ADVERTISEMENT

'ಎನ್‌ಎಸ್‌ಎಸ್‌: ಮೈಸೂರು ವಿ.ವಿ ಮೊದಲು'

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 4:13 IST
Last Updated 15 ಜನವರಿ 2018, 4:13 IST
ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಭಾನುವಾರ ಮೈಸೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಎನ್‌ಎಸ್‌ಎಸ್ ಪ್ರಶಸ್ತಿಗಳನ್ನು ವಿವಿಧ ಸಾಧಕರಿಗೆ ಪ್ರದಾನ ಮಾಡಲಾಯಿತು.
ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಭಾನುವಾರ ಮೈಸೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಎನ್‌ಎಸ್‌ಎಸ್ ಪ್ರಶಸ್ತಿಗಳನ್ನು ವಿವಿಧ ಸಾಧಕರಿಗೆ ಪ್ರದಾನ ಮಾಡಲಾಯಿತು.   

ಮೈಸೂರು: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ (ಎನ್‌ಎಸ್‌ಎಸ್‌) ಮೈಸೂರು ವಿಶ್ವವಿದ್ಯಾನಿಲಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್ ತಿಳಿಸಿದರು.

ಮೈಸೂರು ವಿ.ವಿ ರಾಷ್ಟ್ರೀಯ ಸೇವಾ ಯೋಜನೆ ಇಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ಸಪ್ತಾಹ ಹಾಗೂ 2016–17ನೇ ಸಾಲಿನ ವಿಶ್ವವಿದ್ಯಾನಿಲಯಮಟ್ಟದ ಎನ್‌ಎಸ್‌ಎಸ್‌ ಪ್ರಶಸ್ತಿ ಪ್ರದಾನ ಸಮಾರಂ ಭದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ 32 ಲಕ್ಷ ಎನ್‌ಎಸ್‌ಎಸ್‌ ಕಾರ್ಯಕರ್ತರು ಇದ್ದಾರೆ. ಈ ಮೊದಲು ರಾಜ್ಯದವರ ಸಂಖ್ಯೆ ಕೇವಲ 3 ಲಕ್ಷ ಇತ್ತು. ಇದನ್ನು 10 ಲಕ್ಷಕ್ಕೆ ಹೆಚ್ಚು ಮಾಡಬೇಕೆಂದು ಗುರಿ ಇಟ್ಟುಕೊಂಡೆವು. ಈಗ 6 ಲಕ್ಷವನ್ನು ತಲುಪಿದ್ದೇವೆ. ಈ ಮೂಲಕ ಅತ್ಯಂತ ಹೆಚ್ಚು ಎನ್‌ಎಸ್‌ಎಸ್ ಕಾರ್ಯಕರ್ತರನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಪಡೆದಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
***
ಮನುಷ್ಯ ಶ್ರೇಷ್ಠನಾಗುವುದಕ್ಕೆ ಬೇಕಾದ ಎಲ್ಲವೂ ಅವನಲ್ಲೇ ಇವೆ. ನಿತ್ಯದ ನಮ್ಮ ವರ್ತನೆಯಿಂದ ಚಾರಿತ್ರ್ಯ ನಿರ್ಮಾಣವಾಗುತ್ತದೆ.
– ಮಾತಾ ವಿವೇಕಮಯಿ, ಭವತಾರಿಣಿ ಆಶ್ರಮ, ಬೆಂಗಳೂರು.
**

ಖಿನ್ನತೆಗೆ ಒಳಗಾದವರು ಸ್ವಾಮಿ ವಿವೇಕಾನಂದ ಅವರ ಬರಹಗಳನ್ನು ಓದಿದರೆ ಆತ್ಮಹತ್ಯೆಯಿಂದ ವಿಮುಖರಾಗಬಹುದು.
– ಡಿ.ಭಾರತಿ, ಮೈಸೂರು ವಿ.ವಿ. ಕುಲಸಚಿವೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.