ADVERTISEMENT

‘ಕತೆಗಳಿಂದ ಮಕ್ಕಳಲ್ಲಿ ಜೀವನ ಮೌಲ್ಯ ವೃದ್ಧಿ’

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 10:38 IST
Last Updated 25 ಜುಲೈ 2017, 10:38 IST

ಕುಷ್ಟಗಿ: ‘ಕತೆ ಹೇಳುವ ಮತ್ತು ಕೇಳುವ ಪ್ರವೃತ್ತಿಯಿಂದ ಮಕ್ಕಳಲ್ಲಿ ಶ್ರದ್ಧೆ, ದಯೆ, ತ್ಯಾಗದಂಥ ಜೀವನ ಮೌಲ್ಯಗಳು ಬೆಳೆದು ಆತ್ಮವಿಶ್ವಾಸ ಹೆಚ್ಚುತ್ತದೆ’ ಎಂದು ಶಿಕ್ಷಕ ಮಲ್ಲಪ್ಪ ಕುದರಿ ಹೇಳಿದರು.

ಪಟ್ಟಣದ ಹೊರ ವಲಯದ ವಿಜಯ ವಿಠ್ಠಲ ವಿದ್ಯಾಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ‘ಕಥಾ ಸಮಯ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನೀತಿ ಕತೆಗಳಲ್ಲಿನ ಆಸಕ್ತಿಯಿಂದ ಚಿಂತನಾ ಶಕ್ತಿ ಮತ್ತು ಬುದ್ಧಿಮತ್ತೆ ಹೆಚ್ಚುತ್ತದೆ. ಪಂಚತಂತ್ರ, ಕೃಷ್ಣದೇವರಾಯ ಆಸ್ಥಾನದ ತೆನಾಲಿ ರಾಮ, ಅಕ್ಬರ್ ಆಸ್ಥಾನದ ಬೀರಬಲ್‌ ಮತ್ತು ಅಡಗೋಲಜ್ಜಿ ಕತೆಗಳ ಬಗ್ಗೆ ಯಾಂತ್ರಿಕ ಯುಗದಲ್ಲೂ ಆಸಕ್ತಿ ಉಳಿದಿದೆ’ ಎಂದರು.

ADVERTISEMENT

ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಟರಾಜ ಸೋನಾರ, ‘ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಹೋಬಳಿ ಮಟ್ಟದಲ್ಲಿಯೂ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ’ ಎಂದು ಹೇಳಿದರು. ಶಿಕ್ಷಕರಾದ ಕುಮಾರಸ್ವಾಮಿ ಹಿರೇಮಠ ಹಾಗೂ ರಾಜೇಸಾಬ ನದಾಫ್ ಮಾತನಾಡಿದರು.ಹನುಮಂತಪ್ಪ ಯಾಳವಾರ ಸಾನ್ನಿಧ್ಯ ವಹಿಸಿದ್ದರು.

ಮುಖ್ಯಶಿಕ್ಷಕ ಎಚ್‌. ಮಹೇಶ, ರವೀಂದ್ರ ಬಾಕಳೆ, ದತ್ತಿ ದಾನಿಗಳಾದ ಪರಸಪ್ಪ ಪಂಚಮ, ದಾಕ್ಷಾಯಣಿ ಪಾಟೀಲ, ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಸಮಾಲೋಚಕ ದೊಡ್ಡಪ್ಪ ಜ್ಯೋತಿ,  ಬಸವ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ನಿರಗೇರಿ, ಶಿವಶಂಕರಪ್ಪ ಗೋನಾಳ, ಶರಣಪ್ಪ ಲೈನದ್, ದೊಡ್ಡ ಬಸವ ಸುಂಕದ, ಎಸ್.ವಿ.ಬ್ಯಾಲಾಳ, ಶಿಕ್ಷಕರಾದ ಶಿಲ್ಪಾ, ಸ್ಮೀತಾ ಪಾಟೀಲ. ಶಿಲ್ಪಾ ಕಾಮನೂರ, ಮಾಲಾ ಚಿತ್ರಗಾರ ಇದ್ದರು. ದೀಪಾ ಎಲಿಗಾರ ಸ್ವಾಗತಿಸಿದರು. ದಿವ್ಯಾ ನಿರೂಪಿಸಿದರು. ಶೈಲಾ ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.