ADVERTISEMENT

ಸೋಲಾರ್‌ ದೀಪ ವಿತರಣೆ: ಹಲ್ಲೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 10:57 IST
Last Updated 10 ಫೆಬ್ರುವರಿ 2016, 10:57 IST

ಮಾಗಡಿ:  ತಾಲ್ಲೂಕಿನ ಮಾದಿಗೊಂಡನ ಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮತದಾರರಿಗೆ ಸೋಲಾರ್‌ ದೀಪ ವಿತರಿಸುತ್ತಿದ್ದ ಗ್ರಾ.ಪಂ.ಅಧ್ಯಕ್ಷ ಕೆಂಚೇಗೌಡ ಮತ್ತು ಪಿಡಿಒ ರಾಜೀವ್‌  ಮೇಲೆ ಸ್ಥಳದಲ್ಲಿಯೇ ಜೆಡಿಎಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

ಮತದಾರರಿಗೆ ಸೋಲಾರ್‌ ದೀಪಗಳನ್ನು ವಿತರಿಸುತ್ತಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಜೆಡಿಎಸ್‌ ಕಾರ್ಯಕರ್ತರು ಚುನಾವಣಾಧಿಕಾರಿಗೆ ಪೋನ್‌ ಮಾಡಿದ್ದಾರೆ., ಸ್ಥಳಕ್ಕೆ ಬಂದ ಪಿಡಿಒ ರಾಜೀವ್‌ ಮತ್ತು ಕೆಂಚೇಗೌಡನ ಮೇಲೆ ಹಲ್ಲೆ ಮಾಡಿ, ಮತದಾರರಿಗೆ ವಿತರಿಸುತ್ತಿದ್ದ ಸೋಲಾರ ದೀಪಗಳನ್ನು ಪೊಲಿಸರ ವಶಕ್ಕೆ ಒಪ್ಪಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಠಾಣೆಗೆ ಆಗಮಿಸಿದ ಶಾಸಕ ಎಚ್‌.ಸಿ.ಬಾಲಕೃಷ್ಣ ಕಾನೂನು ರೀತಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಜೆಡಿಎಸ್‌ ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿ, ಠಾಣೆಯ ಒಳಗೆ ಇದ್ದ ಕೆಂಚೇಗೌಡನ ವಿರುದ್ದ ದಿಕ್ಕಾರ ಕೂಗಿದರು.  ಶಾಸಕರು ಅಲ್ಲಿಂದ ತೆರಳಿದ ಕೂಡಲೆ ಕಾರ್ಯಕರ್ತರೊಂದಿಗೆ ಆಗಮಿಸಿದ ಕೆಪಿಸಿಸಿ ಸದಸ್ಯ ಎ.ಮಂಜುನಾಥ ಕೆಂಚೇಗೌ ಡರ ಮೇಲೆ ಹಲ್ಲೆ ಮಾಡಿದವರ ವಿರುದ್ದ ಕ್ರಮಕೈಗೊಳ್ಳದೆ ಗ್ರಾ.ಪಂ.ಅಧ್ಯಕ್ಷರನ್ನು ಬಂದಿಸಿದ್ದಿರಿ, ಮೊದಲು ಕೆಂಚೇಗೌಡರನ್ನು ಬಿಟ್ಟುಬಿಡಿ ಎಂದರು. ಆವೇಳೆಗೆ ಮತ್ತೆ ಠಾಣೆಯ ಮುಂದಕ್ಕೆ ಆಗಮಿಸಿದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಪರಸ್ಪರ ದಿಕ್ಕಾರ ಕೂಗಿದರು. ಪರಸ್ಪರ ಕೈಕೈ ಮಿಲಾಯಿಸಿದರು. ಸರ್ಕಲ್‌ ಇನ್‌್ಪೆಕ್ಟರ್‌ ನಂಧೀಶ್‌ ಮತ್ತು ಪೊಲೀಸರು ಹರಸಾಹಸ ಪಟ್ಟರು. ಉಭಯ ಪಕ್ಷಗಳ ಕಾರ್ಯಕರ್ತರು ರಾತ್ರಿ 10.50ರವರಗೆ ಠಾಣೆಯ ಮುಂದೆ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದರು.

ಠಾಣೆಯ ಒಳಗಿದ್ದ ಮಾದಿಗೊಂಡನ ಹಳ್ಳಿ ಗ್ರಾ.ಪಂ.ಅಧ್ಯಕ್ಷ ಕೆಂಚೇಗೌಡ ಮಾತನಾಡಿ. ಕಳೆದ 6 ತಿಂಗಳಿಂದಲೂ ಧರ್ಮಸ್ಥಳದ ಸ್ವಯಂ ಸೇವಾಸಂಸ್ಥೆಯವರು ಸೋಲಾರ್‌ ದೀಪ ಅಳವಡಿಸುತ್ತಿದ್ದಾರೆ. ಇಂದು ಸಹ ದೀಪ ಅಳವಡಿಸುತ್ತಿದ್ದಾಗ ಬಂದ ಜೆಡಿಎಸ್‌ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡಸಿದರು. ಪೊಲೀಸು ಜೀಪಿನಲ್ಲಿ ಕುಳಿತಾಗಲು ಸಹ ಮನಸೋ ಇಚ್ಚೆ ಥಳಿಸಿದರು ಎಂದರು. ಪಿಡಿಒ ರಾಜೀವ್‌ ಮಾತನಾಡಿ ಎಂಸಿಸಿ ತಂಡದಲ್ಲಿದ್ದ ನನ್ನನ್ನು ಪಿಡಿಒ ಎಂದು ಹಲ್ಲೆ ನಡೆಸಿದರು ಎಂದು ತಿಳಿಸಿದರು. ಪೊಲೀಸರ ಸಕಾಲಿಕ ಎಚ್ಚರಿಕೆಯಿಂದ ಭಾರಿ ಅನಾಹುತ ತಪ್ಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.