ADVERTISEMENT

ಮಾನವ ಹಕ್ಕು ಆಯೋಗಕ್ಕೆ ವರದಿ

ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಕಾನೂನು ಉಲ್ಲಂಘನೆಯಾಗಿಲ್ಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 4:36 IST
Last Updated 10 ಏಪ್ರಿಲ್ 2017, 4:36 IST

ಕೆಜಿಎಫ್: ನಗರದ ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿ ನಡೆಸುವಾಗ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆಯು ಮಾನವ ಹಕ್ಕುಗಳ ಆಯೋಗಕ್ಕೆ ವರದಿ ನೀಡಿದೆ.

ರಾಜ್ಯ ಮಾನವ ಹಕ್ಕುಗಳ ಆಯೋ ಗವು ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಡ ಳಿತಕ್ಕೆ ಸೂಚನೆ ನೀಡಿತ್ತು. ಕಾಮಗಾರಿ ಬಗ್ಗೆ ವರದಿ ನೀಡುವಂತೆ ತಿಳಿಸಿತ್ತು.
ಸ್ಕೂಲ್‌ ಆಫ್  ಮೈನ್ಸ್‌ನಿಂದ ರಾಬರ್ಟಸನ್‌ಪೇಟೆಯ ಎಂ.ಜಿ.ವೃತ್ತದವ ರೆವಿಗೂ ರಸ್ತೆ ವಿಸ್ತರಣೆಗಾಗಿ ಲೋಕೋಪ ಯೋಗಿ ಇಲಾಖೆ ಇತ್ತೀಚೆಗೆ ತೆರವು ಕಾರ್ಯಾಚರಣೆ ನಡೆಸಿತ್ತು.

174 ಕಟ್ಟಡ ಗಳ ತೆರವಿಗೆ ಮುಂದಾಗಿತ್ತು. ಹದಿನೈದು ಕಟ್ಟಡ ಮಾಲೀಕರು ಈ ಸಂಬಂಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿ ದ್ದರು. ಈಗ ಹನ್ನೆರಡು ಕಟ್ಟಡ ಮಾಲೀಕರು ಕೂಡ ತಡೆಯಾಜ್ಞೆ ತಂದಿದ್ದಾರೆ.

ತಡೆಯಾಜ್ಞೆ ತಂದಿದ್ದ ಕಟ್ಟಡಗಳನ್ನು ಹೊರೆತಾಗಿ ಇತರ ಕಟ್ಟಡಗಳನ್ನು ಇಲಾಖೆಯ ತೆರವು ಗೊಳಿಸಲು ಪೊಲೀಸ್‌ ಇಲಾಖೆಯ ಸಹಕಾರದಿಂದ ನಡೆಸಿದ ಕಾರ್ಯಾಚರಣೆಗೆ ಪರ ಮತ್ತು ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ಕಾರ್ಯಕರ್ತರು ರಸ್ತೆ ವಿಸ್ತರಣೆ ಆಗಬೇಕು ಎಂದು ಪಟ್ಟು ಹಿಡಿದಿದ್ದರು. ಆರ್‌ಪಿಐ ಮಾಜಿ ಶಾಸಕ ಎಸ್‌.ರಾಜೇಂದ್ರನ್‌ ಇದಕ್ಕೆ ವಿರೋಧ ವ್ಯಕ್ತಪಡಿಸಿ, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರ್ತಕರ ಮೂಲಕ ದೂರು ಸಲ್ಲಿಸಿದ್ದರು.

ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸರು ಬಲವಂತವಾಗಿ ಮನೆಗಳನ್ನು ತೆರವು ಮಾಡಿಸುತ್ತಿದ್ದಾರೆ. ಯಾವುದೇ ಸಮಯಾವಕಾಶ ನೀಡಲಿಲ್ಲ. ಪೊಲೀಸ್‌ ಇನ್‌ಸ್ಪೆಕ್ಟರ್‌ ಮುಸ್ತಾಕ್ ಪಾಷಾ ನಿವಾಸಿಗಳ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ದೂರಿದ್ದರು. ಈ ಕಾರಣ ಮಾನವ ಹಕ್ಕುಗಳ ಆಯೋಗ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಿತ್ತು.

ರಸ್ತೆ ವಿಸ್ತರಣೆ ಮಾಡುವಾಗ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ. ರಸ್ತೆ ವಿಸ್ತರಣೆಗೆ ಮೂರು ತಿಂಗಳ ಮೊದಲೇ ಕಟ್ಟಡಗಳ ಮೇಲೆ ವಿಸ್ತರಣೆಯಾಗುವ ಅಂಚಿನ ಗುರುತನ್ನು ಹಾಕಲಾಗಿತ್ತು. ಎಲ್ಲಾ ರೀತಿಯ ಮಾಹಿತಿ ನೀಡಲಾಗಿತ್ತು.

ಯಾವುದೇ ರೀತಿಯ ನಗರಸಭೆಯಿಂದ ಅಗತ್ಯ ದಾಖಲೆಗಳನ್ನು ಕ್ರೋಡೀಕರಿಸಿ ಕೊಳ್ಳಲಾಗಿತ್ತು. ಆಟೊ ಮೂಲಕ ವ್ಯಾಪಕ ಪ್ರಚಾರ ಕೂಡ ಮಾಡಲಾಗಿತ್ತು ಎಂದು ಪೂರಕ ದಾಖಲೆಗಳನ್ನು ಇಲಾಖೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಿದೆ.

ಬಸ್‌ ನಿಲ್ದಾಣದ ಮುಂಭಾಗದಲ್ಲಿರುವ ಅಂಗಡಿಗಳಿಗೆ ಅಂಚಿನ ಗುರುತು ಹಾಕಿ ಎರಡು ವರ್ಷಗಳೇ ಸಂದಿದೆ. ಹೈಕೋರ್ಟಿನಿಂದ ಅನುಮತಿ ಪಡೆದ ನಂತರ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಂಗಡಿಗಳು ಕೂಡ ತೆರವು ಮಾಡುವ ಇರಾದೆಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT