ADVERTISEMENT

ನೇಕಾರರ ಅಭ್ಯುದಯಕ್ಕೆ ಹಲವು ಯೋಜನೆ

ಕೈಮಗ್ಗಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:06 IST
Last Updated 14 ಮಾರ್ಚ್ 2017, 6:06 IST

ಹನುಮಸಾಗರ: ನೇಕಾರರು ಸರ್ಕಾರದಿಂದ ದೊರಕಬಹುದಾದ ಎಲ್ಲ ಬಗೆಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.

ಭಾನುವಾರ ಬನಶಂಕರಿ ದೇವಸ್ಥಾನ ದಲ್ಲಿ ದೇವಾಂಗ ಸಮಾಜ, ಶ್ರೀಗುರು ಪುಟ್ಟರಾಜ ಗವಾಯಿಗಳ ಸಂಗೀತ ಕಲಾಶಿಕ್ಷಣ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾ ಗಿದ್ದ ಪ್ರವಚನ, ಸಂಗೀತ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಕಷ್ಟು ಏಳುಬೀಳು ಅನುಭವಿ ಸಿರುವ ಕೈಮಗ್ಗ ನೇಕಾರರು ಧೃತಿಗೆಡ ಬೇಕಿಲ್ಲ. ನೇಕಾರನಿಗೆ ಮುಟ್ಟಬೇಕಾದ ಪ್ರತಿಯೊಂದು ಸೌಲಭ್ಯಗಳನ್ನು ಪ್ರಾಮಾಣಿ ಕವಾಗಿ ತಲುಪಿಸುವ ಜವಾಬ್ದಾರಿ ನನ್ನದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಭೀಮಣ್ಣ ಅಗಸಿಮುಂದಿನ ಕಾರ್ಯಕ್ರಮ ಉದ್ಘಾಟಿಸಿದರು. ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ, ಮುಖಂಡ ಬಸವರಾಜ ಹಳ್ಳೂರ ಮಾತನಾಡಿದರು. ದೇವಾಂಗ ಸಮಾಜದ ರಾಜ್ಯ ಕಾರ್ಯದರ್ಶಿ ವಿರೂಪಾಕ್ಷಪ್ಪ ಗೂಳಿ, ಜಿಲ್ಲಾ ಘಟಕದ ಅಧ್ಯಕ್ಷ ಪರಪ್ಪ ಕಾಳಗಿ, ಅರ್ಬನ್ ಬ್ಯಾಂಕ್ ನಿರ್ದೇಶಕ ವಿಠಲಸಾ ಸಿಂಗ್ರಿ, ಗ್ರಾಮ ಪಂಚಾಯಿತಿ ಸದಸ್ಯೆ ಸುನಂದಾ ಸಿನ್ನೂರ, ಸೂಳಿಭಾವಿಯ ಶಾಖಾಂಬರಿ ನೇಕಾರ ಸೊಸೈಟಿಯ ಅಧ್ಯಕ್ಷ ಕೃಷ್ಣಾ ರಾಮದುರ್ಗ, ಪ್ರವಚನ ಕಾರ ಡಾ.ಚಾಮರಾಜ ಯಾಳಗಿ ಇದ್ದರು.

ಬಳಿಕ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯ ಅಡಿಯಲ್ಲಿ ಜಾನಪದ, ಸುಗಮ ಸಂಗೀತ ಕಾರ್ಯಕ್ರಮ ನಡೆ ಯಿತು. ಮಂಜುನಾಥ ದೊಡ್ಡಮನಿ (ಸುಗಮ ಸಂಗೀತ), ರಾಜಶೇಖರ ಕೊಪ್ಪಳ (ಜಾನಪದ) ಕಾರ್ಯಕ್ರಮ ಪ್ರಸ್ತುತಪಡಿಸಿದರು. ಡಿ.ಮಾರುತಿ ಬಿನ್ನಾಳ ತಬಲಾ ಹಾಗೂ ನಾಗರಾಜ ಶಾವಿ ಬಾನ್ಸುರಿ ವಾದನ ಪ್ರದರ್ಶಿಸಿದರು. ವಸಂತ ಸಿನ್ನೂರ ಸ್ವಾಗತಿಸಿ, ಶಿವಶಂಕರ ಮೆದಿಕೇರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.