ADVERTISEMENT

ಮೃಗಾಲಯಕ್ಕೆ ಹೊಸ ಅತಿಥಿಗಳು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 9:56 IST
Last Updated 25 ಅಕ್ಟೋಬರ್ 2016, 9:56 IST
ಮೃಗಾಲಯಕ್ಕೆ ಹೊಸ ಅತಿಥಿಗಳು
ಮೃಗಾಲಯಕ್ಕೆ ಹೊಸ ಅತಿಥಿಗಳು   

ಮೈಸೂರು: ಇಲಿ, ಕೋತಿ ಜಾತಿಯ ಪ್ರಾಣಿಗಳು, ಹೈನಾ (ಕತ್ತೆ ಕಿರುಬು), ಕೊಕ್ಕರೆ ಹಾಗೂ ಹಂಸದ ಮರಿಗಳು ಇಲ್ಲಿನ ಚಾಮರಾಜೇಂದ್ರ ಮೃಗಾಲಯದ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗಿವೆ.

ಇಲಿ ಜಾತಿಯ ಪ್ರಾಣಿಯೊಂದು ಜೂನ್‌ನಲ್ಲಿ ಮರಿ ಹಾಕಿದೆ. ರಾಗಿಣಿ ಎಂಬ ಹೈನಾ ಸೆಪ್ಟೆಂಬರ್‌ನಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಕೋತಿ ಜಾತಿಯ ಪ್ರಾಣಿಯೊಂದು ಎರಡು ದಿನಗಳ ಹಿಂದೆ ಮರಿ ಹಾಕಿದೆ.

ಕಾರಂಜಿ ಕೆರೆಯಲ್ಲಿ ಕೊಕ್ಕರೆಯೊಂದು ಎರಡು ಮರಿಗಳಿಗೆ ಹಾಗೂ ಕಪ್ಪು ಹಂಸ ಐದು ಮರಿಗಳಿಗೆ ಜನ್ಮ ನೀಡಿವೆ. ತುಮಕೂರು ವಲಯದಿಂದ ರಕ್ಷಿಸಿ ತರಲಾಗಿರುವ ಕರಡಿ ಹಾಗೂ ಅದರ ಮರಿ ಆರೋಗ್ಯವಾಗಿವೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಕಮಲಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.