ADVERTISEMENT

ಯಲಬುರ್ಗಾ: ಇ–ಸ್ಟಾಂಪಿಂಗ್‌ ಸೌಲಭ್ಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಮೇ 2017, 6:23 IST
Last Updated 17 ಮೇ 2017, 6:23 IST

ಯಲಬುರ್ಗಾ: ಸಹಕಾರ ಕ್ಷೇತ್ರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಸೇವೆಯನ್ನು ಸಮರ್ಪಕವಾಗಿ ಒದಗಿಸುವ ಮೂಲಕ ತನ್ನದೇ ಆದ ರೀತಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ವಿಶೇಷ ಕೊಡುಗೆ ನೀಡುತ್ತಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಶ್ರೀಗುರು ಸಿದ್ದಶ್ರೀ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಡಿಯಲ್ಲಿ ಇ–ಸ್ಪಾಂಪಿಂಗ್‌ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿವಿಧ ಸಹಕಾರ ಸಂಘಗಳ ಮೂಲಕ ಇ–ಸ್ಪಾಂಪಿಂಗ್‌ ವ್ಯವಸ್ಥೆ ಜಾರಿಗೆ ತರುವ ಮೂಲಕ ಸಹಕಾರ ಸಂಘಗಳನ್ನು ಹೆಚ್ಚು ಕ್ರಿಯಾಶೀಲತೆಯಿಂದ ಇರುವಂತೆ ಮಾಡಿವೆ. ವಿವಿಧ ಆರ್ಥಿಕ ಹಾಗೂ ಇನ್ನಿತರ ನಾಗರಿಕ ಸೇವೆ ಜೊತೆಗೆ ಈ ಸೇವೆಯೂ ಕೂಡಾ ಸೇರಿದ್ದು ಸಂಘದ ಆರ್ಥಿಕ ಬಲವರ್ಧನೆಗೂ ಹೆಚ್ಚು ಸಹಕಾರಿಯಾಗಿದೆ ಎಂದರು.

ತಾಲ್ಲೂಕಿನಲ್ಲಿ ಸಹಕಾರ ಕ್ಷೇತ್ರ ನಿರೀಕ್ಷೆಗೂ ಮೀರಿ ಅಭಿವೃದ್ಧಿಯಾಗುತ್ತಿದೆ. ಸಾಲ ವಸೂಲಾತಿಯಲ್ಲಿಯೂ ಗಮನಾರ್ಹ ಪ್ರಗತಿ ಕಾಣುತ್ತಿರುವುದರಿಂದ ಸಂಘಗಳು ಆರ್ಥಿಕ ಸಬಲವಾಗಿ ಅಸ್ತಿತ್ವದಲ್ಲಿವೆ. ಹಾಗೆಯೇ, ಸಹಕಾರ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಕೂಡಾ ತಾಲ್ಲೂಕಿನಲ್ಲಿದೆ. ಯುವಕರು ಹಾಗೂ ಆಸಕ್ತಿ ಮುಂದೆ ಬರಬೇಕಾಗಿದೆ ಎಂದು ಆಚಾರ ತಿಳಿಸಿದರು.

ADVERTISEMENT

ಕೆಪಿಸಿಸಿ ಸದಸ್ಯ ಬಸವರಾಜ ಉಳ್ಳಾಗಡ್ಡಿ, ಜೆಡಿಎಸ್‌ ಅಧ್ಯಕ್ಷ ಶ್ರೀಪಾದಪ್ಪ ಅಧಿಕಾರಿ, ಮುಖಂಡ ಸಿ.ಎಚ್‌. ಪಾಟೀಲ ಮಾತನಾಡಿ, ನಗರದಲ್ಲಿ ಇಂತಹ ಸೇವೆಗಳು ಹೆಚ್ಚಾಗಿ ಜನರಿಗೆ ಸುಲಭವಾಗಿ ಸಿಗುವಂತಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್‌.ಎನ್‌. ಶ್ಯಾಗೋಟಿ, ಅಮರಪ್ಪ ಕಲಬುರ್ಗಿ, ಸಂಗಣ್ಣ ತೆಂಗಿನಕಾಯಿ, ಕೆ.ಜಿ. ಪಲ್ಲೇದ, ರಾಜಶೇಖರ ಶ್ಯಾಗೋಟಿ, ಸಂಘದ ಅಧ್ಯಕ್ಷ ಪ್ರಕಾಶ ಬೇಲೇರಿ, ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದರಾಮೇಶ ಬೇಲೇರಿ, ಉಮೇಶ ಮೆಣಸಬೇರಿ, ವೀರಭದ್ರಯ್ಯ ಹಿತ್ತಲಮನಿ, ಬಸವರಾಜ ಲಾಡಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.