ADVERTISEMENT

ದಲಿತರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 9:51 IST
Last Updated 14 ಏಪ್ರಿಲ್ 2017, 9:51 IST

ಗಂಗಾವತಿ: ತಾಲ್ಲೂಕಿನ ಕನಕಗಿರಿ ಕ್ಷೇತ್ರದ ತಿಪ್ಪನಾಳದಲ್ಲಿ ಸರ್ಕಾರಿ ಭೂಮಿಯ ಸಾಗುವಳಿಗೆ ಸಂಬಂಧಿ ಸಿದಂತೆ ದಲಿತರ ಮೇಲೆ ದೌರ್ಜನ್ಯ ನಡೆದಿರುವುದನ್ನು ಖಂಡಿಸಿ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.

ತಿಪ್ಪನಾಳ ಕೆರೆ ಒತ್ತುವರಿ ಹಾಗೂ ದಲಿತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ನಗರದ ನ್ಯಾಯಾಲಯದ ಮುಂದಿರುವ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೂ ಗುರುವಾರ  ಮೆರವಣಿಗೆ ನಡೆಸಿದರು.

ದಲಿತ ಮುಖಂಡ ತಿಪ್ಪಣ್ಣ ಆರತಿ ಮಾತನಾಡಿ, ತಿಪ್ಪನಾಳದ ಸರ್ವೆ ಸಂಖ್ಯೆ  29, 36, 35/1ರಲ್ಲಿ ಒಟ್ಟು 96 ಎಕರೆ ಸರ್ಕಾರಿ ಜಮೀನಿದೆ. ಕಳೆದ 60 ವರ್ಷಗಳಿಂದ 26ಕ್ಕೂ ಹೆಚ್ಚು ದಲಿತ ಕುಟುಂಬಗಳು ಸಾಗುವಳಿ ಮಾಡುತ್ತಿವೆ. ಆದರೆ ಈ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಕೆಲವರು ಒತ್ತುವರಿಗೆ ಯತ್ನಿಸಿ ದ್ದಾರೆ ಎಂದು ಆರೋಪಿಸಿದರು.

ಬಳಿಕ ಮಿನಿವಿಧಾನಸೌಧದ ಕಚೇರಿ ವರೆಗೂ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು,  ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.    ಭೂ ವಂಚಿತರ ಹೋರಾಟ ಸಮಿತಿಯ ಪ್ರಮುಖರಾದ ಭಾರದ್ವಾಜ್, ಜೆ.ನಾಗರಾಜ, ಮರಿಯಪ್ಪ ಕುಂಟೋಜಿ, ಕಂಠೆಪ್ಪ ಹಣವಾಳ, ಹಂಪೇಶ ಆರಿಗೋಲ್, ರಮೇಶ ಕಾಳಿ, ಹುಲ್ಲೇಶ ದೇವರಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.