ADVERTISEMENT

ಉತ್ತಮ ಆರೋಗ್ಯ ಸೇವೆ ಸರ್ಕಾರದ ಜವಾಬ್ದಾರಿ

ಫಿಸಿಯೋಕಾನ್‌: ಕಾರ್ಯಾಗಾರ ಉದ್ಘಾಟಸಿ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 5:40 IST
Last Updated 1 ಮಾರ್ಚ್ 2017, 5:40 IST
ಮಣಿಪಾಲ ವಿಶ್ವವಿದ್ಯಾಲಯದ ಸಮಗ್ರ ಆರೋಗ್ಯ ವಿಜ್ಞಾನ ಕಾಲೇಜು ಫಿಸಿಯೋಕಾನ್‌ 2017 ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಮಣಿಪಾಲದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್‌ ಮಾತನಾಡಿದರು.  ಪ್ರಜಾವಾಣಿ ಚಿತ್ರ
ಮಣಿಪಾಲ ವಿಶ್ವವಿದ್ಯಾಲಯದ ಸಮಗ್ರ ಆರೋಗ್ಯ ವಿಜ್ಞಾನ ಕಾಲೇಜು ಫಿಸಿಯೋಕಾನ್‌ 2017 ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಮಣಿಪಾಲದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್‌ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಉಡುಪಿ: ಅತ್ಯುತ್ತಮ ಆರೋಗ್ಯ ಸೇವೆಗೆ ಸಮಗ್ರ ಆರೋಗ್ಯ ವಿಜ್ಞಾನ (ಅಲೈಡ್ ಹೆಲ್ತ್‌ ಸೈನ್ಸ್) ತುಂಬಾ ಮುಖ್ಯ ಹಾಗೂ ಫಿಸಿಯೋಥರೆಪಿಗೆ ತುಂಬಾ ಮಹತ್ವ ಇದೆ ಎಂದು ವೈದ್ಯಕೀಯ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್‌ ಅಭಿಪ್ರಾಯಪಟ್ಟರು.

ಮಣಿಪಾಲ ವಿಶ್ವವಿದ್ಯಾಲಯದ ಸಮಗ್ರ ಆರೋಗ್ಯ ವಿಜ್ಞಾನ ಕಾಲೇಜು ಫಿಸಿಯೋಕಾನ್‌ 2017 ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಮಣಿಪಾಲದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಫಿಸಿಯೋ ಥರೆಪಿ ವಿಧಾನದಲ್ಲಿ ಆಗುವ ಬದಲಾವ ಣೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಎಂದು ಅವರು ಹೇಳಿದರು.

ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಮಾರ್ಗವಾಗಿದೆ. ನಮ್ಮ ಶಕ್ತಿ ನಮ್ಮ ಜನಸಂಖ್ಯೆಯಾಗಿದ್ದು, ಜನರಿಗೆ ಗುಣಮ ಟ್ಟದ ಶಿಕ್ಷಣ ಹಾಗೂ ಕೌಶಲ ತರಬೇತಿ ನೀಡಬೇಕು. ಬಾಧ್ಯತೆಯನ್ನೇ ನಮ್ಮ ಶಕ್ತಿ ಯನ್ನಾಗಿ ಪರಿವರ್ತಿಸಬೇಕು. ಅತ್ಯುತ್ತಮ ಸಂಸ್ಥೆಗಳನ್ನು ಆರಂಭಿಸಿದ ಪರಂಪರೆ ನಮ್ಮ ರಾಜ್ಯದ್ದಾಗಿದ್ದು, ಖಾಸಗಿಯವರು ಸಹ ಒಳ್ಳೆಯ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಉತ್ತಮ ಆರೋಗ್ಯ ಸೇವೆ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು. ಮಣಿಪಾಲ ವಿಶ್ವವಿದ್ಯಾಲಯ ಅತ್ಯು ತ್ತಮ ಮೂಲ ಸೌಲಭ್ಯಗಳನ್ನು ಹೊಂದಿ ದ್ದು, ಉತ್ತರ ಕರ್ನಾಟಕದಲ್ಲಿಯೂ ಒಂದು ಕ್ಯಾಂಪಸ್‌ ಆರಂಭಿಸಲು ಮನಸ್ಸು ಮಾಡಬೇಕು. ಸೇವಾ ಕಾರ್ಯಗಳಲ್ಲಿ ಸರ್ಕಾರದೊಂದಿಗೆ ಸಹ ಕೈ ಜೋಡಿಸ ಬೇಕು ಎಂದು ಅವರು ಹೇಳಿದರು.

