ADVERTISEMENT

ಕನಕಪುರ: ಶನೇಶ್ವರ, ‌ಈಶ್ವರ ದೇವಾಲಯದ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 9:41 IST
Last Updated 7 ಮಾರ್ಚ್ 2018, 9:41 IST
ಕನಕಪುರ ನಗರದ ಎಸ್‌.ಕರಿಯಪ್ಪ ರಸ್ತೆಯಲ್ಲಿನ ಶನೇಶ್ವರ ಮತ್ತು ಈಶ್ವರ ದೇವಾಲಯದ ಉದ್ಘಾಟನೆಯನ್ನು ಜೆಡಿಎಸ್ ಮುಖಂಡ ಡಿ.ಎಂ.ವಿಶ್ವನಾಥ್‌ ನೆರವೇರಿಸಿದರು
ಕನಕಪುರ ನಗರದ ಎಸ್‌.ಕರಿಯಪ್ಪ ರಸ್ತೆಯಲ್ಲಿನ ಶನೇಶ್ವರ ಮತ್ತು ಈಶ್ವರ ದೇವಾಲಯದ ಉದ್ಘಾಟನೆಯನ್ನು ಜೆಡಿಎಸ್ ಮುಖಂಡ ಡಿ.ಎಂ.ವಿಶ್ವನಾಥ್‌ ನೆರವೇರಿಸಿದರು   

ಕನಕಪುರ: ನಗರದ ಎಸ್‌.ಕರಿಯಪ್ಪ ರಸ್ತೆಯಲ್ಲಿನ ಶನೇಶ್ವರ ಮತ್ತು ಈಶ್ವರ ದೇವಾಲಯದ 15ನೇ ವಾರ್ಷಿಕೋತ್ಸವ ಸಮಾರಂಭ ಭಕ್ತರ ಸಮ್ಮುಖದಲ್ಲಿ ಸೋಮವಾರ ನಡೆಯಿತು.

ಭಾನುವಾರ ಸಂಜೆ ಶನೇಶ್ವರಸ್ವಾಮಿ, ಛಾಯಾದೇವಿ ಮತ್ತು ಬಾಣಂತಮರಾಮ್ಮ ದೇವಿಯನ್ನು ನಗರದ ದೇಗುಲ ಮಠದಿಂದ ಎಸ್‌.ಕರಿಯಪ್ಪ ರಸ್ತೆಯಲ್ಲಿನ ದೇವಾಲಯಕ್ಕೆ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

ಸೋಮವಾರ ಬೆಳಿಗ್ಗೆ ಗಣಪತಿ ಹೋಮ, ನವಗ್ರಹ ಶಾಂತಿ ಯೊಂದಿಗೆ ಮಹಾ ಮಂಗಳಾರತಿ ಮಾಡಲಾಯಿತು. ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.

ADVERTISEMENT

ಅರ್ಚಕ ಪ್ರಕಾಶ ಅವರು ವಿಶೇಷ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.