ADVERTISEMENT

ಬಸವೇಶ್ವರ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:25 IST
Last Updated 25 ಏಪ್ರಿಲ್ 2017, 5:25 IST
ಶಕ್ತಿನಗರ ಸಮೀಪದ ಇಂದುಪುರದಲ್ಲಿ ಬಸವೇಶ್ವರರ ಅಶ್ವರೂಢ ಪುತ್ಥಳಿಯನ್ನು ಸಚಿವ ಈಶ್ವರ ಖಂಡ್ರೆ ಸೋಮವಾರ ಅನಾವರಣಗೊಳಿಸಿದರು
ಶಕ್ತಿನಗರ ಸಮೀಪದ ಇಂದುಪುರದಲ್ಲಿ ಬಸವೇಶ್ವರರ ಅಶ್ವರೂಢ ಪುತ್ಥಳಿಯನ್ನು ಸಚಿವ ಈಶ್ವರ ಖಂಡ್ರೆ ಸೋಮವಾರ ಅನಾವರಣಗೊಳಿಸಿದರು   

ಶಕ್ತಿನಗರ: ತೆಲಂಗಾಣದ ಮಾಗನೂರು ವೀರಶೈವ ಲಿಂಗಾಯತ ಸಮಾಜದಿಂದ ರಾಜ್ಯದ ಗಡಿಭಾಗ  ಇಂದುಪುರ ಗ್ರಾಮದಲ್ಲಿ ಸೋಮವಾರ ಜಗಜ್ಯೋತಿ ಬಸವೇಶ್ವರರ ಅಶ್ವರೂಢ ಪುತ್ಥಳಿ ಅನಾವರಣ ಸಮಾರಂಭ ನಡೆಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭ, ಕಳಶ, ಮಂಗಳ ವಾದ್ಯಗಳೊಂದಿಗೆ ಭಾಗವಹಿಸಿದ್ದರು.

ಬಸವಣ್ಣನವರ ಪುತ್ಥಳಿಗೆ ತೆಲಂಗಾಣ ಶಾಸಕ ಚಿಟ್ಟಂ ರಾಮಮೋಹನರೆಡ್ಡಿ  ಪೂಜೆ ಸಲ್ಲಿಸಿದರು. ಬಾಡಿಯಾಲ– ಮಳಖೇಡ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಕಡೇಚೂರು ಸಂಸ್ಥಾನ ಹಿರೇಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಗಂವ್ಹಾರ ಮಠದ ಸೋಪಾನಾಥ ಸ್ವಾಮೀಜಿ, ಚೇಗುಂಟಾ ಮಠದ ಡಾ.ಕ್ಷೀರಲಿಂಗ ಸ್ವಾಮೀಜಿ, ಗುರ್ಜಾಲ ಮಠದ ಸೂಗೂರಯ್ಯ ಸ್ವಾಮೀಜಿ,  ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಈಶ್ವರ ಖಂಡ್ರೆ, ಶಾಸಕ ಡಾ.ಎ.ಬಿ. ಮಾಲಕರಡ್ಡಿ, ನಿವೃತ್ತ ಅಧಿಕಾರ ಶಂಕರ ಬಿದರಿ, ಅಖಿಲ ಭಾರತ ವೀರಶೈವ ಮಹಾಸಭೆ ಉಪಾಧ್ಯಕ್ಷ ಲಿಂಗನಗೌಡ ಮಲ್ಹಾರ, ವೆಂಕಟರೆಡ್ಡಿ ಮುದ್ನಾಳ, ಮಕ್ತಲ್ ವೀರಶೈವ ಸಮಾಜದ ಅಧ್ಯಕ್ಷ ಗುಡಿಗಂಡ್ಲ ವೀರೇಶ, ಗುರುಪ್ರಸಾದ ಸ್ವಾಮಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.