ADVERTISEMENT

ಲಂಚ: ಎಸಿಬಿ ಬಲೆಗೆ ಇಬ್ಬರು ಮಹಿಳಾ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 5:53 IST
Last Updated 16 ಏಪ್ರಿಲ್ 2017, 5:53 IST
ಮಂಡ್ಯ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ಶನಿವಾರ ಎಸಿಬಿ ಅಧಿಕಾರಿಗಳು ಕಡತ ಪರಿಶೀಲಿಸಿದರು
ಮಂಡ್ಯ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ಶನಿವಾರ ಎಸಿಬಿ ಅಧಿಕಾರಿಗಳು ಕಡತ ಪರಿಶೀಲಿಸಿದರು   

ಮಂಡ್ಯ: ಇಲ್ಲಿನ ಕಾವೇರಿ ನೀರಾವರಿ ನಿಗಮದ ಇಬ್ಬರು ಮಹಿಳಾ ಅಧಿಕಾರಿಗಳು ಶನಿವಾರ ಲಂಚ ತೆಗೆದುಕೊಳ್ಳುತ್ತಿದ್ದಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದರು.ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಜ್ಯೋತಿ ಹಾಗೂ ಸಹಾಯಕ ಎಂಜಿನಿಯರ್‌ ಶೋಭಾ ಸಿಕ್ಕಿಬಿದ್ದವರು.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಸಾವಂದಿಪುರ ಗ್ರಾಮದ ಗುತ್ತಿಗೆದಾರ ಕೃಷ್ಣಪ್ಪ ಎಂಬುವವರಿಗೆ ₹ 12,000 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.

ಕೃಷ್ಣಪ್ಪ ಅವರು ದಲಿತರ ಕಾಲೊನಿಯ ಚರಂಡಿ ಹಾಗೂ ರಸ್ತೆ ಕಾಮಗಾರಿ ಪೂರ್ಣಗೊಂಡ ಬಗ್ಗೆ ವರದಿ ಕೇಳಿದ್ದರು. ₹ 12,000 ಲಂಚ ಕೊಡುವಂತೆ ಅಧಿಕಾರಿಗಳು ಹೇಳಿದ್ದರು. ಮುಂಗಡವಾಗಿ ₹ 10,000 ಲಂಚ ಪಡೆಯುವಾಗಲೇ ಎಸಿಬಿ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ.

ADVERTISEMENT

ಎಸಿಬಿ ಡಿವೈಎಸ್‌ಪಿ ಶೈಲೇಂದ್ರ, ಸಿಪಿಐ ವೆಂಕಟೇಗೌಡ, ಎಸ್‌ಐ ಪ್ರಶಾಂತ್‌ ನೇತೃತ್ವದಲ್ಲಿ ದಾಳಿ ನಡೆಯಿತು. ತಂಡವು ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ಕಚೇರಿಯ ಕಡತಗಳನ್ನು ಪರಿಶೀಲನೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.