ADVERTISEMENT

ಎರಡನೇ ದಿನಕ್ಕೆ ಕಾಲಿಟ್ಟ ಧರಣಿ

ಜ್ಯೋತಿಬಾ ಫುಲೆ, ಸಾವಿತ್ರಿಬಾ ಫುಲೆ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 4:47 IST
Last Updated 12 ಏಪ್ರಿಲ್ 2017, 4:47 IST

ಶಿರಾ: ತಾಲ್ಲೂಕು ಪಂಚಾಯಿತಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಅಂಬೇಡ್ಕರ್ ಭವನವನ್ನು ನಗರಸಭೆಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರಕ್ಕೆ ಎರಡನೇ ದಿನಕ್ಕೆ ಕಾಲಿಟ್ಟಿದೆ. 

ಜಯಂತಿ ಆಚರಣೆ: ಸತ್ಯಾಗ್ರಹದ ಎರಡನೇ ದಿನವಾದ ಮಂಗಳವಾರ ಧರಣಿ ಸ್ಥಳದಲ್ಲಿ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾ ಫುಲೆ ಜಯಂತಿ ಆಚರಿಸಿ ಸಿಹಿ ಹಂಚಲಾಯಿತು.

ಬೆಂಬಲ: ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಬೆಲ್ಲದಮಡು ಭರತ್ ಕುಮಾರ್, ತಾಲ್ಲೂಕು ಸಂಚಾಲಕ ಟೈರ್ ರಂಗನಾಥ್, ಮಾಗೋಡು ಯೋಗಾನಂದ್, ಜಮಶಿದ್ ಖಾನ್, ಸಜೀರ್ ಸಾಬ್, ಶಿವಾಜಿನಗರ ತಿಪ್ಪೇಸ್ವಾಮಿ,

ಕೆ.ರಾಜು, ಕರೆರಾಮನಹಳ್ಳಿ ಭೂತೇಶ್, ಹುಣಸೆಕಟ್ಟೆ ನಾಗರಾಜು, ಜಿ.ಆರ್.ರಂಗನಾಥ್, ಅವಿನಾಶ್, ಕಾರ್ತಿಕ್, ರಂಗನಾಥರೆಡ್ಡಿ, ನರಸಿಂಹಯ್ಯ, ಮುದಿಗೆರೆ ಶ್ರೀರಂಗಪ್ಪ, ಶಾಂತಕುಮಾರ್, ತಿಪ್ಪೇಶ್, ಮಂಜುನಾಥ್, ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT