ADVERTISEMENT

62 ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆ

ಇಂದು ನಾಮಪತ್ರ ಪರಿಶೀಲನೆ; ಕಾವೇರಿದ ವಿಧಾನಸಭಾ ಚುನಾವಣಾ ಕಣ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 9:42 IST
Last Updated 25 ಏಪ್ರಿಲ್ 2018, 9:42 IST
62 ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆ
62 ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆ   

ಕಾರವಾರ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದ್ದು, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 62 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಅವುಗಳ ಪರಿಶೀಲನೆಯು ಇದೇ 25ರಂದು ನಡೆಯಲಿದೆ.

ಕುಮಟಾ ಕ್ಷೇತ್ರದಲ್ಲಿ 14 ನಾಮಪತ್ರಗಳು ಸಲ್ಲಿಕೆಯಾಗಿದ್ದರೆ, ಶಿರಸಿಯಲ್ಲಿ 8 ಉಮೇದುವಾರರು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹಳಿಯಾಳದಲ್ಲಿ 11, ಯಲ್ಲಾಪುರ ಹಾಗೂ ಭಟ್ಕಳದಲ್ಲಿ 10, ಕಾರವಾರದಲ್ಲಿ 9 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಸಿದವರ ಕ್ಷೇತ್ರವಾರು ಮಾಹಿತಿ; ಕಾರವಾರ: ಸತೀಶ ಸೈಲ್ (ಕಾಂಗ್ರೆಸ್), ರೂಪಾಲಿ ನಾಯ್ಕ (ಬಿಜೆಪಿ), ಮಾಧವ ನಾಯಕ (ಎನ್‌ಸಿಪಿ), ಆನಂದ ಅಸ್ನೋಟಿಕರ್ (ಜೆಡಿಎಸ್), ಕುಂದಾಬಾಯಿ ಪಾರುಲೇಕರ್ (ಪಕ್ಷೇತರ), ಕಿಶೋರ ಸಾವಂತ (ಪಕ್ಷೇತರ), ರಾಜೇಶ್ ‍ಪ್ರಭಾಕರ್‌ ಖಲ್ವಾಡೇಕರ್ (ಪಕ್ಷೇತರ), ಲೀಲಾಬಾಯಿ ಠಾಣೇಕರ್ (ಪಕ್ಷೇತರ), ಸುಭಾಶ್ ವಡ್ಡರ್ (ಪಕ್ಷೇತರ).

ADVERTISEMENT

ಕುಮಟಾ: ದಿನಕರ ಶೆಟ್ಟಿ (ಬಿಜೆಪಿ), ಶಾರದಾ ಮೋಹನ ಶೆಟ್ಟಿ (ಕಾಂಗ್ರೆಸ್), ಪ್ರದೀಪ ನಾಯಕ (ಜೆಡಿಎಸ್), ಯಶೋಧರ ನಾಯ್ಕ (ಪಕ್ಷೇತರ), ಸೂರಜ ನಾಯ್ಕ ಸೋನಿ (ಪಕ್ಷೇತರ), ಸುಮನಾ ಹೆಗಡೆ (ಪಕ್ಷೇತರ), ನಾಗರಾಜ ಶ್ರೀಧರ ಶೇಟ್ (ಆರ್‌ಜೆಪಿ), ನಾಗರಾಜ ನಾಗೇಶ ನಾಯ್ಕ (ಎಂಇಪಿ), ಕೃಷ್ಣ ಗೌಡ ಪಕ್ಷೇತರ, ಪ್ರಶಾಂತ ಶಂಕರ ನಾಯ್ಕ (ಪಕ್ಷೇತರ), ಮೋಹನ ಪಟಗಾರ (ಐಎನ್‌ಸಿಪಿ), ನಾರಾಯಣ ಗಣಪತಿ ನಾಯ್ಕ (ಪಕ್ಷೇತರ), ರಾಜು ನಾರಾಯಣ ತಾಂಡೇಲ್ (ಪಕ್ಷೇತರ), ಗಣೇಶ ಗೌಡ (ಪಕ್ಷೇತರ).

ಭಟ್ಕಳ: ಮಂಕಾಳ ವೈದ್ಯ (ಕಾಂಗ್ರೆಸ್), ಸುನೀಲ್ ನಾಯ್ಕ (ಬಿಜೆಪಿ), ಎಸ್.ಎಂ.ಅಂಜದ್ (ಜೆಡಿಎಸ್), ಮಹಮ್ಮದ್ ಜಬರೂದ್ ಖತೀಬ್ (ಪಕ್ಷೇತರ), ಈರಾ ನಾಯ್ಕ (ಪಕ್ಷೇತರ), ಜಯಂತ ನಾಯ್ಕ (ಶಿವಸೇನಾ), ಗಫೂರ್ ಸಾಬ್ (ಎಂಇಪಿ), ಅಬ್ದುಲ್ ರೆಹಮಾನ್ ಟೊಂಕಾ (ಪಕ್ಷೇತರ), ಪ್ರಕಾಶ ಪಿಂಟೋ (ಪಕ್ಷೇತರ), ರಾಜೇಶ ನಾಯ್ಕ (ಪಕ್ಷೇತರ).

ಶಿರಸಿ: ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ), ಭೀಮಣ್ಣ ನಾಯ್ಕ (ಕಾಂಗ್ರೆಸ್), ಡಾ.ಶಶಿಭೂಷಣ ಹೆಗಡೆ (ಜೆಡಿಎಸ್), ಫಯಾಝ್ ಮದರ್‌ಸಾಬ್ ಚೌಟಿ (ಪಕ್ಷೇತರ), ಬಿ.ಜಿ.ಕುಬೇರ (ಭಾರತೀಯ ಬಹುಜನ ಕ್ರಾಂತಿ ದಳ), ರಮಾನಂದ ನಾಯಕ (ಪಕ್ಷೇತರ), ಅಣ್ಣಪ್ಪ ಶಿವರಾಂ ಕಡಕೇರ (ಶಿವಸೇನೆ), ಅಬ್ದುಲ್ ರಜಾಖ್ ಶೇಖ್ (ಎಂಇಪಿ).

ಹಳಿಯಾಳ: ಸುನೀಲ್ ಹೆಗಡೆ (ಬಿಜೆಪಿ), ಆರ್.ವಿ.ದೇಶಪಾಂಡೆ (ಕಾಂಗ್ರೆಸ್), ಕೆ.ಆರ್.ರಮೇಶ (ಜೆಡಿಎಸ್), ಯಮುನಾ ಗಾಂವಕರ (ಸಿಪಿಐಎಂ), ಟಿ.ಆರ್.ಚಂದ್ರಶೇಖರ (ಪಕ್ಷೇತರ), ರಾಜಶೇಖರ ಬೆಳ್ಳಿಗಟ್ಟಿ (ಪಕ್ಷೇತರ), ಜಹಾಂಗೀರ್ ಬಾಬಾ ಖಾನ್ (ಎಐಎಂಇಪಿ), ಸುವರ್ಣಾ ಹೆಗಡೆ (ಬಿಜೆಪಿ), ಶಂಕರ ಬಸವಂತ ಫಾಕ್ರಿ (ಶಿವಸೇನೆ), ಎಲಿಯಾ ಎಸೆಫ್ ಕಟಿ (ಪಕ್ಷೇತರ), ಕಕ್ಕೇರಿ ಬಡೇಸಾಬ್ ಹುಸೇನ್ ಸಾಬ್ (ಎಂಇಪಿ).

ಯಲ್ಲಾಪುರ: ಶಿವರಾಮ ಹೆಬ್ಬಾರ (ಕಾಂಗ್ರೆಸ್), ವಿ.ಎಸ್.ಪಾಟೀಲ್ (ಬಿಜೆಪಿ), ರವೀಂದ್ರನಾಥ ನಾಯ್ಕ (ಜೆಡಿಎಸ್), ಮೆಹಬೂಬ್ ಅಲಿ ಜಮಖಂಡಿ (ಪಕ್ಷೇತರ), ಸಚಿನ್ ನಾಯ್ಕ ಚಿಂತಾಮಣಿ (ಶಿವಸೇನೆ), ಸಂತೋಷ ಮಂಜುನಾಥ ರಾಯ್ಕರ್ (ಪಕ್ಷೇತರ), ಲಕ್ಷ್ಮಣ ಬನ್ಸೋಡೆ (ಪಕ್ಷೇತರ), ನಾಗೇಶ ಭೋವಿವಡ್ಡರ್ (ಪಕ್ಷೇತರ), ನೀಲಪ್ಪ ಲಮಾಣಿ (ಭಾರತೀಯ ಬಹುಜನ ಕ್ರಾಂತಿದಳ), ಗಡವಾಲೆ ಮಹಮ್ಮದ್ ಉಮರ್ (ಪಕ್ಷೇತರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.