ADVERTISEMENT

ತನುಜಾ ಭವಿಷ್ಯಕ್ಕೆ ಬೆಳಕಾದ ಉಚಿತ ವೈಫೈ

ಸಂಧ್ಯಾ ಹೆಗಡೆ
Published 14 ಮೇ 2017, 10:00 IST
Last Updated 14 ಮೇ 2017, 10:00 IST

ಶಿರಸಿ: ಬ್ಯಾಂಕ್ ನೀಡಿದ ಉಚಿತ ವೈಫೈ ಸೌಲಭ್ಯವು ಕೃಷಿ ಕೂಲಿ ಕಾರ್ಮಿಕ ಕುಟುಂಬದ ವಿದ್ಯಾರ್ಥಿನಿಯೊಬ್ಬರ ಭವಿ ಷ್ಯಕ್ಕೆ ಬೆಳಕಾಗಿದೆ. ಈ ಸೌಲಭ್ಯ ಸದ್ಬಳಕೆ ಮಾಡಿಕೊಂಡ ತನುಜಾ ಪಟಗಾರ, ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗ ದಲ್ಲಿ ಶೇ 91.3ರಷ್ಟು ಅಂಕ ಪಡೆದಿದ್ದಾರೆ.

ಸಿದ್ದಾಪುರ ತಾಲ್ಲೂಕು ಕಾನಸೂರಿನ ಸರಸ್ವತಿ ಮತ್ತು ರಾಮಚಂದ್ರ ಪಟಗಾರ ದಂಪತಿಗೆ ನಾಲ್ವರು ಹೆಣ್ಣುಮಕ್ಕಳು. ಎರಡನೇ ಮಗಳು ತನುಜಾ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ (ಭೌತ ವಿಜ್ಞಾನ 93, ರಸಾಯನ ವಿಜ್ಞಾನ– 90, ಗಣಿತ  86, ಜೀವ ವಿಜ್ಞಾನ 91, ಇಂಗ್ಲಿ ಷ್ 90, ಸಂಸ್ಕೃತ  98) ಉತ್ತಮ ಸಾಧನೆ ಮಾಡಿ ದ್ದಾರೆ.

‘ಬಸ್‌ ಪಾಸ್ ಮಾಡಿಸಿಕೊಂಡು ನಿತ್ಯವೂ ಕಾನಸೂರಿ ನಿಂದ ಶಿರಸಿಯ ಮಾರಿಕಾಂಬಾ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬರುತ್ತಿದ್ದೆ. ಆಯಾ ದಿನದ ಪಾಠವನ್ನು ಅಂದೇ ಓದಿ ಕೊಳ್ಳುತ್ತಿದ್ದೆ. ನನಗೆ ಟ್ಯೂಷನ್ ಕೊಡಿ ಸಲು, ಕೂಲಿ ಮಾಡಿ ಜೀವನ ನಡೆಸುವ ಅಪ್ಪ– ಅಮ್ಮನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ನಾನೇ ಪರಿಶ್ರಮ ಪಟ್ಟು ಓದಿದೆ’ ಎಂದು ತನುಜಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಮ್ಮ ಹಳ್ಳಿಯಲ್ಲಿರುವ ವಿಜಯಾ ಬ್ಯಾಂಕ್ ನಿಗದಿತ ಅವಧಿಯ ಉಚಿತ ವೈಫೈ ಸೌಲಭ್ಯ ನೀಡುತ್ತದೆ. ಇದನ್ನು ಬಳಸಿಕೊಂಡು ಹಳೆಯ ಪ್ರಶ್ನೆ ಪತ್ರಿಕೆ ಯನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದೆ. ಸಿಇಟಿಯ ವಿಕಸನ ಕಾರ್ಯಕ್ರಮವನ್ನು ಯೂ ಟ್ಯೂಬ್‌ನಲ್ಲಿ ನೋಡುತ್ತಿದ್ದೆ. ಹೆಚ್ಚು ಅಂಕ ಗಳಿಸಲು ಇದು ಸಹಕಾರಿಯಾಯಿತು’ ಎಂದರು.

‘ಅಕ್ಕ ಬಿ.ಕಾಂ, ಒಬ್ಬ ತಂಗಿ ದ್ವಿತೀಯ ಪಿಯುಸಿ, ಇನ್ನೊಬ್ಬಳು 9ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಎಲ್ಲರ ಶಿಕ್ಷಣದ ವೆಚ್ಚವನ್ನು ಭರಿಸಲು ಅಪ್ಪನಿಗೆ ಕಷ್ಟ. ಅದಕ್ಕೆ ಸಾಧ್ಯವಾದಷ್ಟು ವಿದ್ಯಾರ್ಥಿ ವೇತನದ ಹಣದಲ್ಲಿಯೇ ನನ್ನ ಶೈಕ್ಷಣಿಕ ವೆಚ್ಚ ಪೂರೈಸಿಕೊಂಡಿದ್ದೇನೆ’ ಎನ್ನುವ ಅವರು, ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿ ‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ ಪರಿಹಾರ ನಿಧಿಯಿಂದ ನೆರವು ಪಡೆದಿ ದ್ದನ್ನು ನೆನಪಿಸಿಕೊಂಡರು.

‘ಡಿಜಿಟಲ್ ವಿಲೇಜ್ ಯೋಜನೆ ಅಡಿ ಯಲ್ಲಿ ವಿಜಯಾ ಬ್ಯಾಂಕಿನ ಕಾನಸೂರು ಶಾಖೆಯು ಆರು ತಿಂಗಳುಗಳಿಂದ ದಿನಕ್ಕೆ ಎರಡು ತಾಸು ಉಚಿತ ವೈಫೈ ಸೌಲಭ್ಯ ನೀಡುತ್ತಿದೆ. ಗ್ರಾಮೀಣ ಜನರಿಗೆ ಡಿಜಿಟಲ್ ತಂತ್ರಜ್ಞಾನ ಪರಿಚಯಿಸುವ ಆಶಯ ದಿಂದ ಅಳವಡಿಸಿದ್ದ ಉಚಿತ ಸೌಕರ್ಯ ವಿದ್ಯಾರ್ಥಿನಿಯ ಭವಿಷ್ಯಕ್ಕೆ ಸಹಾಯ ವಾಗಿದೆ’ ಎಂದು ಶಾಖೆಯ ವ್ಯವಸ್ಥಾಪಕ ಆನಂದ ಕೊಂಡ್ಲಿ ಹೇಳಿ ದರು.  ಶಿಕ್ಷಣಕ್ಕೆ ನೆರವಾಗ ಬಯ ಸುವ ವರು  73492 04311 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.