ADVERTISEMENT

ಸರ್ಕಾರವೇ ಗಂಗಾ ಜಯಂತಿ ಆಚರಿಸಲಿ

​ಪ್ರಜಾವಾಣಿ ವಾರ್ತೆ
Published 6 ಮೇ 2017, 8:36 IST
Last Updated 6 ಮೇ 2017, 8:36 IST
ಮಾಗಡಿ ತಾಲ್ಲೂಕು ಗಂಗಾಮತಸ್ಥರ ಸಂಘದ ವತಿಯಿಂದ ಗಂಗಾ ಜಯಂತಿ ನಡೆಯಿತು
ಮಾಗಡಿ ತಾಲ್ಲೂಕು ಗಂಗಾಮತಸ್ಥರ ಸಂಘದ ವತಿಯಿಂದ ಗಂಗಾ ಜಯಂತಿ ನಡೆಯಿತು   

ಮಾಗಡಿ: ‘ನಮ್ಮ ಕುಲದೇವತೆ ಗಂಗಾಮಾತೆಯ ಜಯಂತಿ ಸರ್ಕಾರದ ವತಿಯಿಂದ ಆಚರಿಸಬೇಕು’ ಎಂದು ತಾಲ್ಲೂಕು ಗಂಗಾಮತಸ್ಥರ ಸಂಘದ ಕಾರ್ಯದರ್ಶಿ ಎಲ್‌.ಜವರಪ್ಪ ಒತ್ತಾಯಿಸಿದರು.

ತಾಲ್ಲೂಕು ಗಂಗಾಮತಸ್ಥರ ಸಂಘದ ವತಿಯಿಂದ ನಡೆದ ಗಂಗಾ ಜಯಂತಿಯಲ್ಲಿ ಅವರು ಮಾತನಾಡಿದರು. ತೀರ ಹಿಂದುಳಿದ ಗಂಗಾಮತಸ್ಥರು ರಾಜ್ಯದಲ್ಲಿ 20 ಲಕ್ಷ ಇದ್ದರೂ ಒಬ್ಬ ಶಾಸಕರೂ ಇಲ್ಲ.

ಗಂಗಾಮಾತೆ ಎಲ್ಲಾ ಸಮು ದಾಯಗಳಿಗೂ ತಾಯಿ ಇದ್ದಂತೆ. ಗಂಗೆಯ ಪೂಜೆ ಮಾಡುವುದರಿಂದ ನಾಡಿನಲ್ಲಿ ಮಳೆ ಬೆಳೆಯಾಗಲಿದೆ ಎಂಬುದು ನಮ್ಮ ಪೂರ್ವಿಕರ ಅಭಿಪ್ರಾಯವಾಗಿದೆ’ ಎಂದು  ಸಂಘದ ಗೌರವಾದ್ಯಕ್ಷ ಯಾಲಕ್ಕಯ್ಯ ಹೇಳಿದರು.

ಪುರಸಭೆ ಮಾಜಿ ಸದಸ್ಯ ತಿರುಮಲೆ ಗಂಗಯ್ಯ ಮಾತನಾಡಿ, ಗಂಗಾ ಮತಸ್ಥರಿಗೆ ಕೆರೆಗಳಲ್ಲಿ ಮೀನು ಸಾಕಲು ಹೆಚ್ಚಿನ ನೆರವು ನೀಡಬೇಕು ಎಂದರು.

ಸಂಘದ ಅಧ್ಯಕ್ಷ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖಂಡರಾದ ಮಂಡಿ ಸಿದ್ದರಾಜು, ಯಜಮಾನ್‌ ರಂಗಪ್ಪ, ಚೈತನ್ಯ, ಭೈರಣ್ಣ, ಲೋಕೇಶ್‌, ತಿರುಮಲೆ ಚಂದ್ರಣ್ಣ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.