ADVERTISEMENT

ಅಂಬೇಡ್ಕರ್ ಜಯಂತಿ: ಕಡ್ಡಾಯ ಆಚರಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 4:55 IST
Last Updated 12 ಏಪ್ರಿಲ್ 2017, 4:55 IST

ಮಾಲೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ 126 ನೇ ಜಯಂತಿಯನ್ನು ತಾಲ್ಲೂಕಿನ ಎಲ್ಲ ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ವಿ ಸುಬ್ರಮಣ್ಯಂ ಅವರಿಗೆ ಮನವಿ  ಸಲ್ಲಿಸಿದರು.

ಏ.14ರಂದು ನಡೆಯುವ ಜಯಂತಿಯನ್ನು ಕಾಟಾಚಾರ ಎನ್ನುವಂತೆ ಆಚರಿಸದೆ ಅರ್ಥಪೂರ್ಣವಾಗಿ ಆಚರಿಸಬೇಕು. ಗ್ರಾಮಗಳಲ್ಲಿ ಎಲ್ಲಾ ಸಮುದಾಯದ ಮುಖಂಡರನ್ನು ಆಹ್ವಾನಿಸಬೇಕು ಎಂದು ಮನವಿ ಪತ್ರದಲ್ಲಿ ಕೋರಿದರು.

ಮನವಿ ಸ್ವೀಕರಿಸಿದ ಸುಬ್ರಮಣ್ಯಂ, ‘ಈಗಾಗಲೇ ಎಲ್ಲ ಕ್ಲಸ್ಟರ್‌ಗಳ ಸಿಆರ್‌ಪಿ ಮತ್ತು ಮುಖ್ಯ ಶಿಕ್ಷಕರ ಜೊತೆ  ಪೂರ್ವಭಾವಿ ಸಭೆ ನಡೆಸಲಾಗಿದೆ. ಎಲ್ಲಾ ಸಮುದಾಯದ ಮುಖಂಡರನ್ನು ಆಹ್ವಾನಿಸಿ ಅಂಬೇಡ್ಕರ್ ಜಯಂತಿ ಯಶಸ್ವಿಗೊಳಿಸಲು ತಿಳಿಸಿದ್ದೇನೆ’ ಎಂದರು.

ದಲಿತ ಸಂಘರ್ಷ ಸಮಿತಿ ಮುಖಂಡರಾದ  ವೆಂಕಟಾಪು ಸತ್ಯಂ, ತಿಪ್ಪಸಂದ್ರ ಶ್ರಿನಿವಾಸ್, ಸಂತೋಷ್, ದಿನ್ನೇರಿ ಶಿವಣ್ಣ, ದೊಡ್ಡಿ ಮುನಿರಾಜು, ಮುರಳಿ, ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.