ADVERTISEMENT

ಗಣರಾಜ್ಯೋತ್ಸವ: ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಜನವರಿ 2017, 9:17 IST
Last Updated 27 ಜನವರಿ 2017, 9:17 IST
ಗಣರಾಜ್ಯೋತ್ಸವ: ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ಗಣರಾಜ್ಯೋತ್ಸವ: ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ   

ಉಡುಪಿ: ಜಿಲ್ಲಾಡಳಿತ ನಗರದ ಬೀಡಿನ ಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗಮಂದಿರದಲ್ಲಿ ಗುರುವಾರ ಏರ್ಪಡಿ ಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಜಿಲ್ಲೆಯ ವಿವಿಧ ಶಾಲಾ– ಕಾಲೇಜು ಗಳ ತಂಡಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಮನ ಸೆಳೆಯಿತು.

ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದ ಪಥ ಸಂಚಲನ ತಂಡಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಉಡುಪಿಯ ಮುಕುಂದ ಕೃಪಾ ಶಾಲೆಯ ಮಕ್ಕಳುಹಾಡಿದ ರೈತ ಗೀತೆಯೊಂದಿಗೆ ಸಾಂಸ್ಕೃ ತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡ ಲಾಯಿತು. ನೇಗಿಲ ಯೋಗಿಯ ಮಹತ್ವ ವನ್ನು ಸಾರಿದ ತಂಡ ತಲೆದೂಗಿಸಿತು.

ದೇಶ ಭಕ್ತಿ ಬಿಂಬಿಸುವ ಹಾಗೂ ದೇಶದ ಸಾರ್ವಭೌಮತೆ ಕಾಪಾಡಲು ಗಡಿಯಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸುವ ಸೈನಿಕರ ಸೇವೆಯನ್ನು ಸೇಂಟ್‌ ಸಿಸಿಲಿಸ್‌ ಹಾಗೂ ಸೇಂಟ್‌ ಕ್ಸೇವಿಯರ್‌ ಶಾಲೆ ಮಕ್ಕಳು ನೃತ್ಯದ ಮೂಲಕ ಸಾದರಪಡಿಸಿದರು.

ಶಾಲಾ ಮಕ್ಕಳು ಪ್ರದರ್ಶಿಸಿದ ಮಣಿಪುರಿ ನೃತ್ಯ ವಿಭಿನ್ನವಾಗಿತ್ತು. ಒಟ್ಟಾರೆ ಸುಮಾರು ಅರ್ಧ ಗಂಟೆಗಳ ಕಾಲ ಮಕ್ಕಳು ಹಾಡು– ನೃತ್ಯಗಳ ಮೂಲಕ ರಸದೌತಣ ನೀಡಿದರು. ಪಥ ಸಂಚಲನದಲ್ಲಿ ಭಾಗವಹಿಸಿದ್ದ ತಂಡಗಳು ಸಹ ಸಹ ಶಿಸ್ತಿನಿಂದ ಹೆಜ್ಜೆ ಹಾಕಿ ನೋಡು ಗರನ್ನು ಸೂರೆಗೊಂಡವು. ಪೊಲೀಸ್ ತಂಡ, ಗೃಹ ರಕ್ಷಕರ ತಂಡ, ವಿವಿಧ ಶಾಲಾ– ಕಾಲೇಜುಗಳ ತಂಡಗಳು ಇದ ರಲ್ಲಿ ಭಾಗವಹಿಸಿದ್ದವು. ಇದೇ ಮೊದಲ ಬಾರಿ ಅರಣ್ಯ ಇಲಾಖೆಯ ತಂಡವೂ ಭಾಗವಹಿಸಿದ್ದು ವಿಶೇಷವಾಗಿತ್ತು.

ಅತ್ಯುತ್ತಮವಾಗಿ ಪಥ ಸಂಚಲನ ನಡೆಸಿದ ಕಳತ್ತೂರು ಶಾಲೆಗೆ ಪ್ರಥಮ, ಕರ್ಜೆಯ ಸರ್ಕಾರಿ ಶಾಲೆಗೆ ದ್ವಿತೀಯ ಹಾಗೂ ಒಳಕಾಡು ಶಾಲೆಗೆ ತೃತೀಯ ಬಹುಮಾನ ಲಭಿಸಿತು. ಪ್ರೌಢಶಾಲಾ ವಿಭಾಗದಲ್ಲಿ ಸೇಂಟ್‌ ಮೇರಿಸ್‌ ಶಾಲೆ, ಸೇಂಟ್‌ ಸಿಸಿಲಿಸ್ ಶಾಲೆ ಹಾಗೂ ಯು. ಕಮಲಾ ಬಾಯಿ ಪ್ರೌಢಶಾಲೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದವು. ಪೂರ್ಣಪ್ರಜ್ಞ ಪದವಿ ಕಾಲೇಜಿನ ನೇವಿ ವಿಭಾಗದ ವಿದ್ಯಾರ್ಥಿಗಳು ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು.

ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಚಿವ ಪ್ರಮೋದ್ ಮಧ್ವರಾಜ್ ಸನ್ಮಾಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT