ADVERTISEMENT

ಜಿಲ್ಲೆಯಲ್ಲಿ ‘ಟಿಇಟಿ’ ಪರೀಕ್ಷೆ ಸುಸೂತ್ರ

ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 4:55 IST
Last Updated 16 ಜನವರಿ 2017, 4:55 IST
ಜಿಲ್ಲೆಯಲ್ಲಿ ‘ಟಿಇಟಿ’ ಪರೀಕ್ಷೆ ಸುಸೂತ್ರ
ಜಿಲ್ಲೆಯಲ್ಲಿ ‘ಟಿಇಟಿ’ ಪರೀಕ್ಷೆ ಸುಸೂತ್ರ   

ತುಮಕೂರು: ತುಮಕೂರು ನಗರದ 15 ಹಾಗೂ ಮಧುಗಿರಿ 4 ಸೇರಿ  ಒಟ್ಟು 19 ಕೇಂದ್ರಗಳಲ್ಲಿ ಭಾನುವಾರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಸುವ್ಯವಸ್ಥಿತವಾಗಿ ನಡೆಯಿತು.

ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಹಂತದಲ್ಲಿ ಪರೀಕ್ಷೆ ನಡೆಯಿತು. ಬೆಳಿಗ್ಗೆ ಸಾಮಾನ್ಯ ಜ್ಞಾನ ಹಾಗೂ ಮಧ್ಯಾಹ್ನ ಅಭ್ಯರ್ಥಿ ಆಯ್ಕೆ ಮಾಡಿಕೊಂಡ ನಿರ್ದಿಷ್ಟ ವಿಷಯಕ್ಕೆ ಸಂಬಂಧಪಟ್ಟ ವಿಷಯದ ಪರೀಕ್ಷೆ ನಡೆಯಿತು.

ಪರೀಕ್ಷೆ ಸಂದರ್ಭದಲ್ಲಿ ಅಹಿತಕರ, ತಾಂತ್ರಿಕ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳಲಾಗಿತ್ತು. ಮಧುಗಿರಿ ಮತ್ತು ತುಮಕೂರು ಡಿಡಿಪಿಐ, ನೋಡಲ್ ಅಧಿಕಾರಿಗಳು, ಜಾಗೃತ ದಳ ತಂಡಗಳು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವಿಡಿಯೋ ಚಿತ್ರೀಕರಣ, ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.

ತುಮಕೂರು ನಗರದ 15 ಕೇಂದ್ರಗಳಲ್ಲಿ 5106 ಹಾಗೂ ಮಧುಗಿರಿಯ 4 ಕೇಂದ್ರಗಳಲ್ಲಿ 1075 ಸೇರಿ ಒಟ್ಟು 6181 ಪರೀಕ್ಷಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಆದರೆ, ತುಮಕೂರಿನಲ್ಲಿ 585 ಹಾಗೂ ಮಧುಗಿರಿಯಲ್ಲಿ 132 ಮಂದಿ ಸೇರಿ 717 ಮಂದಿ ಪರೀಕ್ಷೆಗೆ ಗೈರಾಗಿದ್ದರು.

ತುಮಕೂರಿನಲ್ಲಿ ಕಾಳಿದಾಸ ಪಿ.ಯು ಕಾಲೇಜು, ವಿದ್ಯಾ ಪಿ.ಯು.ಕಾಲೇಜು, ಚೇತನಾ ವಿದ್ಯಾಮಂದಿರ, ರೇಣುಕಾ ವಿದ್ಯಾಪೀಠ, ಎಸ್‌ಜಿಆರ್ ಹೈಸ್ಕೂಲ್, ಸರ್ಕಾರಿ ಪಿಯು ಕಾಲೇಜು, ಬಸವೇಶ್ವರ ಪ್ರೈಮರಿ ಮತ್ತು ಹೈಸ್ಕೂಲ್, ಸಿದ್ಧಗಂಗಾ ಹೈಸ್ಕೂಲ್, ಚೇತನ ವಿದ್ಯಾಮಂದಿರ, ಬಾಪೂಜಿ ಪಿ.ಯು.ಕಾಲೇಜು, ಶ್ರೀದೇವಿ ಪ್ರೈಮರಿ ಮತ್ತು ಹೈಸ್ಕೂಲ್, ಸೇಂಟ್ ಮೇರಿಸ್ ಹೈಸ್ಕೂಲ್, ಆರ್ಯನ್ ಹೈಸ್ಕೂಲ್, ಎಂಪ್ರೆಸ್ ಪಿ.ಯು ಕಾಲೇಜು ಆವರಣದ ಹೈಸ್ಕೂಲ್ ವಿಭಾಗ, ಎಂಪ್ರೆಸ್ ಪಿಯು ಕಾಲೇಜಿನಲ್ಲಿ ಪರೀಕ್ಷೆ ನಡೆಸಲಾಯಿತು.

ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಜೂನಿಯರ್ ಕಾಲೇಜು, ಸರ್ಕಾರಿ ಜೂನಿಯರ್ ಕಾಲೇಜು ಹೈಸ್ಕೂಲ್ ವಿಭಾಗ, ಸಿದ್ದಾರ್ಥ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ಪರೀಕ್ಷೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT