ADVERTISEMENT

ಮಾಗಡಿ ರೇಷ್ಮೆ ಮಾರುಕಟ್ಟೆ ಮೊದಲನೇ ಸ್ಥಾನ ಸಂತಸ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 11:48 IST
Last Updated 2 ಜನವರಿ 2017, 11:48 IST

ಮಾಗಡಿ: 9ನೇ ಸ್ಥಾನದಲ್ಲಿದ್ದ ಮಾಗಡಿ ರೇಷ್ಮೆ ಮಾರುಕಟ್ಟೆಯನ್ನು ಮೊದಲನೇ  ಸ್ಥಾನಕ್ಕೆ ತರುವ ಮೂಲಕ ಮಾದರಿ ರೇಷ್ಮೆ ಮಾರುಕಟ್ಟೆಯನ್ನಾಗಿ ಪರಿವರ್ತಿಸಲು ಶ್ರಮಿಸಿದ ರೇಷ್ಮೆ ಮಾರುಕಟ್ಟೆ ಸಹಾಯಕ ನಿರ್ದೇಶಕ ಡಾ.ಎಂ.ಕೆ.ಪ್ರಭಾಕರ್ ಅವರಿಗೆ ಸರ್ಕಾರ ಮುಂಬಡ್ತಿ ನೀಡಿದ್ದು, ತಾಲ್ಲೂಕಿನ ರೈತರಲ್ಲಿ ಸಂತಸ ತಂದಿದೆ ರೇಷ್ಮೆ ಬೆಳೆಗಾರ ಲೋಕೇಶ್ ಸಂತಸ ವ್ಯಕ್ತಪಡಿಸಿದರು.

ಇಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಮುಂಬಡ್ತಿ ಪಡೆದು ಉಪನಿರ್ದೇಶಕರಾಗಿ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆಯಾಗಿರುವ ಡಾ.ಎಂ.ಕೆ.ಪ್ರಭಾಕರ್ ಅವರಿಗೆ ಪಟ್ಟಣದಲ್ಲಿ ರೇಷ್ಮೆ ಬೆಳೆಗಾರರು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ಅವರು ಮಾತನಾಡಿದರು.

ತಾಂತ್ರಿಕತೆಯ ಬೇಸಾಯ, ರೇಷ್ಮೆ ಗೂಡಿನಲ್ಲಿ ಉತ್ತಮ ಇಳುವರಿ, ಗುಣಮಟ್ಟದ ಗೂಡನ್ನು ಬೆಳೆಯುವಂತೆ ರೈತರಿಗೆ ಅವರು ನಿರಂತರವಾಗಿ ಮಾರ್ಗದರ್ಶನ ನೀಡಿದವರು ಎಂದರು. ಸರ್ಕಾರದಿಂದ ಸಿಗುವ ಸಮಗ್ರ ಸವಲತ್ತು ರೈತರಿಗೆ ತಲುಪಿಸುವಲ್ಲಿ ಪ್ರಭಾಕರ್ ಯಶಸ್ವಿಯಾದರು ಎಂದು ಮೆಚ್ಚಿಕೊಂಡು ಶುಭ ಕೋರಿದರು.

ಬೀಳ್ಕೊಡುಗೆ ಸ್ವೀಕರಿಸಿದ ಎಂ.ಕೆ. ಪ್ರಭಾಕರ್ ಅವರು ಮಾತನಾಡಿ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಗುಣಮಟ್ಟದ ರೇಷ್ಮೆಗೂಡು ಬೆಳೆದು ಮಾರುಕಟ್ಟೆ ಮಾಡಿದರೆ, ತಾನಾಗಿಯೇ ಬೇಡಿಕೆ ಹೆಚ್ಚುತ್ತದೆ ಎಂದು ತಿಳಿಸಿದರು. ರೇಷ್ಮೆ ಅಭಿವೃದ್ಧಿ ಆಯುಕ್ತ ಡಿ. ಸತೀಶ್ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ: ಕುಣಿಗಲ್ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಶಿವ ನಾಗೇಂದ್ರ, ರಂಗಪ್ಪ, ಮಾಗಡಿ ರೇಷ್ಮೆ ಇಲಾಖೆಯ ಉಪನಿರ್ದೇಶಕ ನಸೀರ್ ಅಹಮದ್, ಸಹಾಯಕ ನಿರ್ದೇಶಕ, ಬಿ.ಪುಟ್ಟಸ್ವಾಮಿ, ಕುಣಿಗಲ್ ಸಹಾಯಕ ನಿರ್ದೇಶಕ ರವಿ, ಹುಲಿಯೂರುದುರ್ಗ ರೇಷ್ಮೆ ಸಹಾಯಕ ನಿರ್ದೇಶಕ ಅಣ್ಣಾಜಿ, ಮಾಗಡಿ ರೇಷ್ಮೆ ಸಹಾಯಕ ನಿರ್ದೇಶಕಿ ಪಾರ್ವತಮ್ಮ, ಸೋಲೂರು ಸಹಾಯಕ ನಿರ್ದೇಶಕ ಕೃಷ್ಣಬಾಬು, ಕುದೂರು ಮಾರುಕಟ್ಟೆ ರೇಷ್ಮೆ ಸಹಾಯಕ ನಿರ್ದೇಶಕ ಆಲೂರೇಗೌಡ, ನಿವೃತ್ತ ಜಂಟಿ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ಉಪ ನಿದೇಶಕ ಮಸ್ತಾಪ್ ಅಲಿಖಾನ್, ವಿ.ಜಿ.ದೊಡ್ಡಿ ಮಾರುಕಟ್ಟೆ ಸಹಾಯಕ ನಿರ್ದೇಶಕ ಸತೀಶ್, ಬೆಂಗಳೂರು ರೇಷ್ಮೆ ಸಹಾಯಕ ನಿರ್ದೇಶಕಿ ಶೈಲಜಾ ಅವರನ್ನೂ ರೇಷ್ಮೆ ಬೆಳೆಗಾರರು ಸನ್ಮಾನಿಸಿದರು.

ರೇಷ್ಮೆ ಬೆಳೆಗಾರರಾದ ದೊಡ್ಡಯ್ಯ, ತಿಮ್ಮಯ್ಯ, ಮಂಜು, ಕರೀಗೌಡ, ಶಿವಕುಮಾರ್, ಅನಂತ್, ಶಿವಲಿಂಗಯ್ಯ, ಟಿ.ಸಿ.ಶಿವಣ್ಣ, ಎಂ.ಜಿ.ರಾಮಕೃಷ್ಣ, ಸೋಮಣ್ಣ ಹಾಗೂ ರೇಷ್ಮೆ ಮಾರುಕಟ್ಟೆ ಸಿಬ್ಬಂದಿ, ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.