ADVERTISEMENT

ಜಯಂತಿಗಳು ಸರ್ಕಾರಿ ಉತ್ಸವ ಆಗುತ್ತಿವೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 9:05 IST
Last Updated 11 ನವೆಂಬರ್ 2017, 9:05 IST

ಹೊಸನಗರ: ಮಹಾ ಪುರುಷರ ಜಯಂತಿ ಆಚರಣೆಗಳು ಕೇವಲ ಸರ್ಕಾರಿ ಉತ್ಸವ ಆಗುತ್ತಿವೆ ಎಂದು ತಹಶೀಲ್ದಾರ್ ಚಂದ್ರಶೇಖರ ನಾಯ್ಕ ವಿಷಾದಿಸಿದರು. ಶುಕ್ರವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿ ತಿರುಪತಿ ನಾಯಕ್‌ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶ್ವೇತಾ ಬಂಡಿ, ಸುರೇಶ ಸ್ವಾಮಿರಾವ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹಾಲಗದ್ದೆ ಉಮೇಶ, ಸದಸ್ಯ ಸಯ್ಯದ್, ಹಜರತ್ ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆ ಅಧ್ಯಕ್ಷ ಚಾಬು ಸಾಬ್, ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷ ಡಾ.ಅಬೂಬಕರ್   ಹಾಜರಿದ್ದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.

ಜಿ.ಪಂ. ಸದಸ್ಯ ಬಹಿಷ್ಕಾರ : ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗಿ ಆಶ್ಚರ್ಯ ಉಂಟು ಮಾಡಿದ್ದ, ಬಿಜೆಪಿಯ ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಶ ಸ್ವಾಮಿರಾವ್ ಸಭೆಯನ್ನು ಅರ್ಧಕ್ಕೆ ಬಹಿಷ್ಕರಿಸಿದರು ‘ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಇದ್ದ ಕಾರಣ ಹಾಜರಾಗಿದ್ದೇನೆ. ಇನ್ನು ಮುಂದೆ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ನನ್ನ ಹೆಸರನ್ನು ಮುದ್ರಿಸಬೇಡಿ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.