ADVERTISEMENT

ಮದರಸಾ ರೆಹಮಾನಿಯಾ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 28 ಮೇ 2017, 6:45 IST
Last Updated 28 ಮೇ 2017, 6:45 IST

ಮೈಸೂರು: ನಗರದ ವಿದ್ಯಾರಣ್ಯಪುರಂ ಮಸೀದಿ ರೆಹಮಾನಿಯಾ ಅಹಲೆ ಸುನ್ನತ್‌ ಸಮಾತ್‌ಗೆ ಸೇರಿದ ಸಿಲ್ಕ್‌ ಕಾರ್ಖಾನೆ ಹತ್ತಿರದ ಮದರಸಾ ರೆಹಮಾನಿಯಾ ಘಟಿಕೋತ್ಸವ, ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಈಚೆಗೆ ನಡೆಯಿತು.

ಬೇಸಿಗೆ ಶಿಬಿರದ 150 ವಿದ್ಯಾರ್ಥಿಗಳಿಗೆ ಹಜರತ್‌ ಮೌಲಾನಾ ಇರ್ಷಾದ್‌ ಆಲಂ ಅಶ್ರಫಿ ಸಾಹೇಬ್‌, ಖತೀಬ್ ಮಸೀದಿ ರೆಹಮಾನಿಯಾ ಮತ್ತು ಹಾಫೀಜ್ ಹಜರತ್‌ ಸಾಹೇಬ್‌ ತರಬೇತಿ ನೀಡಿದರು. ಇಸ್ಲಾಮಿಕ್‌ ಪಾಠ, ಹೆತ್ತವರಿಗೆ ಗೌರವ, ಕುರ್‌ಆನ್ ಹಾಗೂ ಪ್ರವಾದಿ ಮೊಹ್ಮದ್‌ ಅವರ ಶ್ಲೋಕಗಳ ಪಠಣವನ್ನು ಹೇಳಿಕೊಡಲಾಯಿತು.

ಕಳೆದ ವಾರ ಮದರಸಾದಲ್ಲಿ ನಡೆದ ಪರೀಕ್ಷೆಯಲ್ಲಿ ಬೀಬಿ ನೇಹಾ ಕಾತೂನ್‌ ಪ್ರಥಮ, ಫಿರ್ದೋಸ್‌ ಫಾತಿಮಾ, ಶದಾಬ್‌, ಮೊಹ್ಮದ್ ಅಫ್‌ನಾನ್, ಮೊಹ್ಮದ್‌ ರೋಶನ್ ದ್ವಿತೀಯ ಬಹುಮಾನ ಪಡೆದರು. ಅಜಾಂ ಅರೇಬಿಕ್ ಕಾಲೇಜು ಪ್ರಾಂಶುಪಾಲ ಹಜರತ್‌ ಮೌಲಾನಾ ಫಸೀವುಲ್ಲಾ ವಾರ್ಸಿ ಸಾಹೇಬ್ ಹಾಜರಿದ್ದರು. ವ್ಯವಸ್ಥಾಪಕ ಸಮಿತಿ ಖಜಾಂಚಿ ಅಬ್ದುಲ್ ರಶೀದ್ ಸ್ವಾಗತಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.