ADVERTISEMENT

‘ಶಾಲೆಗೆ ಸಮುದಾಯ ಶಕ್ತಿ ತುಂಬಲಿ’

ಖಾರ್ವಿಕೇರಿ: ‘ಯುವ ಕಲರವ’ ಸಂಘಟನೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 5:18 IST
Last Updated 29 ಜೂನ್ 2016, 5:18 IST

ಗಂಗೊಳ್ಳಿ (ಬೈಂದೂರು): ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಅಲ್ಲಿ ಉತ್ತಮ ಮೂಲಸೌಕರ್ಯಗಳು ಇರ ಬೇಕು. ಸರ್ಕಾರದಿಂದ ಎಲ್ಲ ಅಗತ್ಯ ಗಳನ್ನು ಈಡೇರಿಸಲು ಅಸಾಧ್ಯವಾಗಿರು ವುದರಿಂದ ಸಮುದಾಯ ಈ ಕೆಲಸ ಮಾಡುವ ಮೂಲಕ ಶಾಲೆಗಳಿಗೆ ಶಕ್ತಿ ನೀಡಬೇಕು ಎಂದು ಇಲ್ಲಿನ ಯುವ ಕಲರವ ಸಂಸ್ಥೆಯ ಸಂಸ್ಥಾಪಕ ರಾಘವೇಂದ್ರ ಎನ್. ಖಾರ್ವಿ ಹೇಳಿದರು.

ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಕೂಡಿದ ‘ಯುವ ಕಲರವ’ ಸಂಘಟನೆ ಯನ್ನು ಉದ್ಘಾಟಿಸಿ ಮಾತನಾಡಿದರು.

ಹತ್ತು ಹಳೆ ವಿದ್ಯಾರ್ಥಿಗಳು ಸೇರಿ ಆರಂಭಿಸಿದ ಈ ಸಂಘಟನೆ ಶಾಲೆಯ ಅಭಿವೃದ್ಧಿಗೆ, ಊರಿನ ಶೈಕ್ಷಣಿಕ ಉನ್ನತಿಗೆ ಕೊಡುಗೆ ನೀಡಲಿದೆ ಎಂದು  ಆಶಿಸಿದರು.ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಬಿ. ರಾಘವೇಂದ್ರ ಪೈ ಅವರು ಕೊಂಚಾಡಿ ಗಣಪತಿ ಶೆಣೈ ಅವರು ನೀಡಿದ ಸಮವಸ್ತ್ರವನ್ನು ಮಕ್ಕಳಿಗೆ ವಿತರಿಸಿದರು. ಈ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿ ತೇರ್ಗಡೆಯಾದ ಶಾಲೆಯ ಹಳೆ ವಿದ್ಯಾರ್ಥಿಗಳಾದ ಸ್ನೇಹಾ ಗಾಣಿಗ ಮತ್ತು ಅಖಿಲೇಶ್ ಖಾರ್ವಿ ಅವರಿಗೆ ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸ ಲಾಯಿತು. ಶಾಲೆಗೆ ಎರಡು ಕಂಪ್ಯೂಟರ್ ನೀಡಲಾಯಿತು.

ಮುಖ್ಯೋಪಾಧ್ಯಾಯಿನಿ ಸುಜಾತಾ ಕೆ. ಸ್ವಾಗತಿಸಿ, ಸಹಶಿಕ್ಷಕ ಶಶಿಶಂಕರ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಉಮೇಶ ನಿರೂಪಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ವೈ. ಶ್ರೀನಿವಾಸ ಖಾರ್ವಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ ಖಾರ್ವಿ, ಸಮೂಹ ಸಂಪನ್ಮೂಲ ವ್ಯಕ್ತಿ ತಿಲೋತ್ತಮಾ, ರವೀಶ ಪೂಜಾರಿ ತೊಂಬಟ್ಟು, ನಾಗಪ್ಪ ಕಾನೋಜಿ, ದಿವಾಕರ ಖಾರ್ವಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ಖಾರ್ವಿ, ಯುವ ಕಲರವ ಸಂಸ್ಥೆಯ ಅಧ್ಯಕ್ಷ ರವಿಶಂಕರ ಖಾರ್ವಿ, ಕಾರ್ಯದರ್ಶಿ ನಾಗರಾಜ ಖಾರ್ವಿ ಕೊಲ್ಲೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.