ADVERTISEMENT

ಕೊರಗರ ಕಾಲೊನಿಗೆ ಅಧಿಕಾರಿಗಳ ದಂಡು!

ಇಲಾಖೆಗಳಿಗೆ ಕೊರಗರ ಅಭಿವೃದ್ಧಿ ಹೊಣೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 5:33 IST
Last Updated 28 ಜನವರಿ 2017, 5:33 IST
ಕೊರಗರ ಕಾಲೊನಿಗೆ ಅಧಿಕಾರಿಗಳ ದಂಡು!
ಕೊರಗರ ಕಾಲೊನಿಗೆ ಅಧಿಕಾರಿಗಳ ದಂಡು!   

ಉಡುಪಿ: ಜಿಲ್ಲೆಯ ಕೊರಗ ಜನಾಂಗ ದವರಿಗೆ ಪ್ರತಿಯೊಂದು ಇಲಾಖೆಗಳು ತಮ್ಮಲ್ಲಿ ಇರುವ ಯೋಜನೆಗಳ ಸಮಗ್ರ ಮಾಹಿತಿ ಒದಗಿಸಿ, ಕೊರಗರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಹೇಳಿದರು.

ಉಡುಪಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿ ಸಿದ್ದ ಕೊರಗರ ಜನಾಂಗದ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಕಾರ್ಯಾ ಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಸಚಿವರ ಗ್ರಾಮ ವಾಸ್ತವ್ಯದ ನಂತರ ಇನ್ನಷ್ಟು ಪರಿಣಾಮಕಾರಿಯಾಗಿ ಕೊರ ಗರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಕೊರಗ ಜನಾಂಗದವರಿಗೆ ನಿವೇಶನ ಒದಗಿಸುವ ಕುರಿತಂತೆ ಭೂ ಒಡೆತನ ಯೋಜನೆಯಲ್ಲಿ ಭೂಮಿ ನೀಡಲು ಅವಕಾಶವಿದ್ದು, ಕೊರಗ ಮುಖಂಡರು ಮತ್ತು ಅಧಿಕಾರಿ ಗಳಿಗೆ ಜಾಗ ಗುರುತಿಸುವಂತೆ ತಿಳಿಸ ಲಾಗಿದೆ ಎಂದರು.

ಜಮೀನಿನ ಹಕ್ಕುಪತ್ರಗಳ ವಿತರಣೆ ಹಾಗೂ ಆರ್‌ಟಿಸಿಯಲ್ಲಿನ ದೋಷ ಗಳನ್ನು ಸರಿಪಡಿಸುವ ಕುರಿತಂತೆ ಕುಂದಾ ಪುರದ ಉಪ ವಿಭಾಗಾಧಿಕಾರಿಗೆ ಕೊರಗ ಕಾಲೊನಿಗಳಲ್ಲಿ ವಿಶೇಷ ಶಿಬಿರ ನಡೆಸಿ, ದೋಷ ಸರಿಪಡಿಸಿಕೊಡುವಂತೆ ನಿರ್ದೇ ಶನ ನೀಡಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಯಲ್ಲಿ ವಿವಿಧ ಪಿಂಚಣಿ ಯೋಜನೆಗಳಿಂದ ವಂಚಿತರಾಗಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ವಿತರಿಸುವಂತೆ, ಸರ್ಕಾರಿ ನೌಕರಿಯಲ್ಲಿರುವ ಕೊರಗರನ್ನು ಹೊರ ತುಪಡಿಸಿ ಅರ್ಹ ಕೊರಗರಿಗೆ ಬಿಪಿಎಲ್‌ ಮತ್ತು ಎವೈ ಕಾರ್ಡ್‌ ವಿತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿ ಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅರಣ್ಯ ಹಕ್ಕು ಕಾಯಿದೆಯಡಿ ಮತ್ತು 94 ಸಿ, 94 ಸಿಸಿಯಡಿ ಹಕ್ಕುಪತ್ರ ಪಡೆ ಯಲು ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳು ವಂತೆ ಹಾಗೂ ಸರ್ಕಾರದಿಂದ ವ್ಯವ ಸಾಯ ಭೂಮಿ ಪಡೆದು ಉಳುಮೆ ಮಾಡದೆ ಖಾಲಿ ಇರುವ ಕೊರಗರ ಜಮೀನಿನಲ್ಲಿ ಕೃಷಿ ಇಲಾಖೆಯ ಮೂಲಕ ಕೃಷಿ ಚಟುವಟಿಕೆ ಕೈಗೊಳ್ಳುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿ ಕಾರಿಗಳಿಗೆ ಅವರು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಮರ ನಾಥ್‌, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‌, ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಹರೀಶ್‌ ಗಾಂವ್ಕರ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.