ಮಣಿಪಾಲ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಚ್‌.ಎಸ್‌. ಬಲ್ಲಾಳ್ ಮತನಾಡಿ, ಉತ್ತರ ಕರ್ನಾಟಕದಲ್ಲಿ ಸಹ ವೈದ್ಯಕೀಯ ಕಾಲೇಜು ಆರಂಭಿಸಲು ಪ್ರಯತ್ನಿಸಲಾಗುವುದು. ಬಡವರಿಗೆ ಆರೋಗ್ಯ ಸೇವೆ ನೀಡುವ ಪ್ರಯತ್ನವನ್ನು ವಿ.ವಿ. ಈಗಾಗಲೇ ಮಾಡುತ್ತಿದ್ದು ಆರೋಗ್ಯ ಸುರಕ್ಷಾ ಕಾರ್ಡ್‌ಗಳನ್ನು ನೀಡಲಾಗಿದೆ. ಅಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಸಹ ₹16 ಕೋಟಿ ಮೀಸಲಿಡಲಾಗಿದೆ ಎಂದರು.

ಸುಮಾರು 130 ಕೋಟಿ ಜನ ಸಂಖ್ಯೆಯನ್ನು ಹೊಂದಿರುವ ದೇಶ ನಮ್ಮದಾಗಿದೆ. 130 ಕೋಟಿ ಜನರ ಬಾಯಿ ತುಂಬಿಸಬೇಕು ಎಂದು ಯೋಚಿಸಿದರೆ ಅದು ಹೊರೆ ಅನಿಸುತ್ತದೆ, ದುಡಿಯುವ 260 ಕೋಟಿ ಕೈಗಳಿವೆ ಎಂದು ಭಾವಿಸಿದರೆ ಸಾಧನೆ ಮಾಡಬಹುದು ಎಂದರು.

ಮಣಿಪಾಲ ವಿ.ವಿ.ಯ ಕುಲಪತಿ ಡಾ.ಎಚ್. ವಿನೋದ್ ಭಟ್, ಕುಲಸಚಿವ ಡಾ.ನಾರಾಯಣ ಸಭಾಹಿತ್‌, ರಾಜ್ಯ ಫಿಸಿಯೋಥರೆಪಿ ಒಕ್ಕೂಟದ ಕಾರ್ಯಾಧ್ಯಕ್ಷ ಯು.ಟಿ. ಇಫ್ತಿಕಾರ್ ಅಲಿ, ಸ್ಕೂಲ್ ಆಫ್ ಅಲೈಡ್ ಸೈನ್ಸ್‌ನ ಡೀನ್ ಬಿ. ರಾಜಶೇಖರ್‌ ಉಪಸ್ಥಿತರಿದ್ದರು.

*
ಹಿರಿಯರು ದೂರದೃಷ್ಟಿ ಯಿಂದ ಹೆಚ್ಚಿನ ಸಂಖ್ಯೆಯ ಎಂಜಿನಿಯ ರಿಂಗ್‌ ಕಾಲೇಜು ಆರಂಭಿಸಿದ್ದರಿಂದ ಬೆಂಗಳೂರು ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಬೆಳೆಯಿತು.
-ಡಾ. ಶರಣಪ್ರಕಾಶ್ ಪಾಟೀಲ್‌,
ವೈದ್ಯಕೀಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT