ADVERTISEMENT

ಸುಟ್ಟಮಣ್ಣಿನ ಬಸವ ಶಿಲ್ಪ ಪತ್ತೆ

ಚಿತ್ರದುರ್ಗ ಜಿಲ್ಲೆಯ ದೊಡ್ಡೇರಿಯಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:00 IST
Last Updated 9 ಜನವರಿ 2017, 9:00 IST
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿಯಲ್ಲಿ ಪತ್ತೆಯಾಗಿರುವ ಸುಟ್ಟಮಣ್ಣಿನ ಬಸವ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿಯಲ್ಲಿ ಪತ್ತೆಯಾಗಿರುವ ಸುಟ್ಟಮಣ್ಣಿನ ಬಸವ   

ಮೈಸೂರು: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿಯಲ್ಲಿ ಅಪರೂಪದ ಮಧ್ಯಯುದ ಅಪರೂಪದ ಸುಟ್ಟಮಣ್ಣಿನ ಮಲಗಿರುವ ಬಸವ ಶಿಲ್ಪವನ್ನು ಮೈಸೂರಿನ ಕುವೆಂಪುನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಸ್.ಜಿ. ರಾಮದಾಸರೆಡ್ಡಿ ಅವರ ತಂಡ ಪತ್ತೆ ಹಚ್ಚಿದೆ.

ಮಲಗಿರುವ ಸುಟ್ಟಮಣ್ಣಿನ ಚಿಕ್ಕಬಸವ ಶಿಲ್ಪ 7 ಇಂಚು ಸುತ್ತಳತೆ, 2.8 ಇಂಚು ಎತ್ತರ, 2.5 ಇಂಚು ಅಗಲ, ತಲೆಯ ಸುತ್ತಳತೆ 4 ಇಂಚು ಇದೆ. ಬಸವ 1.2 ಸೆಂ.ಮೀ ಪಾದದ ಪೀಠದ ಮೇಲೆ ಮಲಗಿದೆ. ಪಾದಪೀಠ ಚೌಕಾಕಾರವಾಗಿದ್ದು ಉಗುರಿನಿಂದ ಸುತ್ತಲೂ ಅಲಂಕಾರ ಮಾಡಿದೆ. ಬಸವನ ತಲೆಯನ್ನು ಬಲ ಭಾಗದತ್ತ ತಲೆ ಇರುವಂತೆ ಎತ್ತಿದೆ. ಬಾಲ ಉದ್ದವಾಗಿದ್ದು ಹಿಂದಿನಿಂದ ಮುಂದಿನ ಕಾಲಿನ ಹತ್ತಿರ ಸೇರಿಕೊಂಡಿದೆ.  ಕಾಲುಗಳು ಒಳಗಡೆ ಮಡಿಚಿಕೊಂಡಿವೆ. ಕೊರಳಿನ ಭಾಗದಲ್ಲಿ ಪಟ್ಟಿ ಇದ್ದು, ಉಗುರಿನ ಭಾಗದಿಂದ ಓರೆಯಾಗಿ ಅಲಂಕರಿಸಲಾಗಿದೆ.

ಬಸವನ ತಳಭಾಗದ ಪಾದ ಪೀಠ, ಬಸವನನ್ನು ತಲೆ ಕೆಳಗಾಗಿ ಮಾಡಿ ನೋಡಿದರೆ ನೀರಿನ ತೊಟ್ಟಿಯಂತೆ ಇದೆ. ತಳಭಾಗ 2 ಇಂಚು ಚೌಕಾಕಾರವಾಗಿದೆ. 1 ಸೆಂ.ಮೀ ಆಳವಿದೆ. ಹಿಂಭಾಗದ ಬಾಲದ ಮಧ್ಯೆ ಉಗುರಿನಿಂದ ಎರಡು ಗೆರೆಗಳನ್ನು ಕೊರೆದಿದೆ. ಬಾಲದ ಕೊನೆಗೆ ಚಿಕ್ಕಪಟ್ಟಿ ಮಾಡಿ ಕೂದಲನ್ನು ಮಟ್ಟಸವಾಗಿ 0.8 ಸೆಂ.ಮೀ ಉದ್ದ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ತಂಡದಲ್ಲಿ ಯಾದಲಗಟ್ಟೆ ಜಗನ್ನಾಥ್, ಉಪ್ಪಾರಹಟ್ಟಿ ಚಿತ್ತಯ್ಯ ಇದ್ದಾರೆ. ಇದೇ ತರಹದ ಮಣ್ಣಿನ ಬಸವ ಅಮ್‌ರೆಲಿ, ಕೊಂಡಾಪುರ್, ಆಂಧ್ರ ಪ್ರದೇಶದ ಯಲ್ಲೇಶ್ವರಮು ಉತ್ಖನನದ ನೆಲೆಗಳಲ್ಲಿ ದೊರೆಕಿದ್ದು ಹೋಲಿಕೆಯಿವೆ. ಇದೇ ನೆಲೆಯಲ್ಲಿ ಚಿಕ್ಕ ಚಿಕ್ಕ ಲಿಂಗಗಳು, ನೂತನ ಶಿಲಾಯುಗ ಸಂಸ್ಕೃತಿ, ಬೃಹತ್‌ ಶಿಲಾಯುಗ ಸಂಸ್ಕೃತಿ, ಶಾತವಾಹನರ ಕಾಲದ ಅವಶೇಷಗಳ ಬಗ್ಗೆ ಇದೇ ಸಂಶೋಧಕರು ಡಾ.ಎನ್.ಎಸ್. ರಂಗರಾಜು ಅವರ ಮಾರ್ಗದರ್ಶನದಲ್ಲಿ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.