳುವಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರಪೆಟ್ಟುಬಿದ್ದು, ಧರ್ಮಪ್ಪ ಮೃತಪಟ್ಟರು.
ಅಮೀತ್ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.