ADVERTISEMENT

‘ಕೆರೆ ಅಂಗಳದಲ್ಲಿಯೇ ಹೂಳು’

​ಪ್ರಜಾವಾಣಿ ವಾರ್ತೆ
Published 23 ಮೇ 2017, 7:30 IST
Last Updated 23 ಮೇ 2017, 7:30 IST

ಯಲಬುರ್ಗಾ: ‘ತಾಲ್ಲೂಕಿನ ತಲ್ಲೂರು ಗ್ರಾಮದ ಕೆರೆ ಹೂಳನ್ನು ಹೊರಗಡೆ ಹಾಕದೆ ಕೆರೆಯ ಅಂಗಳದಲ್ಲಿ ಹಾಕುವ ಮೂಲಕ ಕೆರೆ ಅಭಿವೃದ್ಧಿಯ ಮೂಲ ಉದ್ದೇಶವನ್ನು ಪಿಡಿಒ ಹಾಳು ಮಾಡುತ್ತಿದ್ದಾರೆ’ ಎಂದು ತಲ್ಲೂರು ಗ್ರಾಮಸ್ಥರು ಆರೋಪಿಸಿದ್ದಾರೆ.

‘ವಜ್ರಬಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನಡೆಯುತ್ತಿದೆ. ಹೂಳನ್ನು ಕೆರೆಯ ಅಂಗಳದಲ್ಲಿ ಹಾಕುವ ಮೂಲಕ ಕೆರೆಗೆ ನೀರು ಹರಿದು ಬರುವ ದಾರಿಯನ್ನು ಬಂದ್‌ ಮಾಡಲಾಗಿದೆ.

ಮಳೆ ಬಂದರೆ ಮಣ್ಣು ಮತ್ತೆ ಕೆರೆ ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಗ್ರಾಮದ ರಮೇಶ ಹರಿಜನ, ಪರಸಪ್ಪ ಜತ್ತಿ ಆರೋಪಿಸಿದ್ದಾರೆ.

ADVERTISEMENT

‘ಚಿತ್ರನಟ ಯಶ್ ದಂಪತಿ ಈ ಕೆರೆ ಅಭಿವೃದ್ಧಿಗೆ ಮುಂದಾಗಿದ್ದು, ಕೂಡಲೇ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆರೆಯ ಅಭಿವೃದ್ದಿಗೆ ಸಹಕರಿಸಬೇಕು’ ಎಂದು ಗ್ರಾಮದ ನಾಗರಾಜ ತಲ್ಲೂರ, ಈರಣ್ಣ ತೋಟದ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.