ADVERTISEMENT

‘ಕರ್ತವ್ಯ ಪ್ರಜ್ಞೆ ಜಾಗೃತವಾಗಲು ಯೋಗ್ಯ ಸಂಸ್ಕಾರ ಅಗತ್ಯ-’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 9:02 IST
Last Updated 25 ನವೆಂಬರ್ 2014, 9:02 IST

ಶಿರ್ವ: -ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಧರ್ಮ ಜಾಗೃತಿ ಕಾರ್ಯದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಋಷಿ, ಯತಿ ಸಂಸ್ಕೃತಿ ಮುಂದುವರೆದ ಭಾಗವಾಗಿರುವ ಶಿಷ್ಯ ಪರಂಪರೆಯ ಕರ್ತವ್ಯ ಪ್ರಜ್ಞೆ ಜಾಗೃತಗೊಳಿಸಲು ಕುಲಗು­ರುಗಳ ಮಾರ್ಗದರ್ಶನ ಅಗತ್ಯ ಎಂದು ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯಮಠದ ಶಿವಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಶನಿವಾರ ಕಾರ್ಕಳ ಹಿರ್ಗಾನದ ಆದಿಶಕ್ತಿ ಮಹಾಲಕ್ಷ್ಮೀ ದೇವಳದಿಂದ  ಬಂಟಕಲ್ಲು ದುರ್ಗಾಪರ­ಮೇಶ್ವರಿ ದೇವಳದಲ್ಲಿ ಏಳು ದಿನಗಳ ವಾಸ್ತವ್ಯಕ್ಕಾಗಿ ಬಂದಾಗ ಆಯೋಜಿಸಿದ ಸ್ವಾಗತ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ದೇವಳದ ಆಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್ ಸ್ವಾಗತಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಸೂಡ ಜಯರಾಮ ಪ್ರಭು ದಂಪತಿ ಶ್ರೀಕ್ಷೇತ್ರದ ವತಿಯಿಂದ ಪಾದಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ವೇದವ್ಯಾಸರಾಯ ಭಟ್, ಉಮೇಶ ಪ್ರಭು ಪಾಲಮೆ, ಬೆಲ್ಪತ್ರೆ ವಿಶ್ವನಾಥ ನಾಯಕ್, ಶಶಿಧರ ವಾಗ್ಲೆ, ಉಪೇಂದ್ರ ನಾಯಕ್, ಜಗದೀಶ ನಾಯಕ್, ಸಂತೋಷ್ ವಾಗ್ಲೆ, ಅಶೋಕ್ ನಾಯಕ್, ನಾರಾಯಣ ಗವಲ್ಕರ್,ರಾಜಾಪುರ ಸಾರಸ್ವತ ಯುವ ವೃಂದದ ಅಧ್ಯಕ್ಷ ಅನಂತರಾಮ ವಾಗ್ಲೆ, ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್, ಮಹಿಳಾ ವಿಭಾಗದ ಅಧ್ಯಕ್ಷೆ ಸುಗುಣರತ್ನ ಪ್ರಭು, ಗೀತಾ ವಾಗ್ಲೆ, ಉಡುಪಿ ನಗರಸಭಾ ಸದಸ್ಯ ನರಸಿಂಹ ನಾಯಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.