ADVERTISEMENT

ಭತ್ತದ ಬೆಳೆಗೆ ಕಂಬಳಿ ಹುಳು ಬಾಧೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 8:45 IST
Last Updated 13 ನವೆಂಬರ್ 2017, 8:45 IST
ಹುಳು ಬಾಧೆಯಿಂದಾಗಿ ತೆನೆಯಿಂದ ಭತ್ತದ ಕಾಳು ಉದುರಿ ಬಿದ್ದು ನಷ್ಟವಾಗಿರುವುದು (ಒಳಚಿತ್ರ). ಚನ್ನಸಂದ್ರ ಗ್ರಾಮದ ಕೃಷಿಕ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡಿರುವ ಕಂಬಳಿ ಹುಳುವಿನ ರೋಗ ಬಾಧೆ
ಹುಳು ಬಾಧೆಯಿಂದಾಗಿ ತೆನೆಯಿಂದ ಭತ್ತದ ಕಾಳು ಉದುರಿ ಬಿದ್ದು ನಷ್ಟವಾಗಿರುವುದು (ಒಳಚಿತ್ರ). ಚನ್ನಸಂದ್ರ ಗ್ರಾಮದ ಕೃಷಿಕ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡಿರುವ ಕಂಬಳಿ ಹುಳುವಿನ ರೋಗ ಬಾಧೆ   

ಮದ್ದೂರು: ತಾಲ್ಲೂಕಿನ ವಿವಿಧ ಗ್ರಾಮ ಗಳಲ್ಲಿ ಭತ್ತದ ಬೆಳೆಗೆ ಕಂಬಳಿ ಹುಳುವಿನ ಬಾಧೆ ಕಾಣಿಸಿಕೊಂಡಿದ್ದು, ರೈತರನ್ನು ಕಂಗಾಲಾಗಿಸಿದೆ. ಮೂರು ವರ್ಷಗಳಿಂದ ಬರದ ಸಂಕಷ್ಟಕ್ಕೆ ಸಿಲುಕಿ ಬೆಳೆ ಕಳೆದುಕೊಂಡಿದ್ದ ರೈತರು ಈ ಬಾರಿ ಲಭ್ಯವಿದ್ದ ನೀರಿನಲ್ಲಿ ಕಷ್ಟಪಟ್ಟು ಬೆಳೆದ ಭತ್ತಕ್ಕೆ ಹುಳುವಿನ ಬಾಧೆ ಕಾಣಿಸಿಕೊಂಡಿರುವುದು ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ. ಕಟಾವು ಹಂತಕ್ಕೆ ಬಂದಿದ್ದ ಬೆಳೆ ಕೈ ಸೇರುವ ಮುನ್ನವೇ ಕಾಣಿಸಿಕೊಂಡ ಹುಳುವಿನ ಬಾಧೆ ರೈತರ ನ್ನು ನಷ್ಟದ ಸುಳಿಗೆ ಸಿಲುಕಿಸುವಂತೆ ಮಾಡಿದೆ.

ಸಮೀಪದ ಚನ್ನಸಂದ್ರ ಗ್ರಾಮದ ಕೃಷಿಕರಾದ ಸುರೇಶ್, ಶಿವಪ್ಪ, ಪ್ರತಾಪ್, ಜಯರಾಮು ಸೇರಿದಂತೆ ಈ ಭಾಗದ ಸುಮಾರು 20ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬಾಧೆ ಕಾಣಿಸಿಕೊಂಡಿದೆ.

ಭತ್ತದ ಬುಡದಿಂದ ಕಾಣಿಸಿಕೊಳ್ಳುವ ಈ ಹುಳುಗಳು ತೆನೆಯನ್ನು ತಿಂದು ಹಾಕುತ್ತವೆ. ಅಳಿದುಳಿದ ಭತ್ತದ ಕಾಳುಗಳು ಕೆಳಕ್ಕೆ ಬಿದ್ದು ನಾಶವಾಗುತ್ತಿವೆ. ‘ಕೃಷಿ ಇಲಾಖೆ ಅಧಿಕಾರಿಗಳು ಹುಳುವಿನ ಬಾಧೆಯಿರುವ ಗ್ರಾಮಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಮಾಡಬೇಕಿದೆ.

ADVERTISEMENT

ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಬೇಕು. ಈ ಬಾಧೆ ಇನ್ನಷ್ಟು ಭತ್ತದ ಗದ್ದೆಗಳಿಗೆ ಹರಡುವ ಮುನ್ನ ಹುಳು ಹಾವಳಿ ನಿಯಂತ್ರಣಕ್ಕೆ ಸಲಹೆ ಸೂಚನೆ ನೀಡಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.