ADVERTISEMENT

‘ವಿಶ್ವಾಸದ ಮನೆಯ ಸೇವಾಕಾರ್ಯ ಮಾದರಿ’

ಶಂಕರಪುರ-: ಮಾನಸಿಕ ಅಸ್ವಸ್ಥರ ಆಸ್ಪತ್ರೆ- ನೂತನ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 9:43 IST
Last Updated 29 ಜುಲೈ 2014, 9:43 IST

ಶಿರ್ವ: ಗ್ರಾಮೀಣ ಪ್ರದೇಶದಲ್ಲಿ ನಿರಾಶ್ರಿತರ ಹಾಗೂ ಅನಾಥ ಸೇವೆಯನ್ನು ದೇವರ ಕೆಲಸ ಎಂಬ ನಿಟ್ಟಿನಲ್ಲಿ ಕಳೆದ 14 ವರ್ಷಗಳಿಂದ ನಿರತಂತರವಾಗಿ ನಡೆಸುತ್ತಿರುವ ವಿಶ್ವಾಸದಮನೆಯ ಸೇವಾಕಾರ್ಯ ಮಾದರಿಯಾಗಿದ್ದು, ಈ ಸಂಸ್ಥೆಗೆ ವೈಯಕ್ತಿಕವಾಗಿ ಮತ್ತು ಸರ್ಕಾರದಿಂದ ಸಹಕಾರ ಒದಗಿಸುವುದಾಗಿ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದರು.

ಶಂಕರಪುರ  ವಿಶ್ವಾಸದಮನೆ ಮಾನಸಿಕ ಅಸ್ವಸ್ಥರ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಭಾನು­ವಾರ ನೆರವೇರಿಸಿ ಅವರು ಮಾತನಾಡಿದರು.

ಸಭಾಧ್ಯಕ್ಷತೆಯನ್ನು ವಹಿಸಿ ಆಸ್ಪತ್ರೆಯ ಪ್ರಯೋ­ಗಾಲಯವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರವಾದ ವಿಶ್ವಾಸದಮನೆಗೆ ಸರ್ಕಾರದಿಂದ ಯಾವುದೇ ಸಹಕಾರ ದೊರಕಿಲ್ಲ. ಬರೇ ದಾನಿಗಳು ನೆರವಾಗಿದ್ದಾರೆ. ಇಲ್ಲಿನ ನೂತನ ಆಸ್ಪತ್ರೆಗೆ ಸರ್ಕಾರದ ಅನುದಾನ ದೊರಕಿಸುವುದಾಗಿ ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಟಪಾಡಿ ಶಂಕರ ಪೂಜಾರಿ, ದಿವಾಕರ್ ಕುಂದರ್. ಜೆಡಿಎಸ್ ಜಿಲ್ಲಾಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ, ತಾ.ಪಂ.ಸದಸ್ಯೆ ಪ್ರೆಸಿಲ್ಲಾ ಡಿಮೆಲ್ಲೊ, ಗಿರೀಶ್ ಅಂಚನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ, ಇನ್ನಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಶೆಟ್ಟಿ,ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಗೌರವ ಅತಿಥಿಗಳಾಗಿ ಡಾ.ಡೊನಾಲ್ಡ್ ಸೈಮನ್, ಡಾ.ಎಚ್.ಅಶೋಕ್, ಲೀಲಾಧರ್ ಶೆಟ್ಟಿ ಕಾಪು, ಚಾರ್ಲ್‌್ಸ್ ಅಂಬ್ಲರ್, ಡಾ.ರೋಹನ್ ಮೆಂಡೊನ್ಸಾ,  ಮೋಹನ್ ಶೆಟ್ಟಿ, ಮುಸ್ತಾಕ್ ಅಹಮ್ಮದ್,ಪ್ರೇಮಾ ಮಾರ್ಗರೇಟ್, ಪಾಸ್ಟರ್ ಪ್ರಾಂಕ್ಲಿನ್ ಜಯರಾಜ್, ಶಾಲಿನಿ ಜೋನ್ಸ್ ಮುಂಬೈ, ಟೀನಾ ಬೆನ್‍ರಾಜ್ ತುಮುಕೂರು, ಅನಿಲ್ ಆಳ್ವ ಬೆಹರಿನ್,ಗೋಪಿನಾಥನ್ ಉಡುಪಿ,ವೆಲೇರಿಯನ್ ಮೋನಿಸ್, ರೋನಿ ಕರ್ಕಡ  ಉಪಸ್ಥಿತರಿದ್ದರು.

ಸಮಾಜಸೇವಕರಾದ ಡಾ.ದೇವಿಪ್ರಸಾದ್ ಶೆಟ್ಟಿ, ವಿನ್ಸೆಂಟ್ ಸಾಲಿನ್ಸ್, ಟ್ರವೆರ್ ಸಿಕ್ವೇರಾ, ಸಿರಿಲ್ ವೇಗಸ್ ಅವರನ್ನು ಸನ್ಮಾನಿಸಲಾಯಿತು.  ಪಾ.ಜೋಸೆಫ್ ಜಮಖಂಡಿ ಆಶೀರ್ವಚನ ನೀಡಿದರು ಪಾ.ಇ.ಡಬ್ಲ್ಯು ಫ್ರಾಂಕ್ ಪ್ರಾರ್ಥನೆ ನೆರವೇರಿಸಿದರು. ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಸುನಿಲ್ ಜಾನ್ ಡಿಸೋಜ ಸ್ವಾಗತಿಸಿದರು. ಸಿಸ್ಟರ್ ಎಲಿಜಬೆತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ್ ಸುವರ್ಣ ಕಟಪಾಡಿ ನಿರೂಪಿಸಿದರು. ಉಪಾಧ್ಯಕ್ಷ ಮ್ಯಾಥ್ಯೂ ಕೆಸ್ತಲಿನೊ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.