ADVERTISEMENT

ಇಂದಿರಾ ಕ್ಯಾಂಟಿನ್‌ ನಿವೇಶನ ವಿವಾದ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 7:07 IST
Last Updated 10 ಫೆಬ್ರುವರಿ 2018, 7:07 IST

ಮದ್ದೂರು: ಪಟ್ಟಣದಲ್ಲಿ ತೋಟಗಾರಿಕೆ ಇಲಾಖೆ ಆವರಣದಲ್ಲೇ ಇಂದಿರಾ ಕ್ಯಾಂಟಿನ್ ಆರಂಭಿಸಬೇಕು ಎಂದು ಆಗ್ರಹಪಡಿಸಿ ರಾಜ್ಯ ಯುವ ಒಕ್ಕಲಿಗರ ಸಂಘ ಮತ್ತು ಛಲವಾದಿ ಮಹಾಸಭಾ ತಾಲ್ಲೂಕು ಸಮಿತಿ ಸದಸ್ಯರು ಶುಕ್ರವಾರ ಪ್ರತಿಭಟಿಸಿದರು. ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದ ಅವರು, ಬಳಿಕ ಬೇಡಿಕೆಯನ್ನು ಒಳಗೊಂಡ ಮನವಿಯನ್ನು ಶಿರೇಸ್ತೆದಾರ್ ಸೋಮಶೇಖರ್‌ ಅವರಿಗೆ ಸಲ್ಲಿಸಿದರು.

ಯುವ ಒಕ್ಕಲಿಗರ ಸಂಘದ ಸಂಚಾಲಕಿ ಪ್ರಿಯಾಂಕಾ ಅಪ್ಪು ಪಿ.ಗೌಡ ಅವರು, ತೋಟಗಾರಿಕಾ ಇಲಾಖೆಗೆ ಹತ್ತಿರ ವಿವಿಧ ಕಚೇರಿಗಳಿವೆ. ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣವಿದೆ. ಇಲ್ಲಿ ಕ್ಯಾಂಟೀನ್‌ ಆರಂಭಿಸಿದರೆ ಜನರಿಗೆ ಅನುಕೂಲ ಎಂದರು.

ಕರ್ನಾಟಕ ರಾಜ್ಯ ಯುವ ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್, ಸದಸ್ಯರಾದ ಕೃಷ್ಣ, ಸಿದ್ದಪ್ಪ, ರೇವಂತ್, ಚೇತನ್, ಮರಲಿಂಗು, ಛಲವಾದಿ ಮಹಸಭಾ ತಾಲ್ಲೂಕು ಅಧ್ಯಕ್ಷ ಎಸ್.ಎ.ಅಂಬರೀಷ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಕೃಷ್ಣಮೂರ್ತಿ, ಕಬ್ಬಾಳಯ್ಯ, ವರುಣ್, ಮರಳಿಗ ಶಿವರಾಜು, ಮರಂಕಯ್ಯ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.